ಮಡಿಕೇರಿ, ಮೇ ೨೧: ಶುಕ್ರವಾರ ನಗರದ ಚೈನ್ ಗೇಟ್ ಬಳಿ ಬೈಕ್‌ಗೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫುಡ್ ಡೆಲಿವರಿ ಸಂಬAಧ ಬೈಕ್‌ನಲ್ಲಿ ಬರುತ್ತಿದ್ದ ಅಣ್ಣಳಮಾಡ ತೇಜಸ್ ತಿಮ್ಮಯ್ಯನಿಗೆ ಜೀಪ್ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ. ಪ್ರಕರಣದ ಸಂಬAಧ ತನಿಖೆ ಕೈಗೊಂಡ ಪೊಲೀಸರು ಕೆ.ನಿಡುಗಣೆ ನಿವಾಸಿ ನಿಶ್ವಥ್ ಎಂಬಾತನನ್ನು ಘಟನೆ ನಡೆದ ರಾತ್ರಿಯಂದು ಬಂಧಿಸಿದ್ದಾರೆ. ಹೆಬ್ಬೆಟ್ಟಗೇರಿಯ ಅಯ್ಯಪ್ಪ (ಶರಣು) ಎಂಬವರಿಗೆ ಸೇರಿದ ವಾಹನವನ್ನು ನಿಶ್ವಥ್ ಚಲಾಯಿಸುತ್ತಿದ್ದ. ಈ ಸಂದರ್ಭ ಅಪಘಾತ ಸಂಭವಿಸಿದ್ದು, ನಿಶ್ವಥ್ ಲೈಸೆನ್ಸ್ ಹೊಂದಿಲ್ಲದ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದ್ದು, ಮಡಿಕೇರಿ ವೃತ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃತ್ತ ನಿರೀಕ್ಷಕ ವೆಂಕಟೇಶ್, ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಂತಿಮ ಗೌಡ ನೇತೃತ್ವದ ತಂಡ ತನಿಖೆ ನಡೆಸಿ ಘಟನೆ ನಡೆದ ೨ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದೆ.