ಮಡಿಕೇರಿ, ಮೇ 19: ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಗೆ ಶೇ. 86.48 ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷದ ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆ ಬರೆದ ಒಟ್ಟು 6710 ವಿದ್ಯಾರ್ಥಿಗಳಲ್ಲಿ 5803 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 1937 ವಿದ್ಯಾರ್ಥಿಗಳ ಪೈಕಿ 1756 ವಿದ್ಯಾರ್ಥಿಗಳು, ಸೋಮವಾರಪೇಟೆ ತಾಲೂಕಿನಲ್ಲಿ 2703 ವಿದ್ಯಾರ್ಥಿಗಳಲ್ಲಿ 2304 ವಿದ್ಯಾರ್ಥಿಗಳು, ವೀರಾಜಪೇಟೆ ತಾಲೂಕಿನಲ್ಲಿ 2070 ವಿದ್ಯಾರ್ಥಿಗಳಲ್ಲಿ 1743 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.
ಜಿಲ್ಲೆಯ ಒಟ್ಟು 3300 ಬಾಲಕರ ಪೈಕಿ 2715 ಬಾಲಕರು ತೇರ್ಗಡೆಹೊಂದಿದ್ದಾರೆ. 3410 ಬಾಲಕಿಯರ ಪೈಕಿ 3088 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 950 ಬಾಲಕರಲ್ಲಿ 823 ಮಂದಿ, 987 ಬಾಲಕಿಯರಲ್ಲಿ 933 ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ 1344 ಬಾಲಕರಲ್ಲಿ 1082 ಮಂದಿ, 1359 ಬಾಲಕಿಯರಲ್ಲಿ 1222 ಮಂದಿ, ವೀರಾಜಪೇಟೆ ತಾಲೂಕಿನಲ್ಲಿ 1006 ಬಾಲಕರಲ್ಲಿ 810 ಮಂದಿ, 1064 ಬಾಲಕಿಯರಲ್ಲಿ 933 ಮಂದಿ ಉತ್ತೀರ್ಣರಾಗಿದ್ದಾರೆ. 6 ಅನುದಾನಿತ ಶಾಲೆಗಳು, 39 ಅನುದಾನ ರಹಿತ ಶಾಲೆಗಳು, 10 ಸರ್ಕಾರಿ ಶಾಲೆಗಳು ಹಾಗೂ 5 ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಶಾಲೆಗಳಿಗೆ ಶೇ. 100 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯಾದ್ಯಂತ ಕನ್ನಡ ವಿಷಯದಲ್ಲಿ 104 ವಿದ್ಯಾರ್ಥಿಗಳು 125/125 ಅಂಕ ಪಡೆದಿದ್ದಾರೆ. 8 ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲಿ 100/100, 257 ವಿದ್ಯಾರ್ಥಿಗಳು ಹಿಂದಿಭಾಷೆಯಲ್ಲಿ 100/100, 61 ವಿದ್ಯಾರ್ಥಿ ಗಣಿತ ವಿಷಯದಲ್ಲಿ 100/100, 21 ವಿದ್ಯಾರ್ಥಿಗಳು ವಿಜ್ಞಾನ
(ಮೊದಲ ಪುಟದಿಂದ) ವಿಷಯದಲ್ಲಿ 100/100 ಹಾಗೂ 407 ವಿದ್ಯಾರ್ಥಿಗಳು ಸಮಾಜ ವಿಷಯದಲ್ಲಿ 100/100 ಅಂಕ ಪಡೆದುಕೊಂಡಿದ್ದಾರೆ.
