ವೀರಾಜಪೇಟೆ, ಮೇ ೧೮: ಕೋಟೆಕೊಪ್ಪಲು ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನ ವತಿಯಿಂದ ದೇವಾಲಯದಲ್ಲಿ ಹರಿಸೇವೆ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಮಾತನಾಡಿದ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಅವರು, ವರ್ಷಂಪ್ರತಿ ಮೇ ತಿಂಗಳಲ್ಲಿ ದೇವರ ಉತ್ಸವ ನಡೆಯುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಹಬ್ಬ ಆಚರಣೆ ಮಾಡಲು ಸಾಧ್ಯವಾಗಲಿಲ.್ಲ ಆದ್ದರಿಂದ ಈ ವರ್ಷ ಹಬ್ಬವನ್ನು ಆಚರಣೆ ಮಾಡಲಾಯಿತು ಎಂದು ತಿಳಿಸಿದರು.
ದೇವಾಲಯದ ಉಪಾಧ್ಯಕ್ಷ ಡಾಲು, ದೇವಾಲಯ ಸಮಿತಿಯ ವಸಂತ ರಘು, ಸುರೇಶ್, ಸುದಿ ಹಾಜರಿದ್ದರು.