ಮಡಿಕೇರಿ, ಮೇ ೨೩: ಶ್ರೀಮಂಗಲ ೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಹೋಗುವ ಎಫ್೧ ಕಾನೂರು ಫೀಡರ್ನಲ್ಲಿ ಕಾಡು ಕಡಿಯುವ (ಜಂಗಲ್ ಕಟ್ಟಿಂಗ್) ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೨೪ ರಂದು (ಇಂದು) ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಕಾನೂರು, ಕೋತೂರು, ನಾಲ್ಕೇರಿ, ಹರಿಹರ, ಕುಮಟೂರು, ಚೂರಿಕಾಡು ಮತ್ತು ಪಲ್ಲೇರಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.