ಮಡಿಕೇರಿ, ಮೇ ೨೨: ಯುವ ಸಂಘಗಳು ಉಪಯುಕ್ತ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿ ಯಾಗಿರಬೇಕೆಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಕೊರೊನಾ ದಿಂದ ಸಂಘ-ಸAಸ್ಥೆಗಳಲ್ಲಿ ನಡೆಯಬೇಕಾಗಿದ್ದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ರದ್ದಾಗಿದ್ದು, ಈ ಬಾರಿ ಸರಕಾರದ ಅಧೀನ ಇಲಾಖೆಯ ಕಾರ್ಯಕ್ರಮ ವನ್ನು ನಡೆಸುವಲ್ಲಿ, ಸಂಘಗಳು ತಯಾರಿ ಮಾಡಿಕೊಳ್ಳಬೇಕೆಂದು ಸುಕುಮಾರ್ ಸಲಹೆ ನೀಡಿದರು.

ಒಕ್ಕೂಟದ ಚುನಾವಣಾಧಿ ಕಾರಿಯಾಗಿ ಭಾಗವಹಿಸಿದ್ದ ಕೂಡಂಡ ಸಾಬ ಸುಬ್ರಮಣಿ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಾಗ, ಜನತೆ ನಮ್ಮನ್ನು ಗುರುತಿಸುವಂತಾಗಬೇಕು. ಅಂತಹ ಸೇವೆಯನ್ನು ಯುವಶಕ್ತಿಗಳು ಸಮಾಜದಲ್ಲಿ ನಡೆಸುವಂತಾಗ ಬೇಕೆಂದು ಹೇಳಿದರು.ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಸಲಾದ ಮಹಾಸಭೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ವಹಿಸಿದ್ದರು. ಒಕ್ಕೂಟದ ಸದಸ್ಯೆ ಕೆ.ಡಿ. ಚಂದ್ರಕಲಾ ಪ್ರಾರ್ಥಿಸಿದರು. ಯುವ ಒಕ್ಕೂಟದ ಸದಸ್ಯರಾದ ಎಂ.ಟಿ. ದಿನೇಶ್ ಸ್ವಾಗತಿಸಿದರು. ಒಕ್ಕೂಟದ ಉಪಾಧ್ಯಕ್ಷ ಮಹೇಶ್ ವಂದಿಸಿದರು.