ಮಡಿಕೇರಿ, ಮೇ ೧೮: ಬದುಕಿನಲ್ಲಿ ಬೇರೆ ಯಾವ ಕಾರ್ಯಗಳಲ್ಲಿಯೂ ದೊರಕದ ಆತ್ಮತೃಪ್ತಿ, ಸಮಾಧಾನ ಜನ ಸೇವಾ ಕಾರ್ಯಗಳಲ್ಲಿ ಖಂಡಿತಾ ದೊರಕುತ್ತದೆ. ಬೇರೆಯವರಿಗೆ ನೆರವು ನೀಡುವ ಮೂಲಕ ರೋಟರಿ ಸಂಸ್ಥೆಯ ಸದಸ್ಯರು, ಕುಟುಂಬಸ್ಥರು ಮಡಿಕೇರಿ, ಮೇ ೧೮: ಬದುಕಿನಲ್ಲಿ ಬೇರೆ ಯಾವ ಕಾರ್ಯಗಳಲ್ಲಿಯೂ ದೊರಕದ ಆತ್ಮತೃಪ್ತಿ, ಸಮಾಧಾನ ಜನ ಸೇವಾ ಕಾರ್ಯಗಳಲ್ಲಿ ಖಂಡಿತಾ ದೊರಕುತ್ತದೆ. ಬೇರೆಯವರಿಗೆ ನೆರವು ನೀಡುವ ಮೂಲಕ ರೋಟರಿ ಸಂಸ್ಥೆಯ ಸದಸ್ಯರು, ಕುಟುಂಬಸ್ಥರು ಸಮಾರಂಭ ಉದ್ಘಾಟಿಸಿ ಮಾತನಾಡಿದ ರವೀಂದ್ರ ಭಟ್, ಗೆಳೆತನಕ್ಕಾಗಿ ೧೧೭ ವರ್ಷಗಳ ಹಿಂದೆ ಸ್ಥಾಪಿತವಾದ ರೋಟರಿ ಸಂಸ್ಥೆಯು ಪ್ರಸ್ತುತ ವಿಶ್ವದಲ್ಲಿ ೧೩ ಲಕ್ಷಕ್ಕೂ ಅಧಿಕ ಸದಸ್ಯರ ತಂಡವನ್ನು ಹೊಂದಿದ್ದು ಅಗತ್ಯವುಳ್ಳವರಿಗೆ ನೆರವು ನೀಡುವ ಮಹತ್ವದ ಸೇವಾ ಕಾರ್ಯಗಳಲ್ಲಿ ರೋಟರಿ ಸಂಸ್ಥೆ ಯಶಸ್ವಿಯಾಗಿ ತೊಡಗಿಸಿಕೊಂಡಿದೆ ಎಂದು ರವೀಂದ್ರ ಭಟ್ ಹೇಳಿದರು.
ರೋಟರಿ ಜಿಲ್ಲೆಯಲ್ಲಿ ೩೬೦೦ ಸದಸ್ಯರಿದ್ದು ೮೬ ಕ್ಲಬ್ಗಳು ವಾರ್ಷಿಕ ೫೫ ಕೋಟಿಗೂ ಮಿಕ್ಕಿದ ಸೇವಾ ಕಾರ್ಯಯೋಜನೆಗಳನ್ನು ನಿರ್ವಹಿಸುತ್ತಿದೆ. ರೋಟರಿಗೆ ನೀಡುತ್ತಿರುವ ಹಣ ಖಂಡಿತಾ ವ್ಯರ್ಥ ವಾಗುವುದಿಲ್ಲ.
(ಮೊದಲ ಪುಟದಿಂದ) ಜೀವನದಲ್ಲಿ ಬೇರೆ ಯಾವ ಕಾರ್ಯಗಳಲ್ಲಿಯೂ ಸಿಕ್ಕದ ತೃಪ್ತಿ ಸಮಾಜಸೇವಾ ಕಾರ್ಯಗಳಲ್ಲಿ ದೊರಕುತ್ತದೆ. ರೋಟರಿಗೆ ನೀಡಿದ ಹಣ ನಿಜವಾದ ಫಲಾನುಭವಿಗೇ ನೆರವಿನ ಪ್ರಯೋಜನ ದೊರಕುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ., ೧೭ ವರ್ಷಗಳ ಹಿಂದೆ ಪ್ರಾರಂಭವಾದ ಮಿಸ್ಟಿ ಹಿಲ್ಸ್ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯನ್ನು ಪಡೆದಿದ್ದು ಕಳೆದ ೧೦ ತಿಂಗಳಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಜನಸೇವೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಪ್ರತಿಯೊಂದು ಕಾರ್ಯಕ್ರಮಗಳನ್ನೂ ಮಿಸ್ಟಿ ಹಿಲ್ಸ್ ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದೂ ಅನಿಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ ಕುಮಾರ್ ಮಾತನಾಡಿ, ಮಿಸ್ಟಿ ಹಿಲ್ಸ್ ವಲಯ ೬ ರ ೧೨ ಕ್ಲಬ್ಗಳಿಗೆ ಮಾದರಿಯಾಗುವಂತೆ ಯೋಜನಾ ಕಾರ್ಯಗಳನ್ನು ನಿರ್ವಹಿಸಿದೆ ಎಂದು ಹೇಳಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ, ಸ್ಮಿತಾ ರವೀಂದ್ರ ಭಟ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭ ನಗರಸಭೆಯ ಇಂಜಿನಿಯರ್ ಶಮಂತ್, ಲೆಕ್ಕಪರಿಶೋಧಕ ಟಿ.ಕೆ. ಸುಧೀರ್ ಅವರು ಮಿಸ್ಟಿ ಹಿಲ್ಸ್ಗೆ ಸೇರ್ಪಡೆಯಾದರು.
ಬಿ.ಜಿ. ಅನಂತಶಯನ, ಕೆ.ಡಿ. ದಯಾನಂದ್, ಜಿ.ಆರ್. ರವಿಶಂಕರ್, ವಿನೋದ್ ಅಂಬೆಕಲ್, ಬಿ.ಕೆ. ರವೀಂದ್ರ ರೈ, ದೇವಣೀರ ತಿಲಕ್, ಪೂವಯ್ಯ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.
ಸಾಧಕರಿಗೆ ಸನ್ಮಾನ
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿ ನಗರ ಸಂಚಾರಿ ಪೊಲೀಸ್ ಎ.ಎಸ್.ಐ. ಐಮುಡಿಯಂಡ ನಂದ, ನಗರಸಭೆಯ ಪೌರಕಾರ್ಮಿಕ ಹನುಮಂತಪ್ಪ, ಸುಂಟಿಕೊಪ್ಪದ ಯುವ ಪ್ರತಿಭೆ ಶ್ರೀಶಾ, ಮಡಿಕೇರಿ ನಗರಸಭೆಯ ಅಧ್ಯಕ್ಷೆಯಾಗಿರುವ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಅವರನ್ನು ರೋಟರಿ ರಾಜ್ಯಪಾಲ ರವೀಂದ್ರ ಭಟ್ ಸನ್ಮಾನಿಸಿ, ಗೌರವಿಸಿದರು.