ಸೋಮವಾರಪೇಟೆ, ಮೇ ೨೧: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಸ್ಥಳೀಯ ನ್ಯಾಯಾಲಯ ಸಮೀಪ ರೂ. ೧ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ರೋಟರಿ ಸಂಸ್ಥೆಯು ಅಂರ್ರಾಷ್ಟಿçÃಯ ಮಟ್ಟದಲ್ಲಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಕಾರ್ಯ. ರೋಟರಿಯಿಂದ ಈಗಾಗಲೇ ಸೋಮವಾರಪೇಟೆ ಭಾಗದಲ್ಲಿ ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗಿದ್ದು, ಕೋವಿಡ್ ಸಂದರ್ಭ ಜನತೆಯ ನೆರವಿಗೆ ಧಾವಿಸಿದೆ. ಇದರೊಂದಿಗೆ ಸಾರ್ವಜನಿಕ ಸ್ಮಶಾನದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸುವ ಮೂಲಕ ತನ್ನ ಸಾಮಾಜಿಕ ಕಳಕಳಿಯನ್ನು ಮೆರೆದಿದೆ ಎಂದರು. ರೋಟರಿ ಅಧ್ಯಕ್ಷ ಎಂ.ಎA. ಪ್ರಕಾಶ್ಕುಮಾರ್ ಮಾತನಾಡಿ, ದೂರದ ಊರುಗಳಿಂದ ನ್ಯಾಯಾಲಯಕ್ಕೆ ಆಗಮಿಸುವ ಸಾರ್ವಜನಿಕರು, ಕೋರ್ಟ್ ಸಿಬ್ಬಂದಿಗಳು ಹಾಗೂ ವಕೀಲರಿಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ರೂ. ೧ ಲಕ್ಷ ವೆಚ್ಚದ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭ ರೋಟರಿ ಕಾರ್ಯದರ್ಶಿ ಡಿ.ಪಿ. ಧರ್ಮಪ್ಪ, ಸದಸ್ಯರುಗಳಾದ ಪಿ.ಕೆ. ರವಿ, ಕೆ.ಪಿ. ಪ್ರವೀಣ್, ಬಿ.ಎಂ. ದಿನೇಶ್, ಹೆಚ್.ಸಿ. ಲೋಕೇಶ್, ಶುಭಾಕರ್, ಪಿ. ನಾಗೇಶ್, ನವೀನ್, ಲಿಖಿತ್, ಪ್ರಸ್ತುತ್, ವೀರರಾಜು, ಮೋಹನ್ರಾಮ್, ಮಂಜು, ಬೇಳೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.