ಪುನರಾವರ್ತಿತರನ್ನು ಹೊರತುಪಡಿಸಿ ಈ ಬಾರಿ ಪರೀಕ್ಷೆ ಬರೆದ 6317 ವಿದ್ಯಾರ್ಥಿಗಳಲ್ಲಿ 5776ಮಂದಿ ಉತ್ತೀರ್ಣರಾಗಿದ್ದಾರೆ. ಮಡಿಕೇರಿ ತಾಲೂಕಿನ 1831 ವಿದ್ಯಾರ್ಥಿಗಳಲ್ಲಿ 1748 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ 1982 ವಿದ್ಯಾರ್ಥಿಗಳಲ್ಲಿ 1738 ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ 2504 ವಿದ್ಯಾರ್ಥಿಗಳಲ್ಲಿ 2290 ಮಂದಿ ತೇರ್ಗಡೆ ಹೊಂದಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಪರೀಕ್ಷೆ ಬರೆದ 5222 ವಿದ್ಯಾರ್ಥಿಗಳಲ್ಲಿ 4760 ಮಂದಿ ಉತ್ತೀರ್ಣರಾಗಿದ್ದು, ನಗರ ಪ್ರದೇಶದಲ್ಲಿ ಪರೀಕ್ಷೆ ಎದುರಿಸಿದ 1095 ವಿದ್ಯಾರ್ಥಿಗಳಲ್ಲಿ 1016 ಮಂದಿ ಉತ್ತೀರ್ಣರಾಗಿದ್ದಾರೆ.
18 ಮಂದಿಗೆ ಅತ್ಯಧಿಕ ಅಂಕ
ಕೊಡಗು ಜಿಲ್ಲೆಯಲ್ಲಿ ಈ ಬಾರಿ 18 ಮಂದಿ ಅತೀ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಪ್ರಥಮ ಸ್ಥಾನವನ್ನು ಮಡಿಕೇರಿ ಸಂತಮೈಕಲರ ಶಾಲೆಯ ಕೆ.ಆರ್. ಸಿಂಚನ, ಚೇರಂಬಾಣೆ ಕೊಟ್ಟೂರು ಗ್ರಾಮದ ಶ್ರೀ ರಾಜರಾಜೇಶ್ವರಿ ಆಂಗ್ಲಮಾಧ್ಯಮ ಶಾಲೆಯ ಕೆ.ಎ. ಸೋನಿಕಾ, ಶನಿವಾರಸಂತೆ ಸೆಕ್ರೇಡ್ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಪೂರ್ವಿ ಜಗದೀಶ್, ಚೌಡ್ಲು ಜ್ಞಾನ ವಿಕಾಸ ಆಂಗ್ಲಮಾಧ್ಯಮ ಶಾಲೆಯ ಪಿ.ಬಿ. ಸಿಂಚನ ಇವರುಗಳು ತಲಾ 622 ಅಂಕಗಳೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.
ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ನ ಎಂ.ಎನ್. ಲಕ್ಷ್ಯ, ಶನಿವಾರಸಂತೆ ಸೇಕ್ರೆಡ್ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಿ.ವಿ. ಕೀರ್ತನ, ಕುಶಾಲನಗರ ಫಾತಿಮಾ ಕಾನ್ವೆಂಟ್ನ ಕೆ. ಗಾಯತ್ರಿ, ಕೊಡ್ಲಿಪೇಟೆಯ ಸದಾಶಿವ ಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯ ಬಿ.ವಿ. ಮಾನ್ಯಶ್ರೀ ಇವರುಗಳು ತಲಾ 621 ಅಂಕಗಳೊಂದಿಗೆ ದ್ವಿತೀಯ ಸ್ಥಾನಗಳಿಸಿದ್ದಾರೆ.
ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ನ ಮೆನಿತಾ ನಾಗೇಶ್, ಕೂಡಿಗೆ ಮೊರಾರ್ಜಿ ದೇಸಾಯಿ ಶಾಲೆಯ ಎಸ್.ಎಸ್. ವಿಶ್ವಾಸ್, ಕುಶಾಲನಗರ ಫಾತಿಮಾ ಕಾನ್ವೆಂಟ್ನ ಎ.ಎಸ್. ರಾಹುಲ್, ಎಂ.ಎಸ್. ಶ್ರಾವ್ಯ, ಪಾಲಿಬೆಟ್ಟ ಲೂಡ್ರ್ಸ್ಹಿಲ್ ಶಾಲೆಯ ಕೆ.ಬಿ. ವರ್ಣ ಇವರುಗಳು ತಲಾ 620 ಅಂಕಗಳೊಂದಿಗೆ ತೃತೀಯ ಸ್ಥಾನಗಳಿಸಿದ್ದಾರೆ.