ಗೋಣಿಕೊಪ್ಪವರದಿ, ಮೇ. ೨೨; ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಮಿನಿ ಒಲಿಂಪಿಕ್ ಹಾಕಿಕ್ರೀಡೆಯ೧೪ ವರ್ಷದೊಳಗಿನ ವಿಭಾಗದ ಹಾಕಿಕೂರ್ಗ್ ಬಾಲಕರು ಚಿನ್ನದ ಪದಕ ಗೆದ್ದುಕೊಂಡಿದ್ದು, ಬಾಲಕಿಯರರ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಭಾನುವಾರ ಗದಗ ವಿರುದ್ಧ ೩-೦ ಗೋಲುಗಳಿಂದ ಗೆದ್ದು ಬಾಲಕರ ತಂಡ ಸಾಧನೆ ಮಾಡಿತು. ಮೇವಡ ಜಶನ್ ತಮ್ಮಯ್ಯ, ನಿಶ್ಚಿತ್, ದೀಕ್ಷಿತ್ ತಲಾ ಒಂದೊAದು ಗೋಲು ಹೊಡೆದರು. ಬಾಲಕಿಯರ ತಂಡ ಹಾಸನ ವಿರುದ್ದ ೦-೨ ಗೋಲುಗಳಿಂದ ಸೋಲುನುಭವಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.