ಮಡಿಕೇರಿ, ಮೇ ೨೩: ಇಲ್ಲಿಗೆ ಸನಿಹದ ಮುತ್ತಾರ್ಮುಡಿ ಗ್ರಾಮದ ಶ್ರೀ ಭದ್ರಕಾಳಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತಾ. ೨೫ ರಿಂದ ೨೭ರವರೆಗೆ ನಡೆಯಲಿದೆ.

ಕುಂಟಾರ್ ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ರವೀಶ ತಂತ್ರಿಗಳ ನೇತೃತ್ವದಲ್ಲಿ ತಾ. ೨೫ ರಂದು ಸಂಜೆ ೬ ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹವಾಚನೆ, ಪ್ರಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಂತ ನಡೆಯಲಿದೆ. ತಾ. ೨೬ ರಂದು ಬೆಳಿಗ್ಗೆ ೫ ರಿಂದ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಶಾಂತಿಹೋಮ, ತತ್ವಹೋಮ, ತತ್ವಕಲಶ ಪೂಜೆ, ಕುಂಬೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ ೬ ರಿಂದ ಧ್ಯಾನಾದಿವಾಸ, ಅಧಿವಾಸಹೋಮ, ಪರಿಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಮಹಾಪೂಜೆ ನೆರವೇರಲಿದೆ.

ತಾ. ೨೭ ರಂದು ಬೆಳಿಗ್ಗೆ ೫ ರಿಂದ ಗಣಪತಿ ಹೋಮ, ಪ್ರತಿಷ್ಠಾಪನೆ, ೮.೩೦ ರಿಂದ ೯.೩೪ರ ಮಿಥುನ ಲಗ್ನದಲ್ಲಿ ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ತಾ. ೨೬ ರಂದು ಸಂಜೆ ೫ ಗಂಟೆಗೆ ರವೀಶ್ ತಂತ್ರಿಗಳಿAದ ಧಾರ್ಮಿಕ ಉಪನ್ಯಾಸ ಕಾರ್ಯ ಇರುತ್ತದೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.