ಕೂಡಿಗೆ, ಮೇ ೨೦: ಇಲ್ಲಿನ ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ ಮುತ್ತತ್ತಿರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿ ಯಿಂದ ವಾರ್ಷಿಕ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಕಾರ್ಯ ಕ್ರಮ ಶ್ರದ್ಧಾಭಕ್ತಿಯಿಂದ ಆಚರಿಸ ಲಾಯಿತು. ವಾರ್ಷಿಕ ಪೂಜೆಯ ಅಂಗವಾಗಿ ದೇವಾಲಯ ದಲ್ಲಿ ಗಣಪತಿ ಪೂಜೆ, ನವಗ್ರಹ ಶಾಂತಿ ಪೂಜೆ ದುರ್ಗಿಶಾಂತಿ ಹೋಮ, ಬಲಹೆರಣ ಪೂರ್ಣಾಹುತಿ ಶ್ರೀ ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಅರ್ಚನೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಹಬ್ಬದ ಅಂಗವಾಗಿ ಕಾವೇರಿ ನದಿಗೆ ತೆರಳಿ ನದಿಯಲ್ಲಿ ಗಂಗೆ ಪೂಜೆ ಕಲಶ ಪೂಜೆ ನಡೆಸಿ ನಂತರ ಹಣ್ಣಾಡಗೆ ಉತ್ಸವದ ಅಂಗವಾಗಿ ಗ್ರಾಮಸ್ಥರು ದೇವಾಲಯ ಸಮಿತಿಯ ವತಿಯಿಂದ ನೀಡಲಾದ ಕುಕ್ಕೆಗಳಲ್ಲಿ ಬಾಳೆಗೊನೆಗಳನ್ನು ಇಟ್ಟು ಕೊಂಡು ಮಹಿಳೆಯರು, ಯುವತಿ ಯರು ಕಲಶದ ಆರತಿಯೊಂದಿಗೆ ಸಾಗಿ ದೇವಸ್ಥಾನ ಮುಂಭಾಗದಲ್ಲಿ ಹಾಕಲಾಗಿದ್ದ ಬೆಂಕಿ ಕೊಂಡದಲ್ಲಿ ಭಕ್ತಾದಿಗಳು ಬೆಂಕಿಯನ್ನು ಹಾಯ್ದು ಹೋಗುವ ಮೂಲಕ ಸೇವೆ ಸಲ್ಲಿಸಿದರು. ಹಣ್ಣಾಡಗೆ ಉತ್ಸವ ಮತ್ತು ಕೊಂಡೋತ್ಸವ ಹಾಗೂ ಉಯ್ಯಾಲೆ ಉತ್ಸವವು ಸಂಪ್ರದಾಯದAತೆ ವಿಶೇಷ ಪೂಜೆಗಳ ಮೂಲಕ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಗಿರೀಶ್, ಉಪಾಧ್ಯಕ್ಷ ಕೆ.ಪಿ. ಪ್ರಕಾಶ್, ಕಾರ್ಯದರ್ಶಿ ಗುರುಪಾದ ಸ್ವಾಮಿ ಆರಾಧ್ಯ, ಸಹ ಕಾರ್ಯದರ್ಶಿ ಕೆ.ಜಿ. ರಾಜಶೇಖರ, ಗೌರವ ಅಧ್ಯಕ್ಷ ಕೆ.ಕೆ. ಭೀಮಣ್ಣ, ಸಲಹೆಗಾರರಾದ ಕೆ.ಟಿ, ಶ್ರೀನಿವಾಸ, ಕೆ.ಕೆ. ಸೋಮಶೇಖರ್, ಕೆ.ಕೆ. ಜಯಣ್ಣ, ಕೆ.ಎಸ್. ಚಂದ್ರಶೇಖರ, ಕೆ.ಪಿ. ಸೋಮಣ್ಣ, ಕೆ.ಬಿ. ಪ್ರಕಾಶ್, ಕೆ.ಟಿ. ಕೃಷ್ಣ, ಕೆ.ಬಿ. ರಾಮಚಂದ್ರ, ಕೆ.ಟಿ. ಈಶ್ವರ್ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಕೂಡಿಗೆ- ಕೊಪ್ಪಲು, ಹೆಗ್ಡಳ್ಳಿ, ಕೋಟೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.