ಮಡಿಕೇರಿ, ಮೇ ೨೩: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬAಧಿಸಿದAತೆ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಲು ಸೂಚಿಸಿ ಸರಕಾರ ಮಾರ್ಗಸೂಚಿ ಹೊರಡಿಸಿದೆ. ಈ ಚುನಾವಣೆಗೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿರುವ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.

ಆದರೆ ಈ ಸ್ಥಳೀಯ ಸಂಸ್ಥೆಗಳ ಸದಸ್ಯರ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯದ ಬಗ್ಗೆ ಸದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಈ ಮಾರ್ಗ ಸೂಚಿಯನ್ನು ಹೊರಡಿಸಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಸೂಚನೆ ಬಂದಿದ್ದು, ಹೊಸ ಮಾರ್ಗ ಸೂಚಿಯನ್ವಯ ಜಿಲ್ಲಾಡಳಿತ ಕ್ಷೇತ್ರ ನಿಗದಿಪಡಿಸಬೇಕಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೫, ೧೨೧, ೧೨೨, ೧೨೩, ೧೨೪, ೧೬೧, ೧೬೨, ೧೬೩, ೩೦೮ನೇ ಪ್ರಕರಣಗಳಿಗೆ ಉಲ್ಲೇಖ -೧ರ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯ ಅನುಸಾರ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಸೀಮಾ ನಿರ್ಣಯದ ಈ ಹಿಂದಿನ ಎಲ್ಲಾ ಅಧಿಸೂಚನೆಗಳು ರದ್ದಾಗಿರುತ್ತವೆ ಹಾಗೂ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳನ್ನು ಮೀಸಲಿರಿಸಿರುವ ಎಲ್ಲಾ ಅಧಿಸೂಚನೆಗಳು ರದ್ದಾಗಿರುತ್ತವೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಧಿನಿಯಮದ ಪ್ರಕರಣ ೩೦೮ಕ್ಕೆ ತಿದ್ದುಪಡಿ ತಂದಿದ್ದು, ಪ್ರಕರಣ ೩೦೮- ಇ ರಿಂದ ೩೦೮ - ಎಂ ರವರೆಗೆ ಹೊಸ ಪ್ರಕರಣಗಳನ್ನು ಅಳವಡಿಸಿದೆ. ಪ್ರಕರಣ ೩೦೮-ಇ ರನ್ವಯ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿರುತ್ತದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೧೨೨ ಮತ್ತು ೧೬೧ ಅನುಕ್ರಮವಾಗಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆಯನ್ನು ಪ್ರತಿಯೊಂದು ಜನಗಣತಿಯ ತರುವಾಯ ಜನಸಂಖ್ಯೆ ಗಳಿಗನುಗುಣವಾಗಿ ನಿರ್ಧರಿಸ ಬೇಕಾಗುತ್ತದೆ. ಇದುವರೆವಿಗೂ ರಾಜ್ಯ ಚುನಾವಣಾ ಆಯೋಗವು ಈ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಉಲ್ಲೇಖ -೧ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ ೨೦೨೧ರ ಪ್ರಕರಣ ೩೦೮(ಎಫ್) ರನ್ವಯ ಇನ್ನು ಮುಂದೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ನಿರ್ಧರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿರುತ್ತದೆ.

ಕ್ಷೇತ್ರ ವಿಂಗಡಣಾ ಕಾರ್ಯವು ಬಹಳ ಪ್ರಾಮುಖ್ಯವಾದದ್ದಾಗಿದ್ದು, ಇದನ್ನು ಪಾರದರ್ಶಕವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗು ವಂತೆ ಮಾಡುವುದು ಅವಶ್ಯಕವಾ ಗಿರುತ್ತದೆ. ಆದುದ್ದರಿಂದ ಈ ಅಧಿನಿಯಮದಡಿ ಕ್ಷೇತ್ರ ವಿಂಗಡಣಾ ಕಾರ್ಯವಿಧಾನಕ್ಕೆ ಸಂಬAಧಿಸಿದAತೆ ಮಾರ್ಗಸೂಚಿಗಳನ್ನು ಕರ್ನಾಟಕ ಪಂಚಾಯತ್

(ಮೊದಲ ಪುಟದಿಂದ) ರಾಜ್ ಸೀಮಾ ನಿರ್ಣಯ ಆಯೋಗವು ಪ್ರಕರಣ ೩೦೮ (ಜಿ) ರನ್ವಯ ರೂಪಿಸಿ ಅನುಷ್ಠಾನಗೊಳಿಸಬೇಕಾಗಿರುತ್ತದೆ.

