ಗೋಣಿಕೊಪ್ಪಲು, ಮೇ ೨೩: ಗುತ್ತಿಗೆದಾರರು ಮಾಡಿದ ಕಳಪೆ ಕಾಮಗಾರಿಯಿಂದಾಗಿ ಸುಮಾರು ರೂ. ೪೦ ಲಕ್ಷ ವೆಚ್ಚದ ಕಾಲುವೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಚ್ಚಿ ಹೋಗಿದ್ದು, ಆಕ್ರೊಶಗೊಂಡ ಗ್ರಾಮಸ್ಥರು ಕಳಪೆ ಕಾಮಗಾರಿ ವಿರುದ್ಧ ಸಂಬAಧಪಟ್ಟ ಇಂಜಿನಿಯರ್ ಮೇಲೆ ಪೊಲೀಸ್ ದೂರು ನೀಡಿ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಒತ್ತಾಯಿಸಿದ ಪ್ರಸಂಗ ಪೊನ್ನಂಪೇಟೆಯಲ್ಲಿ ನಡೆದಿದೆ.
ರೈತರ ಜಮೀನುಗಳಲ್ಲಿ ಹಾದು ಹೋಗಿರುವ ಕೈತೋಡುಗಳನ್ನು ಕಾಲುವೆಯನ್ನಾಗಿ ಪರಿವರ್ತಿ ಸುತ್ತಿರುವ ರೂ. ೪೦ ಲಕ್ಷ ವೆಚ್ಚದ ಕಾಮಗಾರಿ ನಡೆಯುತ್ತಿದ್ದ ವೇಳೆ ಅದು ಬದಿಯಿಂದ ಕುಸಿದು ಹೋಗುತ್ತಿರು ವುದನ್ನು ಕಂಡು ಆ ಭಾಗದÀ ಗ್ರಾಮಸ್ಥರು ನಾಗರಿಕರ ತೆರಿಗೆಯ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದನ್ನು ಖಂಡಿಸಿ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿ ಕಳಪೆ ಕಾಮಗಾರಿಯನ್ನು ಖಂಡಿಸಿದ ಅಪರೂಪದ ಪ್ರಸಂಗ ಎದುರಾಯಿತು.
ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಲ್ಲೂರು ಗ್ರಾಮದಲ್ಲಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕೆಂಬ ಮಹತ್ವಕಾಂಕ್ಷೆ ಯಿಂದ ಕಳೆದ ೩ ತಿಂಗಳಿAದ ಕಾಲುವೆಗಳನ್ನು ನಿರ್ಮಿಸುವ ಕಾಮಗಾರಿ ಆರಂಭಗೊAಡಿತ್ತು. ಈ ಬಾರಿ ಸುರಿದ ಮಳೆಗೆ ಭತ್ತದ ಗದ್ದೆಯ ಬದಿಯಲ್ಲಿ ಕಟ್ಟಲಾಗಿದ್ದ ಕಾಲುವೆಯು ಕಳಪೆ ಮಟ್ಟದ್ದಾಗಿದ್ದ ರಿಂದ ಕುಸಿದುಬಿದ್ದಿದೆ.
(ಮೊದಲ ಪುಟದಿಂದ) ಕೀರೆ ಹೊಳೆಯು ಬೆಸಗೂರಿನ ಬಳಿ ಇರುವ ಲಕ್ಷö್ಮಣತೀರ್ಥ ನದಿಯನ್ನು ಸೇರುತ್ತಿದ್ದು, ಮುಂದೆ ಕಾವೇರಿ ನದಿಯನ್ನು ಸೇರುತ್ತದೆ. ನೀರನ್ನು ಕೊಡಗಿನ ರೈತರ ಭೂಮಿಗೆ ಒದಗಿಸುವ ಚಿಂತನೆಯಿAದ ಸರ್ಕಾರವು ಈ ಯೋಜನೆಯನ್ನು ಮಂಜೂರು ಮಾಡಿತ್ತು. ರೈತರ ಜಮೀನುಗಳ ಮಧ್ಯೆ ಹರಿಯುವ ಕೈ ತೋಡನ್ನು ಕಾಲುವೆಗಳನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ರೈತರ ಜಮೀನುಗಳಿಗೆ ನೀರು ಪೂರೈಸುವ ಗುರಿ ಇದಾಗಿತ್ತು. ಸುಮಾರು ೩೩೬ ಮೀ. ಉದ್ದದ ಈ ಕಾಲುವೆ ಕಾಮಗಾರಿಯನ್ನು ವಿವಿಧ ಹಂತದಲ್ಲಿ ಗುತ್ತಿಗೆ ನೀಡಲಾಗಿತ್ತು.
