ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ರಾಜೀನಾಮೆ

ನವದೆಹಲಿ, ಮಾ. ೧೮: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿಂದೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ ಅವರ ಹಠಾತ್ ರಾಜೀನಾಮೆಯ ನಂತರ ೨೦೧೬, ಡಿಸೆಂಬರ್ ೩೧ ರಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಅನಿಲ್ ಬೈಜಲ್ ಅವರು ಅಧಿಕಾರ ವಹಿಸಿಕೊಂಡಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಬೈಜಲ್ ಅವರು ಡಿಸೆಂಬರ್ ೩೧, ೨೦೨೧ಕ್ಕೆ ಐದು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ್ದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಯಾವುದೇ ನಿಶ್ಚಿತ ಅಧಿಕಾರಾವಧಿ ಇಲ್ಲ. ಆದಾಗ್ಯೂ ಅನಿಲ್ ಬೈಜಲ್ ಅವರು ಇಂದು ರಾಷ್ಟçಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಿಲ್ ಬೈಜಲ್ ಕೇಂದ್ರಾಡಳಿತ ಪ್ರದೇಶದ ಕೇಡರ್‌ನ ೧೯೬೯ ರ ಬ್ಯಾಚ್‌ನ ಐಎಎಸ್ ಅಧಿಕಾರಿ ಯಾಗಿದ್ದು, ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಉಪಾಧ್ಯಕ್ಷರಾಗಿ ಮತ್ತು ಪ್ರಸಾರ ಭಾರತಿ ಮತ್ತು ಇಂಡಿಯನ್ ಏರ್‌ಲೈನ್ಸ್ನಂತಹ ಪ್ರಮುಖ ಸಾರ್ವಜನಿಕ ವಲಯದ ಕಂಪೆನಿಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ೨೦೦೪ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಮಾಜಿ ಅಧಿಕಾರಿ ಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿತ್ತು.

೩೦೦ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ

ಬೆಂಗಳೂರು, ಮೇ ೧೮: ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಪೈಕಿ ೩೦೦ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಬುಧವಾರ ತಿಳಿಸಿದ್ದಾರೆ. ಕಳೆದ ಜನವರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಒಪ್ಪಿಗೆ ನೀಡುವಂತೆ ಸಚಿವರು ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದರು. ಅದರಂತೆ ಆರ್ಥಿಕ ಇಲಾಖೆ ಈಗ ಒಪ್ಪಿಗೆ ಸೂಚಿಸಿದ್ದು, ಶೀಘ್ರ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ೩೦೦ ಹುದ್ದೆಗಳನ್ನು ಕರ್ನಾಟಕ ಕೃಷಿ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, ೨೦೨೧ರಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಯಮಾನುಸಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಕೃಷಿ ಇಲಾಖೆ (ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಜೋನ್ ಪುಕಾಶ್ ರೋಡ್ರಿಗಸ್ ಅವರು ಕೃಷಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿರುವುದಾಗಿ ಸಚಿವರು ಹೇಳಿದ್ದಾರೆ. ಕೃಷಿ ಪದವೀಧರರಿಗೆ ಶೇ. ೮೫ ರಷ್ಟು ಹುದ್ದೆಗಳು, ಉಳಿದ ಶೇ. ೧೫ ರಷ್ಟು ಪೋಸ್ಟ್ಗಳನ್ನು ಬಿ.ಟೆಕ್ (ಕೃಷಿ ಇಂಜಿನಿಯರಿAಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ-ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಯೋಟೆಕ್ನಾಲಜಿ ಹೊಂದಿರುವವರು ಅರ್ಹರಿರುತ್ತಾರೆ.

