ಮಡಿಕೇರಿ, ಮೇ ೨೨: ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿರುವ ಹಿನ್ನೆಲೆ ನಗರಸಭೆಯಿಂದ ರಾಜಕಾಲುವೆ, ತೋಡು, ಚರಂಡಿಗಳ ಶುಚಿತ್ವ ಕಾರ್ಯ ನಡೆಯುತ್ತಿದೆ.

ನಗರದಲ್ಲಿ ಪ್ರಮುಖವಾಗಿ ಹರಿಯುವ ರಾಜಕಾಲುವೆಗಳ ಹೂಳು ತೆಗೆದು, ಕಾಡು ಕಡಿದು ನೀರು ಸರಾಗವಾಗಿ ಹರಿಯುವಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದ ವರ್ಷ ಮಳೆಯಿಂದಾಗಿ ರಾಜಕಾಲುವೆ ತಟದ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಮುಂಜಾಗ್ರತಾ ಕಾಮಗಾರಿ ಕೈಗೆತ್ತ್ತಿಕೊಳ್ಳಲಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶುಚಿತ್ವ ಕಾರ್ಯ ನಡೆಯುತ್ತಿದೆ.