ಸೋಮವಾರಪೇಟೆ, ಮೇ ೨೦: ದೇವಿಯ ಸಾನ್ನಿಧ್ಯದೊಂದಿಗೆ ಹಿಂದೆ ಋಷಿಮುನಿಗಳು ತಪಸ್ಸು ಮಾಡಿ ದೈವೀ ಶಕ್ತಿಯನ್ನು ಒಲಿಸಿಕೊಂಡು ಆ ಶಕ್ತಿಯನ್ನು ಇಲ್ಲೇ ಬಿಟ್ಟು ಹೋಗಿರುವ ಐತಿಹಾಸಿಕ ಪುರಾಣೇತಿಹಾಸ ಹೊಂದಿರುವ ಪಟ್ಟಣದ ಶ್ರೀಮುತ್ತಪ್ಪ, ಅಯ್ಯಪ್ಪ ಹಾಗೂ ಭುವನೇಶ್ವರಿ ದೇವಾಲ ಯದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ.
೧೨ ವರ್ಷಗಳಿಗೊಮ್ಮೆ ನಡೆಯುವ ಧಾರ್ಮಿಕ ಕೈಂಕರ್ಯ ವಾಗಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. ೨೧ರಿಂದ ೨೭ರವರೆಗೆ ತಂತ್ರಿಗಳಾದ ಶ್ರೀ ನಾರಾಯಣನ್ ನಂಬೂದರಿ ಅವರ ನೇತೃತ್ವದಲ್ಲಿ ಆಯೋಜನೆ ಗೊಂಡಿದ್ದು, ದೇವಾಲಯ ಸಮಿತಿಯ ಪದಾಧಿಕಾರಿ ಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.
ತಾ. ೨೬ ರಂದು ವೃಷಭ ರಾಶಿಯ ಮುಹೂರ್ತದಲ್ಲಿ ಶ್ರೀ ಭುವನೇಶ್ವರಿ ದೇವಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಗಣಪತಿ, ನಾಗ ದೇವರುಗಳಿಗೆ ಅಷ್ಟಬಂಧ ಕಲಶಾಭಿಷೇಕ ನಡೆಯ ಲಿದ್ದು, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ತಾ. ೨೭ ರಂದು ಶ್ರೀಮುತ್ತಪ್ಪ ಸ್ವಾಮಿ, ತಿರುವಪ್ಪ, ವಿಷ್ಣುಮೂರ್ತಿ ಮತ್ತು ಪರಿವಾರ ದೇವರುಗಳಿಗೆ ಅಷ್ಟಬಂಧ ಕಲಶಾಭಿಷೇಕ ಸೋಮವಾರಪೇಟೆ, ಮೇ ೨೦: ದೇವಿಯ ಸಾನ್ನಿಧ್ಯದೊಂದಿಗೆ ಹಿಂದೆ ಋಷಿಮುನಿಗಳು ತಪಸ್ಸು ಮಾಡಿ ದೈವೀ ಶಕ್ತಿಯನ್ನು ಒಲಿಸಿಕೊಂಡು ಆ ಶಕ್ತಿಯನ್ನು ಇಲ್ಲೇ ಬಿಟ್ಟು ಹೋಗಿರುವ ಐತಿಹಾಸಿಕ ಪುರಾಣೇತಿಹಾಸ ಹೊಂದಿರುವ ಪಟ್ಟಣದ ಶ್ರೀಮುತ್ತಪ್ಪ, ಅಯ್ಯಪ್ಪ ಹಾಗೂ ಭುವನೇಶ್ವರಿ ದೇವಾಲ ಯದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ.
೧೨ ವರ್ಷಗಳಿಗೊಮ್ಮೆ ನಡೆಯುವ ಧಾರ್ಮಿಕ ಕೈಂಕರ್ಯ ವಾಗಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. ೨೧ರಿಂದ ೨೭ರವರೆಗೆ ತಂತ್ರಿಗಳಾದ ಶ್ರೀ ನಾರಾಯಣನ್ ನಂಬೂದರಿ ಅವರ ನೇತೃತ್ವದಲ್ಲಿ ಆಯೋಜನೆ ಗೊಂಡಿದ್ದು, ದೇವಾಲಯ ಸಮಿತಿಯ ಪದಾಧಿಕಾರಿ ಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.
