ವೀರಾಜಪೇಟೆ, ಮೇ ೨೧: ಬಾಲ್ಯದ ದಿನಗಳಿಂದ ಕಲಿಕೆಯೊಂದಿಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಪ್ರವೃತ್ತಿ ರೂಢಿಸಿಕೊಂಡಲ್ಲಿ ದೇಹವನ್ನು ಸಮತೋಲನದಲ್ಲಿಡಲು ಸಾಧ್ಯ ಎಂದು ಹಿರಿಯ ಕ್ರೀಡಾಪಟು ಶಭರೀಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ರೈಸಿಂಗ್ ಸ್ಟಾರ್ ಕೋಚಿಂಗ್ ಸೆಂಟರ್ ವೀರಾಜಪೇಟೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಬ್ರೆöÊಟ್ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಶಭರೀಶ್ ಅವರು ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿರುವುದು ಕಂಡುಬAದಿದೆ. ಕಾರಣ ಮೊಬೈಲ್ ಬಳಕೆಯ ಗೀಳಿಗೆ ದಾಸರಾಗಿರುವುದು. ಇದರಿಂದ ಸಣ್ಣ ವಯಸ್ಸಿನಲ್ಲಿ ಕಣ್ಣಿಗೆ ದೋಷ, ದೇಹದಲ್ಲಿ ಅಸಮತೋಲನ, ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಹೊರಬರಲು ಕ್ರೀಡೆಯು ಸಹಕಾರಿ. ಕ್ರೀಡಾ ಕ್ಷೇತ್ರವು ಶಿಸ್ತು, ಸಂಯಮ, ಹೊಂದಾಣಿಕೆಗೆ ಸಹಕಾರಿ ಎಂದರು.
ರಾಷ್ಟç ಪ್ರಶಸ್ತಿ ವಿಜೇತ ಯೋಗ ಶಿಕ್ಷಕಿ ಆಲಿಮಾ ಮಾತನಾಡಿ, ಯೋಗದಿಂದ ರೋಗ ಮುಕ್ತಿ ಎಂಬAತೆ ಯೋಗವು ಸರ್ವ ವ್ಯಾಪಿಯಾಗಿದೆ. ಯೋಗಭ್ಯಾಸದಿಂದ ದೇಹವನ್ನು ಸದೃಢವಾಗಿರಿಸಲು ಸಾಧ್ಯ. ಅಲ್ಲದೆ ಮಾನಸಿಕ ಬದ್ಧತೆಯನ್ನು ಸಹ ಕಾಣಬಹುದಾಗಿದೆ ಎಂದರು.
ಒAದು ತಿಂಗಳ ಕಾಲ ನಡೆದ ಶಿಬಿರದಲ್ಲಿ ಸುಮಾರು ೮೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಗಳಾಗಿ ವಿವಿಧ ಕ್ರೀಡೆಗಳು ಮತ್ತು ಕೌಶಲ್ಯ ಅಬಿವೃದ್ಧಿ ಚಟುವಟಿಕೆಗಳ ಬಗ್ಗೆ ಶಿಬಿರದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬ್ರೆöÊಟ್ ಶಾಲೆಯ ಕಾರ್ಯದರ್ಶಿ ಕೆ.ಟಿ. ಬಶೀರ್, ಶಾಲೆಯ ಮುಖ್ಯೋಪಾಧ್ಯಾಯ ಮಿತಿಲೇಶ್ ಶಿಬಿರಾಧಿಕಾರಿಗಳಾದ ಮಿಥುನ್, ಸುರೇಶ್ ಅವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಂದ ಸ್ವಾಗತ ಮಾಡಲಾಯಿತು. ಶಿಬಿರಾಧಿಕಾರಿಗಳಾದ ಸುರೇಶ್ ಅವರು ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಶಿಬಿರಾರ್ಥಿಗಳು ಹಾಜರಿದ್ದರು.