ಮಡಿಕೇರಿ, ಮೇ ೨೧: ಪ್ರಸಕ್ತ ಸಾಲಿನ ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅರ್ಹ ರೈತರಿಗೆ ತಲಾ ೨ ಕೌ ಮ್ಯಾಟ್(ಜಾನುವಾರುಗಳ ರಬ್ಬರ್ ನೆಲದ ಹಾಸು)ಗಳನ್ನು ರೈತರಿಗೆ ಘಟಕದ ಮೊತ್ತ ರೂ. ೬೧೯೦ ರಲ್ಲಿ ಶೇ. ೫೦ ರ ಸಹಾಯಧನದ ರೂಪದಲ್ಲಿ ರೈತರಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ಕನಿಷ್ಟ ೨ ಜಾನುವಾರುಗಳನ್ನು ಹೊಂದಿರಬೇಕು. ಪಶು ವೈದ್ಯಾಧಿಕಾರಿಗಳಿಂದ ಜಾನುವಾರು ಹೊಂದಿರುವ ಬಗ್ಗೆ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ (ಎಸ್‌ಸಿ-ಎಸ್‌ಟಿ) ಹಾಗೂ ಇತರ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂನ್ ೬ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ಪಶು ಚಿಕಿತ್ಸಾಲಯಗಳನ್ನು ಸಂಪರ್ಕಿಸುವAತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಸುರೇಶ್ ಭಟ್ ಅವರು ತಿಳಿಸಿದ್ದಾರೆ.