ತಾ. ೨೬ ರಂದು ವೃಷಭ ರಾಶಿಯ ಮುಹೂರ್ತದಲ್ಲಿ ಶ್ರೀ ಭುವನೇಶ್ವರಿ ದೇವಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಗಣಪತಿ, ನಾಗ ದೇವರುಗಳಿಗೆ ಅಷ್ಟಬಂಧ ಕಲಶಾಭಿಷೇಕ ನಡೆಯ ಲಿದ್ದು, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ತಾ. ೨೭ ರಂದು ಶ್ರೀಮುತ್ತಪ್ಪ ಸ್ವಾಮಿ, ತಿರುವಪ್ಪ, ವಿಷ್ಣುಮೂರ್ತಿ ಮತ್ತು ಪರಿವಾರ ದೇವರುಗಳಿಗೆ ಅಷ್ಟಬಂಧ ಕಲಶಾಭಿಷೇಕ ಕರುಣಿಸುವ ಭಾಗ್ಯ ದೇವತೆಯಾಗಿ ತಾಯಿಯು ವರಗಳನ್ನು ನೀಡುತ್ತಿರುವುದೂ ಕೂಡ ಈ ಕ್ಷೇತ್ರದ ಮತ್ತೊಂದು ವಿಶೇಷಗಳಲ್ಲೊಂದು.
ಈ ಹಿಂದೆ ಶ್ರೀಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ಕ್ಷೇತ್ರವಾಗಿದ್ದ ಈ ದೇವಾಲಯವು ನಂತರ ದೇವಾಲಯ ಸಮಿತಿಯವರು ಕೇರಳದ ಸೋಮನ್ ಪಣ್ಣಿಕರ್ ಅವರ ಸಮ್ಮುಖದಲ್ಲಿ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಬೇಕೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ೧೯೯೯ರಲ್ಲಿ ದೈವಜ್ಞರಾದ ಮುಲ್ಲಪಳ್ಳಿ ನಾರಾಯಣ ನಂಬೂದರಿ, ಸೋಮನ್ ಪಣ್ಣಿಕರ್ ಮತ್ತು ಆಲಿಗಲ್ ಶಂಕರನ್ ಮಾಸ್ತರರ ನೇತೃತ್ವದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಭುವನೇಶ್ವರಿ ದೇವಿಯು ಪ್ರಧಾನ ದೇವತೆಯಾಗಿ ಈ ಸ್ಥಳದಲ್ಲಿ ನೆಲೆಸುವ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿಕೊಂಡು ಬರುತ್ತಿರುವುದು ತಿಳಿದುಬಂದಿದೆ.
ಅಷ್ಪಮಂಗಲ ಪ್ರಶ್ನೆಯಲ್ಲಿ ಕಂಡುಬAದAತೆ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕಾಡು ಪ್ರದೇಶದಲ್ಲಿ ದೇವಿ ಸಾನ್ನಿಧ್ಯವಿರುವುದು ಮತ್ತು ಹಿಂದೆ ಋಷಿಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿ ದೇವಿಯ ಶಕ್ತಿಯನ್ನು ಒಲಿಸಿಕೊಂಡು ಆನಂತರ ಶಕ್ತಿಯನ್ನು ಇದೇ ಸ್ಥಳದಲ್ಲಿ ಬಿಟ್ಟು ಹೋಗಿರುವ ಕುರಿತು ತಿಳಿದುಬಂದಿತ್ತು. ಅಲ್ಲದೇ ಈ ಸ್ಥಳದಲ್ಲಿ ದೇವಿಯ ಗುಡಿ ಕಟ್ಟಿದರೆ ದೇವಾಲಯದ ಸುತ್ತ ಮುತ್ತಲಿನ ಪ್ರದೇಶಗಳು ಅಭಿವೃದ್ಧಿ ಯಾಗಿ ಶಾಂತಿ, ನೆಮ್ಮದಿ ದೊರಕುತ್ತದೆ ಮತ್ತು ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನಿತ್ಯ ಅನ್ನದಾನ ನಡೆಯುವಷ್ಟು ಪಾವಿತ್ರö್ಯತೆಯನ್ನು ಹೊಂದಿದೆ ಎಂಬುದಾಗಿ ಪ್ರಶ್ನೆಯಲ್ಲಿ ತಿಳಿದು ಬಂದಿತ್ತು. ಸುಮಾರು ೧೫೦ ವರ್ಷಗಳ ಹಿಂದೆ ಫಕೀರ ಪೂಜಾರಿ ಎಂಬವರು ದೇವಾ ಲಯವನ್ನು ಕಟ್ಟಿಸಿ ಮುತ್ತಪ್ಪಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಪೂಜೆ ಆರಂಭಿಸಿದರು. ನಂತರ ಶಿಲ್ಪಿಗಳ ನೇತೃತ್ವದಲ್ಲಿ ಶ್ರೀ ಮುತ್ತಪ್ಪಸ್ವಾಮಿ, ತಿರುವಪ್ಪ, ವಿಷ್ಣು ಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣನ್, ಕರಿಂಗುಟ್ಟಿ ಶಾಸ್ತಾವು, ಗುಳಿಗ, ಪೊಟ್ಟನ್ ದೈವಗಳನ್ನು ಮತ್ತು ಭುವನೇಶ್ವರಿ ದೇವಿಯ ಮತ್ತೊಂದು ರೂಪವಾಗಿ ಭಗವತಿ ಮತ್ತು ರಕ್ತಚಾಮುಂಡಿ ದೇವಿಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಮುತ್ತಪ್ಪಸ್ವಾಮಿ ಕ್ಷೇತ್ರದ ಮೇಲಿನ ಸ್ಥಳದಲ್ಲಿ ಭುವನೇಶ್ವರಿ ದೇವಿ, ಅಯ್ಯಪ್ಪಸ್ವಾಮಿ, ಕನ್ನಿಮೂಲ ಗಣಪತಿ ಮತ್ತು ನಾಗದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ಭುವನೇಶ್ವರಿ ದೇವಿಯ ವಿಗ್ರಹ ರೂಪವು ಅಪರೂಪ ದಲ್ಲಿ ಸಿಗುವಂತಹ ಶಕ್ತಿಯುತವಾದ ವಾಲ್ ಕನ್ನಡಿ ರೂಪವಾಗಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳನ್ನು ಹರಸುತ್ತಿರುವುದು ವಿಶೇಷವಾಗಿದೆ.
ದೇವಾಲಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸುವ ಸಂದರ್ಭ ಲೋಪವಾಗದಂತೆ ಜೀವಂತ ನಾಗ ಪ್ರತ್ಯಕ್ಷನಾಗಿ ಎಚ್ಚರಿಸುವುದು ಇಲ್ಲಿನ ಮತ್ತೊಂದು ಶಕ್ತಿಗಳಲ್ಲೊಂದಾಗಿದೆ.
ವಿಶೇಷ ಪೂಜೆಗಳು: ಕ್ಷೇತ್ರದಲ್ಲಿ ನಡೆಸುವ ವಿಶೇಷ ಪೂಜೆಗಳಲ್ಲಿ ಸ್ವಯಂವರ ಪುಷ್ಪಾಂಜಲಿ ಸೇವೆಯು ಮಹತ್ತರವಾಗಿದೆ.
ಕ್ಷೇತ್ರಕ್ಕೆ ಆಗಮಿಸುವ ಅವಿವಾಹಿತ ಯುವಕ-ಯುವತಿಯರು ದೇವಿಯನ್ನು ಹರಸಿಕೊಂಡಲ್ಲಿ ಮದುವೆ ನಿಶ್ಚಯಗೊಂಡು ಯಶಸ್ವಿ ಜೀವನ ಸಾಗಿಸಬಹುದು ಎಂಬ ನಂಬಿಕೆ ಜನರಲ್ಲಿದೆ. ದೇವಾಲಯದಲ್ಲಿ ರಕ್ತ ಪುಷ್ಪಾಂಜಲಿ ಸೇವೆ ಮತ್ತು ಶತ್ರುಸಂಹಾರ ಪೂಜೆಯಿಂದ ಅನೇಕರಿಗೆ ವಿಶೇಷ ಫಲ ಲಭಿಸಿದೆ ಎಂಬ ಮಾತುಗಳು ಜನಜನಿತವಾಗಿವೆ.
ಪೂಜೆಗಳು: ಕ್ಷೇತ್ರದ ಪ್ರಧಾನ ಅರ್ಚಕರಾದ ಮಣಿಕಂಠನ್ ನಂಬೂದರಿಯವರ ನೇತೃತ್ವದಲ್ಲಿ ನಿತ್ಯ ಮತ್ತು ವಿಶೇಷ ಪೂಜೆಗಳು ನೆರವೇರುತ್ತವೆ. ಮುತ್ತಪ್ಪ, ತಿರುವಪ್ಪ ಮತ್ತು ಪರಿವಾರ ದೇವತೆಗಳಿಗೆ ದೇವಾಲಯದ ಮಡಯನ್ ಆಗಿರುವ ಸುಧೀಶ್ ಅವರು ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಜನವರಿಯಲ್ಲಿ ಮಕರ ಸಂಕ್ರಮಣದAದು ಮಕರಜ್ಯೋತಿ ಸಂದರ್ಭ ನಡೆಸುವ ವಿಶೇಷ ಪೂಜೆ, ಮಾರ್ಚ್ ತಿಂಗಳಲ್ಲಿ ಶ್ರೀಮುತ್ತಪ್ಪಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಧ್ವಜಾ ರೋಹಣದೊಂದಿಗೆ ವಾರ್ಷಿ ಕೋತ್ಸವವನ್ನು ವಿಜೃಂಭಣೆಯಲ್ಲಿ ಎರಡು ದಿನಗಳ ಕಾಲ ಅನ್ನದಾನ ನೆರವೇರಿಸುವ ಮೂಲಕ ಆಚರಿಸಲಾಗುವುದು. ವಿಶು ಸಂದರ್ಭ ವಿಶೇಷ ಪೂಜೆ, ಆಷಾಡ ಮಾಸದಲ್ಲಿ ದೇವಿಗೆ ನಿರಂತರವಾಗಿ ಒಂದು ತಿಂಗಳ ಕಾಲ ವಿಶೇಷವಾದ ದುರ್ಗಾದೀಪ ನಮಸ್ಕಾರ ಪೂಜೆ, ಆಷಾಢ ಮಾಸದ ಕೊನೆಯ ದಿವಸ ಕ್ಷೇತ್ರದ ತಂತ್ರಿಗಳು ನಿರ್ಣಯಿಸುವ ಹೋಮದೊಂದಿಗೆ ದೇವಿಯನ್ನು ಸಂತೃಪ್ತಿ ಗೊಳಿಸಲಾಗುವುದು. ನವರಾತ್ರಿಯಲ್ಲಿ ಒಂಭತ್ತು ದಿವಸ ವಿಶೇಷ ಭಗವತಿ ಸೇವೆ ಮತ್ತು ಅಭಿಷೇಕಗಳೊಂದಿಗೆ ಪೂಜಿಸಲಾಗುತ್ತದೆ.
ಡಿಸೆಂಬರ್‌ನಲ್ಲಿ ಮಂಡಲ ಪೂಜೋತ್ಸವದಂದು ಅಯ್ಯಪ್ಪಸ್ವಾಮಿ ದೇವಾಲಯದ ಹದಿನೆಂಟು ಮೆಟ್ಟಿಲುಗಳಿಗೆ ಪಡಿಪೂಜೆ ನಡೆಸಿ ಲಕ್ಷ ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ. ಪ್ರತಿ ತಿಂಗಳ ಆಶ್ಲೇಷ ನಕ್ಷತ್ರದಂದು, ನಾಗಪಂಚಮಿ ಮತ್ತು ಷಷ್ಠಿಯಂದು ನಾಗದೇವರಿಗೆ ಅಭಿಷೇಕದೊಂದಿಗೆ ಪೂಜೆ, ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯಂದು ಗಣಪತಿ ದೇವರಿಗೆ ವಿಶೇಷ ಪೂಜೆ, ಪ್ರತಿ ಬುಧವಾರ ಮುತ್ತಪ್ಪಸ್ವಾಮಿ ಮತ್ತು ತಿರುವಪ್ಪ ದೇವರಿಗೆ ವಿಶೇಷ ಪಯಂಗುತ್ತಿ ಸೇವೆ, ಶನಿವಾರದಂದು ಶನಿದೋಷ ನಿವಾರಣೆಗಾಗಿ ಅಯ್ಯಪ್ಪಸ್ವಾಮಿಗೆ ವಿಶೇಷವಾಗಿ ನೀರಾಂಜನ ಪೂಜೆ, ಶುಕ್ರವಾರದಂದು ಮತ್ತು ಅಮಾವಾಸ್ಯೆ ಹಾಗೂ ಆಷಾಢ ಅಮಾವಾಸ್ಯೆಯಂದು ಭುವನೇಶ್ವರಿ ಸಾನ್ನಿಧ್ಯದಲ್ಲಿ ವಿಶೇಷ ವಾಗಿ ಶತ್ರುಸಂಹಾರ ಪೂಜೆ ನಡೆಸಲಾಗುತ್ತಿದೆ.
ತಂತ್ರಿಗಳ ಅನುಮತಿ ಪಡೆದು ಪ್ರತಿ ಎರಡು ವರ್ಷಗಳಿಗೊಮ್ಮೆ ಮಂಗಳೂರಿನ ಕದ್ರಿ ಸಮೀಪದ ದೈವಜ್ಞರಾದ ಶ್ರೀರಂಗ ಐತಾಳ್‌ರವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯ ಮೂಲಕ ದೇವಾಲಯದಲ್ಲಿ ನಡೆಯುತ್ತಿರುವ ಪೂಜೆಗಳು ಮತ್ತು ಕಾರ್ಯವೈಖರಿಯಲ್ಲಿ ಏನಾದರೂ ಲೋಪ ಕಂಡುಬAದಲ್ಲಿ ಸರಿಪಡಿಸಿ ಕೊಂಡು, ತಂತ್ರಿಗಳ ಮಾರ್ಗ ದರ್ಶನದಲ್ಲಿ ಮುಂದುವರೆಯು ತ್ತಿರುವುದು ಕ್ಷೇತ್ರದ ವಿಶೇಷವಾಗಿದೆ.