ಮಡಿಕೇರಿ, ಮೇ ೨೩: ಆರೋಗ್ಯ ಇಲಾಖಾ ವತಿಯಿಂದ ನಗರಸಭೆಯ ಕಾವೇರಿ ಕಲಾಕ್ಷೇತ್ರದಲ್ಲಿ ನಾಗರಿಕರಿಗೆ ಲಸಿಕೆ ನೀಡುತ್ತಿದ್ದು, ತಾ. ೨೫ ರಂದು ಆರೋಗ್ಯ ಇಲಾಖೆಯಿಂದ ನಾಗರಿಕರಿಗೆ ಲಸಿಕೆಯನ್ನು ಕಾವೇರಿ ಕಲಾಕ್ಷೇತ್ರದ ಬದಲಿಗೆ ಮಡಿಕೇರಿ ರೋಟರಿ ಭವನ (ಕಾಮಧೇನು ಪೆಟ್ರೋಲ್ ಬಂಕ್ ಎದುರು)ದಲ್ಲಿ ನೀಡಲಾಗುವುದು ಎಂದು ಮಡಿಕೇರಿ ತಾಲೂಕು ಆರೋಗ್ಯಧಿಕಾರಿ ತಿಳಿಸಿದ್ದಾರೆ.