ಮಡಿಕೇರಿ, ಮೇ ೨೨: ಕೊಡಗು ಜಿಲ್ಲೆಯಲ್ಲಿ ಕೆಪಿಎಂಇ (ಕರ್ನಾಟಕ ಪ್ರೆöÊವೇಟ್ ಮೆಡಿಕಲ್ ಎಸ್ಟಾಬ್ಲಿಸ್ ಮೆಂಟ್ ಆಕ್ಟ್(ಎಸಿಟಿ) ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಖಾಸಗಿ ವೈದ್ಯಕೀಯ ಕ್ಲಿನಿಕ್/ ನರ್ಸಿಂಗ್ ಹೋಂಗಳು ನಿಯಮ ಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ರೋಗಿಗಳು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿದಾಗ ಸಂಸ್ಥೆಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಾಯಿಸಿರುವ ಪರವಾನಿಗೆ ಪ್ರಮಾಣ ಪತ್ರವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಕೆಪಿಎಂಇ ಕಾಯ್ದೆ ಅಡಿಯಲ್ಲಿ ವೈದ್ಯರು ಹಾಗೂ ವೈದ್ಯಕೀಯೆತರ ಸಿಬ್ಬಂದಿಗಳು ಕಡ್ಡಾಯ ವಾಗಿ ಕೆಎಂಸಿ/ ಕೆಎಸ್ಎನ್ಸಿ/ ಕೆಎಸ್ಪಿಸಿ ಬೋರ್ಡ್ನಲ್ಲಿ ನೋಂದಾಯಿಸಿ ರತಕ್ಕದ್ದು. ಕೆಪಿಎಂಇ ಕಾಯ್ದೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸಾ ವಿಧಾನವನ್ನು ಪರವಾನಿಗೆ ಪಡೆದಿರುವ ಅನುಸಾರ ಚಿಕಿತ್ಸೆ ನೀಡಬೇಕು.
ಕೆಪಿಎಂಇ ಕಾಯ್ದೆ ಅಡಿಯಲ್ಲಿ ನಮೂದಿಸಿರುವ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಮಾತ್ರ ಕ್ಲಿನಿಕ್ನಲ್ಲಿ ಕಾರ್ಯನಿರ್ವಹಿಸುವುದು ಕಾಯ್ದೆ ಅಡಿಯಲ್ಲಿ ನಮೂದಿಸದೆ ಇರುವ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು.
ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನೋಂದಾಯಿತ ಏಜೆನ್ಸಿಗಳಲ್ಲಿ ವಿಲೇವಾರಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಕು ವಂತಿಲ್ಲ. ಖಾಸಗಿ ರೆಸಾರ್ಟ್ಗಳಲ್ಲಿ ಕಾರ್ಯನಿರ್ವಸುತ್ತಿರುವ ಸ್ಪಾಗಳು ಕಡ್ಡಾಯವಾಗಿ ಆಯೂಷ್ ವೈದ್ಯರನ್ನು ಹಾಗೂ ಥೆರಪಿಸ್ಟ್ಗಳನ್ನು ಹೊಂದಿ ಕೆಪಿಎಂಇ ಕಾಯ್ದೆಯಡಿಯಲ್ಲಿ ನೋಂದಾಯಿಸಿ ಕಾರ್ಯನಿರ್ವ ಹಿಸತಕ್ಕದ್ದು. ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಾಯಿಸದೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಕಂಡುಬAದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಮುಟ್ಟುಗೋಲು ಹಾಕಲಾಗುವುದು.
ಈ ಎಲ್ಲಾ ಅಂಶಗಳು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯ ವಾಗಿರುತ್ತದೆ. ಯಾವುದೇ ಸಂಸ್ಥೆಗಳು ಈ ಅಂಶವನ್ನು ಪಾಲಿಸದೇ ಇರುವುದು ಹಾಗೂ ವೈದ್ಯಕೀಯ ಶಿಕ್ಷಣ ಪಡೆಯದೇ ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಮಾಹಿತಿ ಕಂಡು ಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ದೂರವಾಣಿ ಸಂಖ್ಯೆ ೯೪೪೯೮೪೩೦೫೮ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.