ವೀರಾಜಪೇಟೆ, ಮೇ ೨೦: ಆಟೋ ಚಾಲಕರನ್ನು ಸಂಘಟಿಸುವ ನಿಟ್ಟಿನಲ್ಲಿ ವೀರಾಜಪೇಟೆಯಲ್ಲಿ ನೂತನ ಆಟೋ ಚಾಲಕರ ಸಂಘ ವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಗೌರವ ಸಲಹೆಗಾರ ದಾಮೋದರ್ ಆಚಾರ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಒಂದು ಸಾವಿರಕ್ಕೂ ಅಧಿಕ ಆಟೋ ಚಾಲಕ ರಿದ್ದು, ಎಲ್ಲರನ್ನು ಒಗ್ಗೂಡಿಸುವ ಸಲುವಾಗಿ ನೂತನ ಸಂಘವನ್ನು ಸ್ಥಾಪಿಸಲಾಗಿದೆ. ಕಳೆದ ೩೫ ವರ್ಷ ಗಳಿಂದ ಆಟೋ ಚಾಲಕರು ಜನಪರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಚೌಕಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹೆಲ್ಪ್ಲೈನ್ ಸಂಸ್ಥೆ ಜೊತೆಗೂಡಿ ಕುಡಿಯುವ ನೀರಿನ ವ್ಯವಸ್ಥೆ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇನ್ನು ಮುಂದೆಯು ಇಂತಹ ಕಾರ್ಯಕ್ರಮಗಳನ್ನು ನಡೆಸ ಲಾಗುವುದು ಎಂದು ಹೇಳಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಎಂ ಶಿವು ಮಾತನಾಡಿ, ಪಟ್ಟಣದ ಖಾಸಗಿ ಬಸ್ ನಿಲ್ದಾಣದೊಳಗೆ ಆಟೋಗಳ ಪ್ರವೇಶವನ್ನು ನಿಷೇಧಿಸ ಲಾಗಿದ್ದು, ಇದರಿಂದ ಸಾರ್ವಜನಿ ಕರಿಗೆ, ವಿಶೇಷಚೇತನರಿಗೆ, ವಯೋ ವೃದ್ಧರಿಗೆ ಅನಾನುಕೂಲವಾಗುತ್ತಿದೆ. ಬಸ್ ನಿಲ್ದಾಣದೊಳಗೆ ಆಟೋ ಗಳನ್ನು ಬಿಡಲು ಅನುಮತಿಯನ್ನು ನೀಡಬೇಕಾಗಿ ಸಂಘದ ವತಿಯಿಂದ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ತೋರೆರ ಪ್ರಭು ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಅರ್ಜುನ್ ತಿಮ್ಮಯ್ಯ, ಖಜಾಂಚಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ಎಂಡ್ರೀ ನರೋನಾ, ಗೌರವ ಸಲಹೆಗಾರ ಎಂ. ಪ್ರವೀಣ್ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ
ವೀರಾಜಪೇಟೆ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ಎ.ಎಂ. ಶಿವು, ಪ್ರಧಾನ ಕಾರ್ಯ ದರ್ಶಿಯಾಗಿ ಪ್ರದೀಪ್ ಕುಮಾರ್ (ದೀಪು) ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಪುರಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಹ್ಯಾರಿಸ್, ಅರ್ಜುನ್ ತಿಮ್ಮಯ್ಯ, ಸಹ ಕಾರ್ಯದರ್ಶಿಯಾಗಿ ಎಂಡ್ರಿ ನರೋನಾ, ಖಜಾಂಚಿಯಾಗಿ ಸೋಮಶೇಖರ್, ಗೌರವ ಸಲಹೆ ಗಾರರಾಗಿ ಎನ್. ದಾಮೋದರ್ ಆಚಾರ್ಯ, ಎಂ.ಎA. ಪರಮೇಶ್ವರ್, ಎಂ. ಪ್ರವೀಣ್, ಸಂಘಟನಾ ಕಾರ್ಯ ದರ್ಶಿಯಾಗಿ ಸುರೇಶ್, ಕಾನೂನು ಸಲಹೆೆಗಾರರಾಗಿ ವಕೀಲ ಪುಷ್ಪರಾಜ್ ಅವರುಗಳು ಆಯ್ಕೆಯಾಗಿದ್ದಾರೆ.