ಮಡಿಕೇರಿ, ಮೇ ೨೧: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಹೆಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯವರ ಸಂಯುಕ್ತ ಆಶ್ರಯದಲ್ಲಿ ಆರಂಭಿಕ ವೃತ್ತಿಜೀವನದ ಕಾರ್ಯಕ್ರಮವಾದ ಟೆಕ್ ಬೀ ಯೋಜನೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬAಧ ತಾ. ೨೩ ರಂದು ಬೆಳಿಗ್ಗೆ ೯ ಗಂಟೆಯಿAದ ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್ ಅವರು ಟೆಕ್‌ಬೀ ಯೋಜನೆಯ ಅಡಿಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ೧೨ನೇ ತರಗತಿಯಲ್ಲಿ ಗಣಿತ/ ವ್ಯವಹಾರ ಗಣಿತ ವಿಷಯಗಳನ್ನು ಅಧ್ಯಯನ ಮಾಡಿ ಪಾಸಾದ/ ೨೦೨೧-೨೨ನೇ ಸಾಲಿನ ವಾರ್ಷಿಕ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ೧೨ ತಿಂಗಳ ತರಬೇತಿ, ನಂತರ ಎಚ್‌ಸಿಎಲ್ ಟೆಕ್ನಾಲಜೀಸ್‌ನಲ್ಲಿ ಕೆಲಸ ಹಾಗೂ ಬಿಟ್ಸ್ ಪಿಲಾನಿ, ಶಾಸ್ತ ವಿಶ್ವವಿದ್ಯಾಲಯ ಹಾಗೂ ಅಮೇಥಿ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆಯುವ ಅವಕಾಶ ಲಭಿಸಲಿದೆ. ೧೨ನೇ ತರಗತಿಯಲ್ಲಿ ಗಣಿತ-ವ್ಯವಹಾರ ಗಣಿತ ವಿಷಯಗಳನ್ನು ಅಧ್ಯಯನ ಮಾಡಿ ಒಟ್ಟಾರೆ ಶೇ. ೬೦ ರಷ್ಟು ಅಂಕಗಳೊAದಿಗೆ ಉತ್ತೀರ್ಣ ರಾಗಿರಬೇಕು ಹಾಗೂ ಗಣಿತ/ ವ್ಯವಹಾರ ಗಣಿತ ವಿಷಯಗಳಲ್ಲಿ ಕನಿಷ್ಟ ಶೇ. ೫೦ ಅಂಕ ಪಡೆದಿರಬೇಕು. ೨೦೨೧-೨೨ನೇ ಸಾಲಿನ ವಾರ್ಷಿಕ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟಾರೆ ಶೇ. ೬೦ ಹಾಗೂ ಗಣಿತ-ವ್ಯವಹಾರ ಗಣಿತ ವಿಷಯಗಳಲ್ಲಿ ಕನಿಷ್ಟ ಶೇ.೫೦ ಅಂಕ ಪಡೆಯುವ ನಿಬಂಧನೆಗಳಿಗೆ ಒಳಪಟ್ಟು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗುವುದು. ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ೧೦ನೇ ತರಗತಿ ಅಂಕಪಟ್ಟಿ, ಆಧಾರ್ ಕಾರ್ಡ್, ಪ್ರಥಮ ಪಿಯುಸಿ/ ದ್ವಿತೀಯ ಅಂಕಪಟ್ಟಿಯ ಪ್ರತಿಗಳೊಂದಿಗೆ ಹಾಜರಾಗುವ ಮೂಲಕ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಾಗ ಬಯಸುವ ವಿದ್ಯಾರ್ಥಿ ಗಳು hಣಣಠಿs://biಣ.ಟಥಿ/hಛಿಟಣeಛಿhbeeತಿoಡಿಞshoಠಿ ಲಿಂಕ್ ಅನ್ನು ಬಳಸಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೭೦೧೯೩೦೭೨೬೭, ೭೬೧೯೨೯೨೭೪೭, ೯೮೪೫೪೫೪೪೭೧ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಉಮಾ ತಿಳಿಸಿದ್ದಾರೆ.