ಇದು ರೈತರ ಜಮೀನುಗಳಿಗೆ ಅಗತ್ಯವಾಗಿರುವ ಕಾಲುವೆಯ ಕಾಮಗಾರಿಯಾದರೂ ಇಂತಹದೊAದು ಯೋಜನೆ ಯಾವಾಗ ಸಿದ್ಧವಾಯಿತು ಎನ್ನುವುದು ಇಲ್ಲಿಯ ಗ್ರಾಮಸ್ಥರಿಗೆ ಅರಿವಿಲ್ಲದಾಗಿದೆ.
ಈ ಯೋಜನೆ ನಾಗರಿಕರಿಗೆ ಹಾಗೂ ಇಲ್ಲಿನ ಗ್ರಾಮಸ್ಥರಿಗೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ನೈಸರ್ಗಿಕವಾಗಿ ಕೈ ತೋಡುಗಳಿಂದ ರೈತರಿಗೆ ಯಾವುದೇ ತೊಂದರೆ ಕಂಡು ಬಂದಿರಲಿಲ್ಲ. ಸ್ವಾಭಾವಿಕವಾಗಿ ನೀರು ಸರಾಗವಾಗಿಯೇ ಯಾವುದೇ ಭೂಮಿಗೆ ತೊಂದರೆ ಆಗದಂತೆ ಹರಿಯುತ್ತಿತ್ತು. ಆದರೆ ಅನಗತ್ಯವಾಗಿ ಈ ಯೋಜನೆಯನ್ನು ಮಾಡಿದ ನಂತರ ಇದೀಗ ತೋಡಿನ ಅಕ್ಕಪಕ್ಕದ ಭತ್ತದ ಗದ್ದೆಯ ರೈತರಿಗೆ ಸಮಸ್ಯೆ ಎದುರಾಗಿದೆ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಕೀರೆಹೊಳೆ ದಂಡೆಯಲ್ಲಿ ಅಪಾರ ಪ್ರಮಾಣದ ಮರಳು ಇದ್ದರೂ ಕಳಪೆ ದರ್ಜೆಯ ಎಂ.ಸ್ಯಾAಡ್ ಮತ್ತು ಸಿಮೆಂಟ್ ಬಳಸಿ ಕಾಮಗಾರಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿಯೇ ಕಾಲುವೆ ಗೋಡೆಗಳು ಕುಸಿದು ಬೀಳಲು ಕಾರಣವಾಗಿದೆ.
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರಾದ ಪುಳ್ಳಂಗಡ ವಿವೇಕ್, ತೀತರಮಾಡ ಬೋಸ್, ಚೆಟ್ರುಮಾಡ ಮಿತ್ರ ಕಾರ್ಯಪ್ಪ, ಮಲ್ಚೀರ ಅನಿಲ್, ಮಲ್ಚೀರ ಗಿರೀಶ್, ಕೊಕ್ಕಲೆಮಾಡ ರಾಜ, ತೀತರಮಾಡ ಜಿತೇಂದ್ರ, ಲತೇಶ್, ಚಾಕೂ, ಸುಳ್ಳೇರ ಆಶಾ, ಸುಳ್ಳೇರ ಮಾಚಯ್ಯ, ಸೋಮಣ್ಣ ಹಾಗೂ ಗ್ರಾಮಸ್ಥರು ಸಂಬAಧಪಟ್ಟ ಇಂಜಿನಿಯರ್ ಮೇಲೆ ದೂರು ಸಲ್ಲಿಸಿ ಇಂಜಿನಿಯರ್ ಅನ್ನು ಠಾಣೆಗೆ ಕರೆಸಿ ಗ್ರಾಮದಲ್ಲಿ ರೈತರ ಹೆಸರಿನಲ್ಲಿ ಈ ರೀತಿಯ ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಎಂ.ಐ.ಡಿ. ಇಂಜಿನಿಯರ್ ಈ ಬಗ್ಗೆ ಮಾಹಿತಿ ನೀಡಿ ಕೆಲವು ಗುತ್ತಿಗೆದಾರರಿಂದ ಈ ರೀತಿಯ ಸಮಸ್ಯೆ ಎದುರಾಗಿದೆ. ಇವರಿಗೆ ಯಾವುದೇ ರೀತಿಯ ಹಣ ಮಂಜೂರು ಮಾಡುವುದಿಲ್ಲ, ಕಾಮಗಾರಿಯನ್ನು ಗುಣಮಟ್ಟದಿಂದ ಪೂರೈಸಿ ರೈತರಿಗೆ ಅನುಕೂಲವಾಗಲು ಕಾಲುವೆ ನಿರ್ಮಿಸುವುದಾಗಿ ಠಾಣಾಧಿಕಾರಿಯ ಮುಂದೆ ಗ್ರಾಮಸ್ಥರಿಗೆ ಭರವಸೆ ನೀಡಿದರು. ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೂಡಲೇ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೆತ್ತಿಕೊಳ್ಳದಿದ್ದಲ್ಲಿ ಮುಂದಿನ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
-ಹೆಚ್.ಕೆ. ಜಗದೀಶ್