ಮಡಿಕೇರಿ, ಮೇ ೨೨: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಕ್ರಿಕೆಟ್ ಪಂದ್ಯಾವಳಿ ನಿರ್ಣಾಯಕ ಹಂತದತ್ತ ಸಾಗಿದೆ. ವಿವಿಧ ಫ್ರಾಂಚೈಸಿಗಳಲ್ಲಿ ಹಲವು ಹೊಸ ಆಟಗಾರರು ಗುರುತಿಸಿಕೊಂಡಿದ್ದು, ಭವಿಷ್ಯದ ತಾರೆಗಳಾಗುವ ಸಾಧ್ಯತೆಯಿದೆ. ಇವರಲ್ಲಿ ಜಿಲ್ಲೆಯ ಓರ್ವ ಯುವಕ ಕೂಡ ಹೊಸ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಸನ್‌ರೈರ‍್ಸ್ ಹೈದರಾಬಾದ್ (Sಖಊ) ತಂಡದಲ್ಲಿ ಕೊಡಗಿನ ಬೆಕ್ಕೆಸೊಡ್ಲೂರುವಿನ ಯುವಕ ಮಚ್ಚಾಮಾಡ ಆರ್ಯನ್ ಕಾರ್ಯಪ್ಪ ಹೊಸ ಪ್ರತಿಭೆಯಾಗಿ ಗಮನ ಸೆಳೆದಿದ್ದಾರೆ.

ಆರ್ಯನ್ ತಂಡಕ್ಕೆ ಈ ಬಾರಿ ಆಡದಿದ್ದರೂ, ‘ನೆಟ್‌ಕಮ್ ಬಡ್ಡಿಂಗ್ ಬೌಲರ್’ ಆಗಿ ತಂಡದೊAದಿಗಿದ್ದಾರೆ. ವೇಗದ ಬೌಲರ್ ಆಗಿರುವ ಆರ್ಯನ್ ಮಾಜಿ ಹಾಕಿ ಆಟಗಾರ ಮಚ್ಚಾಮಾಡ ಶ್ಯಾಮ್ ಕಾರ್ಯಪ್ಪ ಅವರ ಪುತ್ರ. ದ್ವಿತೀಯ ಪದವಿ ಓದುತ್ತಿರುವ ಇವರು ಹೈದರಾಬಾದ್ ಪರ ೧೪ ವರ್ಷ ಹಾಗೂ ೧೬ ವಯೋಮಿತಿಯ ತಂಡದಲ್ಲಿ ಆಡಿದ್ದಾರೆ. ೨೦೧೭ರಲ್ಲಿ ಶ್ರೀಲಂಕಾ ಪ್ರವಾಸದಲ್ಲೂ ಭಾಗಿಯಾಗಿದ್ದರು. ತೆಲಂಗಾಣ ಪರ ಎಸ್.ಜಿ.ಎಫ್. ನ್ಯಾಷನಲ್ ಗೇಮ್ಸ್ನಲ್ಲೂ ಆರ್ಯನ್ ಪಾಲ್ಗೊಂಡಿದ್ದರು. ಈ ಸಾಧನೆಗಳ ಮೂಲಕ ಗಮನ ಸೆಳೆದಿರುವ ಆರ್ಯನ್ ಪ್ರಸ್ತುತದ ಐ.ಪಿ.ಎಲ್.ನಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ನಿರೀಕ್ಷೆ ಮೂಡಿಸಿದ್ದಾರೆ.

-ಶಶಿ