ಸಿದ್ದಾಪುರ, ಮೇ ೨೩: ಮಾಲ್ದಾರೆ ಅರಣ್ಯದ ಅಂಚಿನಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ವಾಹನದಲ್ಲಿ ತೆರಳುತ್ತಿದ್ದ ಯುವಕರು ಹುಲಿಯ ವೀಡಿಯೋ ಸೆರೆ ಹಿಡಿದಿದ್ದಾರೆ.
ಭಾನುವಾರ ತಡರಾತ್ರಿ ವೇಳೆ ಮಾಲ್ದಾರೆ ಅರಣ್ಯದ ಮೂಲಕ ಸಿದ್ದಾಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಯುವಕರಿಗೆ ಮಾಲ್ದಾರೆ ಅರಣ್ಯದ ಅಂಚಿನಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಕೂಡಲೇ ಕಾರು ನಿಲ್ಲಿಸಿದ ಯುವಕರು ಹುಲಿಯ ವೀಡಿಯೋ ಸೆರೆಹಿಡಿದಿದ್ದಾರೆ. ಅರಣ್ಯದ ಅಂಚಿನ ಹಾಡಿ ಹಾಗೂ ಗ್ರಾಮಗಳಲ್ಲಿ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಕೊಲ್ಲುತ್ತಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಹಲವು ಬಾರಿ ಬೋನು ಅಳವಡಿಸಿದ್ದರೂ ಹುಲಿ ಮಾತ್ರ ಸೆರೆಗೆ ಸಿಕ್ಕಿರಲಿಲ್ಲ. ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯದಂಚಿನ ಗ್ರಾಮಗಳ ಜನರು ಭಯಭೀತರಾಗಿದ್ದಾರೆ.