ಭಾರತ ಸಂವಿಧಾನದ ಅನುಚ್ಛೇದ ೨೪೩-ಕೆ ಮತ್ತು ೨೪೩-ಓ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೧೨೨, ೧೨೪, ೧೬೧, ೧೬೩ ಮತ್ತು ೩೦೮, ೩೦೮-ಇ ರಿಂದ ೩೦೮- ಎಂ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯದ ಆಯೋಗವು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯಿತಿಗಳ ಪ್ರಾದೇಶಿಕ ಕ್ಷೇತ್ರಗಳ ವಿಂಗಡಣೆ ಕುರಿತು ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈಗಾಗಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರ ಸಂಖ್ಯೆಯನ್ನು ಆಯೋಗವು ನಿಗದಿಪಡಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಸದಸ್ಯರ ಸಂಖ್ಯೆಯನ್ನು ಅಂತಿಮಗೊಳಿಸಲಾಗಿದೆ.

ತಾಲೂಕು ಪಂಚಾಯಿತಿ ಮಾರ್ಗಸೂಚಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೧೨೪ರನ್ವಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಧರಿಸುವಾಗ ತಾಲೂಕಿನಲ್ಲಿರುವ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು.

ತಾಲೂಕಿನಲ್ಲಿರುವ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದೊಳಗೆ ಎಷ್ಟು ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಬಹುದೋ ಅಷ್ಟು ಕ್ಷೇತ್ರಗಳನ್ನು ಆ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯೊಳಗೆ ಅಳವಡಿಸಿ ರಚಿಸಬೇಕು. ಜಿಲ್ಲಾ ಪಂಚಾಯತ್ ಕ್ಷೇತ್ರದೊಳಗೆ ಬರುವ ಪೂರ್ಣ ಗ್ರಾಮ ಪಂಚಾಯಿತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಒಟ್ಟುಗೂಡಿಸಿ, ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿರ್ಧರಿಸಬೇಕು ಹಾಗೂ ಅದು ಸಾಧ್ಯವಾಗದಿದ್ದರೆ ಗ್ರಾಮಗಳನ್ನು ಗುಂಪು ಮಾಡುವುದು. ಗ್ರಾಮಗಳನ್ನು ಗುಂಪು ಮಾಡುವ ಸಂದರ್ಭದಲ್ಲಿ ಮೂಲ ಗ್ರಾಮವನ್ನು ವಿಭಜಿತಸತಕ್ಕದಲ್ಲ ಹಾಗೂ ಕಂದಾಯ ಗ್ರಾಮದ ದಾಖಲೆ ಗ್ರಾಮಗಳನ್ನು ಬೇರೆಯಾಗಿ ವಿಂಗಡಿಸದೆ ಕಂದಾಯ ಗ್ರಾಮದೊಂದಿಗೆ ಇರುವಂತೆ ನೋಡಿಕೊಳ್ಳತಕ್ಕದ್ದು.

ತಾಲೂಕು ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರದೊಳಗೆ ಒಟ್ಟುಗೂಡಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ. ಒಂದು ತಾಲೂಕು ಪಂಚಾಯಿತಿ ಕ್ಷೇತ್ರವು ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ವಿಭಜಿಸಿ ಸೇರಿಸತಕ್ಕದ್ದಲ್ಲ. ಪ್ರತಿಯೊಂದು ಚುನಾವಣಾ ಕ್ಷೇತ್ರಗಳ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವಿರದಂತೆ ನಿಗಾವಹಿಸತಕ್ಕದ್ದು. ಹೊಸದಾಗಿ ಕ್ಷೇತ್ರ ರಚನೆ ಮಾಡಬೇಕಾದ ಸಂದರ್ಭದಲ್ಲಿ ಮಾತ್ರ ಸದರಿ ಕ್ಷೇತ್ರಗಳಲ್ಲಿನ ಅತಿ ಹೆಚ್ಚು ಜನಸಂಖ್ಯೆಯಿರುವ ಗ್ರಾಮದ ಹೆಸರನ್ನು ಆ ಚುನಾವಣಾ ಕ್ಷೇತ್ರದ ಹೆಸರನ್ನಾಗಿ ಪರಿಗಣಿಸತಕ್ಕದ್ದು.

ಜಿಲ್ಲಾ ಪಂಚಾಯಿತಿಗೆ ಮಾರ್ಗಸೂಚಿ

ಜಿಲ್ಲಾ ಪಂಚಾಯಿತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಸೀಮೆಯನ್ನು ನಿರ್ಧರಿಸುವಾಗ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ತಾಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳನ್ನು ವಿಭಜಿಸದೆ ಪೂರ್ಣ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ, ಜಿಲ್ಲಾ ಪಂಚಾಯಿತಿಯ ಚುನಾವಣಾ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳತಕ್ಕದ್ದು.

ಈ ರೀತಿಯ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸುವ ಸಂದರ್ಭದಲ್ಲಿ ಅಕ್ಕಪಕ್ಕದ (ಭೌಗೋಳಿಕವಾಗಿ ಹೊಂದಿಕೊAಡಿರುವAತಹ) ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಬೇಕು ಹಾಗೂ ಈ ಒಗ್ಗೂಡುವಿಕೆಯಿಂದ ಉಂಟಾಗುವ ಪ್ರದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಹಾಗೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಸಂಚರಿಸುವAತಿರಬೇಕು ಮತ್ತು ಯಾವುದೇ ಅಡೆತಡೆಗಳು ಇಲ್ಲದಿರುವುದನ್ನು ಅಂದರೆ, ಬೆಟ್ಟಗುಟ್ಟ, ಅರಣ್ಯ, ಜಲಾಶಯ, ನದಿ ಮುಂತಾದ ಅಡಚಣೆಗಳು ಇಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಬೇಕು.

ಪ್ರತಿಯೊಂದು ಚುನಾವಣಾ ಕ್ಷೇತ್ರದ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವಿರದಂತೆ ನಿಗಾವಹಿಸತಕ್ಕದ್ದು. ಹೊಸದಾಗಿ ಕ್ಷೇತ್ರ ರಚನೆ ಮಾಡಬೇಕಾದ ಸಂದರ್ಭದಲ್ಲಿ ಮಾತ್ರ ಸದರಿ ಕ್ಷೇತ್ರಗಳಲ್ಲಿನ ಅತಿ ಹೆಚ್ಚು ಜನಸಂಖ್ಯೆಯಿರುವ ಗ್ರಾಮದ ಹೆಸರನ್ನು ಆ ಚುನಾವಣಾ ಕ್ಷೇತ್ರ ಹೆಸರನ್ನಾಗಿ ಪರಿಗಣಿಸತಕ್ಕದ್ದು. ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ರಚಿಸುವಾಗ ಯಾವುದೇ ತಾಲೂಕು ಪಂಚಾಯತ್ ಕ್ಷೇತ್ರವು ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಭಜನೆಯಾಗದಂತೆ ನೋಡಿಕೊಳ್ಳತಕ್ಕದ್ದು.

ಜಿಲ್ಲಾಧಿಕಾರಿಗಳ ಕರ್ತವ್ಯಗಳು

ಜಿಲ್ಲಾಧಿಕಾರಿಗಳು, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಸೀಮಾ ನಿರ್ಣಯಗಳನ್ನು ನಿಯಾಮನುಸಾರ ಕೂಲಂಕುಷವಾಗಿ ಹಾಗೂ ಸ್ಥಳೀಯವಾಗಿ ಪರಿಶೀಲಿಸಿ ಕ್ಷೇತ್ರಗಳ ಗಡಿಗಳನ್ನು ಗುರುತಿಸತಕ್ಕದ್ದು. ಗಡಿಗಳನ್ನು ಗುರುತಿಸಿದ ನಂತರ ಪ್ರಸ್ತಾವನೆಗಳನ್ನು ಆಯೋಗಕ್ಕೆ ಸಲ್ಲಿಸುವ ಪೂರ್ವದಲ್ಲಿ ಒಟ್ಟು ಪ್ರಕ್ರಿಯೆಯ ಭಾಗವಾಗಿ ಸ್ಥಳೀಯರ, ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದು, ಪರಿಶೀಲಿಸಿ ಪ್ರಸ್ತಾವನೆಗಳನ್ನು ಸಲ್ಲಿಸತಕ್ಕದ್ದು.

ಹೊಸದಾಗಿ ರಚಿಸುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳ ಹೆಸರನ್ನು ನಿಗದಿಪಡಿಸುವಾಗ ಅತೀ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನಲ್ಲದೇ, ಐತಿಹಾಸಿಕ, ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ ಇತ್ಯಾದಿ ಮಹತ್ವವಿರುವ ಗ್ರಾಮದ ಹೆಸರನ್ನು ಪರಿಗಣಿಸತಕ್ಕದ್ದು, ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸುವಾಗ ಪ್ರಸ್ತಾವನೆಗೊಳಪಡುವ ಕ್ಷೇತ್ರಗಳನ್ನು ನಕ್ಷೆಗಳೊಂದಿಗೆ ಕಳುಹಿಸಿಕೊಡತಕ್ಕದ್ದು ಎಂಬದಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿಗಳು ಕೆ.ಬಿ. ಅಂಜನಪ್ಪ ತಾ. ೧೯ ರಂದು ಪ್ರಕಟಣೆ ಹೊರಡಿಸಿದ್ದಾರೆ.