ಮಳೆಗೆ ಮೃತಪಟ್ಟವರಿಗೆ ರೂ. ೫ ಲಕ್ಷ ಪರಿಹಾರ

ಬೆಂಗಳೂರು, ಮೇ ೧೮: ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ತಗ್ಗು ಪ್ರದೇಶಗಳಿಂದ ಭಾರೀ ಮಳೆಯಾದಾಗ ಮೇಲುಗಡೆಯಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದುಬರುತ್ತದೆ. ಭೌಗೋಳಿಕವಾಗಿ ಭೂಪ್ರದೇಶಗಳ ರಚನೆಯೇ ಹಾಗಿದೆ. ಇನ್ನು ರಾಜಕಾಲುವೆ ಒತ್ತುವರಿ ಮಾಡಿ ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದರಿAದ ನೀರು ಹೋಗಲು ಅವಕಾಶ ಸಿಗದೆ ಮನೆಗಳಿಗೆ ನೀರು ನುಗ್ಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತೀವ್ರ ಮಳೆಯಾದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್‌ಗೆ ಅಧಿಕಾರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳೊಂದಿಗೆ ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಪ್ರದೇಶದಲ್ಲಿ ೧೫-೨೦ ಜನರ ಮನೆಗಳಿಗೆ ನುಗ್ಗಿದೆ. ಮಳೆ ಬಂದಾಗ ನೀರು ನುಗ್ಗದಂತೆ ಮಾಡಲು ರಾಜಕಾಲುವೆಗಳಿಂದ ಹೊರಗೆ ನೀರು ಹೋಗುವಂತೆ ಮಾಡಬೇಕು. ಹಲವಾರು ಕಡೆ ರಾಜಕಾಲುವೆ ನೀರು ಹೋಗಿ ಒಂದು ಕಡೆ ನಿಲ್ಲುವಂತಹ ಪರಿಸ್ಥಿತಿಯಿದೆ, ಅವುಗಳನ್ನು ಗುರುತಿಸಿ ಕಾಮಗಾರಿ ಮಾಡುತ್ತೇವೆ. ಈ ವರ್ಷದಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದ್ದು ಅದಕ್ಕೆ ೧೬ ಕೋಟಿ ರೂಪಾಯಿ ಒದಗಿಸಲಾಗಿದೆ ಎಂದರು. ತಗ್ಗು ಪ್ರದೇಶಗಳಲ್ಲಿ, ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದನ್ನು ಪತ್ತೆ ಹಚ್ಚುತ್ತೇವೆ. ಮುಖ್ಯ ಕಾಲುವೆ ಜೊತೆಗೆ ಎರಡನೇ ಕಾಲುವೆಗಳನ್ನು ಪತ್ತೆಹಚ್ಚಿ ವಾರ್ಡ್ಗಳಲ್ಲಿರುವ ಚರಂಡಿಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ರಾಜಕಾಲುವೆ ೮೦೦ ಕಿಲೋ ಮೀಟರ್ ಇವೆ, ಈಗ ೪೦೦ ಕಿಲೋ ಮೀಟರ್ ಕಾಮಗಾರಿ ಕೈಗೊಳ್ಳುತ್ತೇವೆ ಎಂದರು. ಸರ್ಕಾರದಿಂದ ಪರಿಹಾರ: ಮನೆಗಳಿಗೆ ನೀರು ನುಗ್ಗಿ ಅನಾಹುತರಾದ ಕುಟುಂಬಸ್ಥರಿಗೆ ತಲಾ ೨೫ ಸಾವಿರ ರೂಪಾಯಿ ಹಾಗೂ ನಿನ್ನೆ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ ೫ ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂದರ್ಭ ಪ್ರಕಟಿಸಿದರು.

