ಚೊಚ್ಚಲ ಅಂರ‍್ರಾಷ್ಟಿçÃಯ ಪದಕ

ಮಡಿಕೇರಿ, ಮೇ ೨೦: ಉದಯೋನ್ಮುಖ ಕ್ರೀಡಾ ತಾರೆ, ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಫ್ರಾನ್ಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕೂಲ್ ಗೇಮ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.

ಫ್ರಾನ್ಸ್ನ ನಾರ್ಮಂಡಿಯಲ್ಲಿ ನಡೆದ ವರ್ಲ್ಡ್ ಸ್ಕೂಲ್ ಗೇಮ್ಸ್ನ ೧೦೦ ಮೀಟರ್ ಹರ್ಡಲ್ಸ್ನಲ್ಲಿ ಉನ್ನತಿ ೧೩.೭೩ ಸೆಕೆಂಡ್ಸ್ನಲ್ಲಿ ಗುರಿ ತಲುಪಿ ದೇಶಕ್ಕೆ ಪದಕ ತಂದಿದ್ದಾರೆ.

ಈ ಹಿಂದೆ ವಿವಿಧ ರಾಷ್ಟಿçÃಯ ಪಂದ್ಯಾವಳಿಗಳಲ್ಲಿ ಕೂಡ ಉನ್ನತಿ ಉತ್ತಮ ಸಾಧನೆ ತೋರಿದ್ದು, ಹಲವು ಪದಕಗಳನ್ನು ಗಳಿಸಿದ್ದಾರೆ. ೨೦೨೧ ರಲ್ಲಿ ನಡೆದ ರಾಷ್ಟಿçÃಯ ಜೂನಿಯರ್ ಚಾಂಪಿಯನ್ ಶಿಪ್‌ನಲ್ಲಿ ಉನ್ನತಿ ದೇಶದ ಹೆಸರಾಂತ ಕ್ರೀಡಾ ತಾರೆ ಪಿ.ಟಿ. ಉಷಾ ಅವರ ದಾಖಲೆಯನ್ನು ಮುರಿದು (೮೦ ಮೀಟರ್ ಹರ್ಡ್ಲ್ಸ್) ಹೆಸರು ಮಾಡಿದ್ದರು. ಇದೀಗ ಆಕೆಗೆ ಚೊಚ್ಚಲ ಅಂರ‍್ರಾಷ್ಟಿçÃಯ ಮಟ್ಟದ ಪದಕ ಲಭ್ಯವಾಗಿದೆ.

ಉನ್ನತಿ ಜಿಲ್ಲೆಯವರಾದ ಅಂರ‍್ರಾಷ್ಟಿçÃಯ ಅಥ್ಲೆಟ್ ಹಾಗೂ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಹಾಗೂ ಎರಡು ಬಾರಿಯ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ (ತಾಮನೆ-ಗುಡ್ಡಂಡ) ದಂಪತಿಯ ಪುತ್ರಿ.