ಗೋಣಿಕೊಪ್ಪ ವರದಿ, ಮೇ 19: ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಮಿನಿ ಒಲಂಪಿಕ್ ಹಾಕಿ ಕ್ರೀಡೆಯ 14 ವರ್ಷದೊಳಗಿನ ವಿಭಾಗದ ಹಾಕಿ ಕೂರ್ಗ್ ಬಾಲಕ ತಂಡವು ಸೆಮಿ ಫೈನಲ್‍ಗೆ ಪ್ರವೇಶ ಪಡೆದುಕೊಂಡಿದೆ. ಬಾಲಕಿಯರು ಬೆಳಗಾವಿ ವಿರುದ್ಧ ಸೋಲು ಅನುಭವಿಸಿದ್ದಾರೆ.
ಬಾಲಕರ ತಂಡ ಬಾಗಲಕೋಟೆ ತಂಡವನ್ನು 5-0 ಗೋಲುಗಳಿಂದ ಮಣಿಸಿ ಸಾಧನೆ ಮಾಡಿತು. ದೀಕ್ಷಿತ್ 2, ನಿಶಾಂತ್, ಕೆ.ಪಿ. ದೇವಯ್ಯ, ಜಶನ್ ತಲಾ ಒಂದೊಂದು ಗೋಲು ಹೊಡೆದರು. ಬಾಲಕಿಯರು ಬೆಳಗಾವಿ ವಿರುದ್ಧ 2-3 ಗೋಲುಗಳ ರೋಚಕ ಸೋಲು ಅನುಭವಿಸಿತು. ಅಚ್ಚಪಂಡ ಪರ್ಲಿನ್ ಪೊನ್ನಮ್ಮ 2 ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು. ಶುಕ್ರವಾರ ಧಾರವಾಡ ವಿರುದ್ಧ ಸೆಣೆಸಾಟ ನಡೆಸಲಿದೆ.