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ನಿಖತ್ ಜರೀನ್ ಫೈನಲ್‌ಗೆ

ನವದೆಹಲಿ, ಮೇ ೧೮: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನ ೫೨ ಕೆ.ಜಿ. ವಿಭಾಗದಲ್ಲಿ ಭಾರತದ ಬಾಕ್ಸಿಂಗ್ ಪಟು ನಿಖತ್ ಜರೀನ್ ಅವರು ಬುಧವಾರ ನಡೆದ ಸೆಮಿಫೈನಲ್ ನಲ್ಲಿ ಬ್ರೆಜಿಲ್‌ನ ಕ್ಯಾರೊಲಿನ್ ಡಿ ಅಲ್ಮೇಡಾ ಅವರನ್ನು ೫-೦ ಅಂತರದಿAದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಸ್ತಾನ್ ಬುಲ್‌ನಲ್ಲಿ ನಡೆಯುತ್ತಿರುವ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತಕ್ಕೆ ಮೂರು ಪದಕಗಳು ಖಚಿತವಾಗಿದ್ದು, ನಿಖತ್ ಜರೀನ್ ಫೈನಲ್‌ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಟ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸಿಂಗ್ ಪಟು ನಿಖತ್ ಜರೀನ್ ಫೆಬ್ರವರಿಯಲ್ಲಿ ನಡೆದ ಪ್ರತಿಷ್ಠಿತ ಸ್ಟಾçಂಡ್ಜಾ ಸ್ಮಾರಕ ಟೂರ್ನಮೆಂಟ್‌ನಲ್ಲಿ ಚಿನ್ನ ಗೆದ್ದಿದ್ದರು. ಇದೀಗ ಇವರು ೫೨ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ವಿಶ್ವ ಕ್ರೀಡಾಕೂಟದಲ್ಲಿ ತನ್ನ ಚೊಚ್ಚಲ ಪದಕವನ್ನು ಪಡೆಯಲು ಉತ್ಸುಕರಾಗಿದ್ದಾರೆ. ಏತನ್ಮಧ್ಯೆ, ೬೩ ಕೆ.ಜಿ. ತೂಕದ ವಿಭಾಗದಲ್ಲಿ, ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಚೊಚ್ಚಲ ಪ್ರದರ್ಶನ ನೀಡುತ್ತಿರುವ ೨೨ ವರ್ಷದ ಪರ್ವೀನ್, ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಐರ್ಲೆಂಡ್‌ನ ಆಮಿ ಬ್ರಾಡ್‌ಹರ್ಸ್ಟ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ. ಇನ್ನೂ ಭಾರತದ ಮೂರನೇ ಬಾಕ್ಸರ್ ಮನೀಶಾ (೫೭ ಕೆ.ಜಿ.) ೨೦೧೮ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಹೊರಹಾಕಲ್ಪಟ್ಟ ೨೦೧೯ರ ಏಷ್ಯನ್ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಟೋಕಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಮತ್ತು ಮಾಜಿ ಯುರೋಪಿಯನ್ ಚಾಂಪಿಯನ್ ಇಟಲಿಯ ಇರ್ಮಾ ಟೆಸ್ಟಾ ಅವರನ್ನು ಎದುರಿಸಲಿದ್ದಾರೆ.

ವಕೀಲರ ಪ್ರತಿಭಟನೆಯಿಂದ ಗ್ಯಾನ್‌ವಾಪಿ ಪ್ರಕರಣದ ವಿಚಾರಣೆಯಲ್ಲಿ ವ್ಯತ್ಯಾಸ

ವಾರಣಾಸಿ, ಮೇ ೧೮: ಗ್ಯಾನ್‌ವಾಪಿ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ವಿರೋಧಿಸಿ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದ್ದರ ಪರಿಣಾಮ ವಾರಣಾಸಿಯ ಕೋರ್ಟ್ನಲ್ಲಿ ಗ್ಯಾನ್‌ವಾಪಿಗೆ ಸಂಬAಧಿಸಿದ ವಿಚಾರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಬುಧವಾರದಂದು ಗ್ಯಾನ್‌ವಾಪಿಗೆ ಸಂಬAಧಿಸಿದAತೆ ಕೋರ್ಟ್ನಲ್ಲಿ ವಿಚಾರಣೆ ನಡೆಯಬೇಕಿತ್ತು. ವಕೀಲರ ವಿರುದ್ಧ ವಿಶೇಷ ಕಾರ್ಯದರ್ಶಿಯೊಬ್ಬರು ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಬನಾರಸ್ ಬಾರ್ ಅಸೋಸಿಯೇಷನ್ ಹಾಗೂ ಕೇಂದ್ರ ಬಾರ್ ಅಸೋಸಿಯೇಷನ್ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿದ್ದವು. ಆದ್ದರಿಂದ ಕೋರ್ಟ್ನಲ್ಲಿ ವಿಚಾರಣೆ ನಡೆದಿಲ್ಲ ಎಂದು ಮುಸ್ಲಿಮರ ಪರ ವಾದ ಮಂಡಿಸುತ್ತಿರುವ ಅಭಯ್ ಯಾದವ್ ಹೇಳಿದ್ದಾರೆ. ಮುಸ್ಲಿಮರು ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ಬಳಿ, ಹಿಂದೂಗಳ ಅರ್ಜಿಗೆ ತಮ್ಮ ಆಕ್ಷೇಪಣೆ ಸಲ್ಲಿಸುವುದಕ್ಕೆ ೨ ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ. ಹಿಂದೂಗಳ ಪರ ವಾದ ಮಂಡಿಸಿರುವ ಮದನ್ ಮೋಹನ್ ಯಾದವ್ ಮಾತನಾಡಿ, ವಕೀಲರು ವಾದ ಮಂಡಿಸಲು ಬಾರ್ ಅಸೋಸಿಯೇಷನ್ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕೋರ್ಟ್ ಮತ್ತೆ ಪುನರಾರಂಭಗೊAಡ ಬಳಿಕ ಅರ್ಜಿ ವಿಚಾರಣೆಗೆ ಬರಲಿದೆ.