ಮಡಿಕೇರಿ, ಮೇ ೨೩: ಇಂಡೋನೇಷಿಯಾದಲ್ಲಿ ಮೇ ೨೩ ರಿಂದ ಜೂನ್ ೧ರವರೆಗೆ ಏಷ್ಯಾಕಪ್ ಹಾಕಿ ಪಂದ್ಯಾವಳಿ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಹಾಕಿ ತಂಡವೂ ಪಾಲ್ಗೊಂಡಿದ್ದು, ತಂಡದಲ್ಲಿ ಕೊಡಗಿನ ಮೂವರು ಸೇರಿದಂತೆ ರಾಜ್ಯದಿಂದ ಒಟ್ಟು ನಾಲ್ಕು ಮಂದಿ ಇದ್ದಾರೆ. ಭಾರತೀಯ ತಂಡದ ಕೋಚ್ ಆಗಿ ವೀರಾಜಪೇಟೆಯ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರಿದ್ದು, ಆಟಗಾರರಾಗಿ ಕೊಡಗಿನ ಎಸ್.ವಿ. ಸುನಿಲ್, ಆಭರಣ್ ಸುದೇವ್ ಹಾಗೂ ಹಾಸನದವರಾದ ಶೇಷೇಗೌಡ ತಂಡದಲ್ಲಿದ್ದಾರೆ.

ಪ್ರಥಮ ಪಂದ್ಯ ‘ಡ್ರಾ’ದಲ್ಲಿ ಅಂತ್ಯ

ಭಾರತ ತಾ. ೨೩ ರಂದು ಪ್ರಥಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದು, ೧-೧ ಗೋಲುಗಳಿಂದ ಪಂದ್ಯ ‘ಡ್ರಾ’ದಲ್ಲಿ ಮುಕ್ತಾಯಗೊಂಡಿತು. ಭಾರತ ತಾ. ೨೪ ರಂದು (ಇಂದು) ಜಪಾನ್, ತಾ ೨೬ ರಂದು ಇಂಡೋನೇಷಿಯಾ ವಿರುದ್ಧ ಸೆಣಸಲಿದೆ.