ಗೋಣಿಕೊಪ್ಪಲು, ಮೇ ೧೮: ಚೆಸ್ಕಾಂನ ನಿರ್ಲಕ್ಷö್ಯದಿಂದಾಗಿ ವಿದ್ಯುತ್ ಕಂಬದಲ್ಲಿ ಹೊತ್ತಿ ಉರಿದ ಬೆಂಕಿಯಿAದ ಆ ಮಾರ್ಗದಲ್ಲಿ ತೆರಳುತ್ತಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದಲ್ಲಿ ಮುಂಜಾನೆ ಸಂಭವಿಸಿದೆ. ಗ್ರಾಮದ ಕಾಫಿ ಬೆಳೆಗಾರರಾದ ಅಜ್ಜಮಾಡ ಚಂಗಪ್ಪ ಅವರ ಸಮಯ ಪ್ರಜ್ಞೆಯಿಂದಾಗಿ ಪಾರಾಗಿದ್ದಾರೆ.
ಬುಧವಾರ ಮುಂಜಾನೆ ಎಂದಿನAತೆ ಕಾರ್ಮಿಕರು ದೈನಂದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕುರ್ಚಿ ಮುಖ್ಯರಸ್ತೆಯಲ್ಲಿರುವ ವಿದ್ಯುತ್ ಕಂಬದಲ್ಲಿದ್ದ ಇನ್ಸೂಲೇಟರ್ ತೊಂದರೆಗೊಳಗಾಗಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯು ನಂತರ ಧಗಧಗನೆ ಉರಿಯಲು ಆರಂಭಿಸಿದೆ. ಆದರೆ ಈ ವಿದ್ಯುತ್ ತೊಂದರೆಯಿAದ ಶ್ರೀಮಂಗಲದ ಕಚೇರಿಯಲ್ಲಿ ಲೈನ್ಟ್ರಿಪ್ ಆಗದೆ ಸುಮಾರು ೧೦ ನಿಮಿಷಗಳ ಕಾಲ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಂಬದ ಸುತ್ತಲಿನ ಸುಮಾರು ೨೦ ಮೀಟರ್ ದೂರದಲ್ಲಿ ಬೆಂಕಿಯ ಶಾಖ ಕಾಣಿಸಿಕೊಂಡಿದೆ.
ಇದೇ ಮಾರ್ಗದಲ್ಲಿ ತೆರಳುತ್ತಿದ್ದ ರೈತ ಸಂಘದ ಮುಖಂಡ ಅಜ್ಜಮಾಡ ಚಂಗಪ್ಪ ಇದನ್ನು ಕಂಡು ವಿದ್ಯುತ್ ಕಂಬದೆಡೆಗೆ ತೆರಳುತ್ತಿದ್ದ ಕಾರ್ಮಿಕರನ್ನು ರಸ್ತೆಯಲ್ಲಿಯೇ ತಡೆದು ಹಿಂದಕ್ಕೆ ಕಳುಹಿಸಿದ್ದಾರೆ. ನಂತರ ಶ್ರೀಮಂಗಲ ಚೆಸ್ಕಾಂ ಕಚೇರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಲೈನ್ ಕಡಿತ ಮಾಡಿಸಿದ್ದಾರೆ. ಇದರಿಂದ ದೊಡ್ಡದಾಗಿ ಸಂಭವಿಸಬಹುದಾಗಿದ್ದ ದುರ್ಘಟನೆ ತಪ್ಪಿದಂತಾಗಿದೆ.
ಈ ಭಾಗದಲ್ಲಿ ಚೆಸ್ಕಾಂ ಇಲಾಖೆಯ ನಿರ್ಲಕ್ಷö್ಯದಿಂದಾಗಿ ಈ ಹಿಂದೆ ಬೆಳೆದು ನಿಂತಿರುವ ಫಸಲುಭರಿತ ಕಾಫಿ ಗಿಡಗಳು ವಿದ್ಯುತ್ ತಂತಿಯಿAದ ಸುಟ್ಟು ಕರಕಲಾಗಿತ್ತು. ಶ್ರೀಮಂಗಲ ಹೋಬಳಿಯ ಕುರ್ಚಿ, ಬೀರುಗ ಭಾಗದಲ್ಲಿನ ರೈತರ ಕಾಫಿ ತೋಟದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗುತ್ತಿವೆ. ಈ ತಂತಿಗಳು ಅತ್ಯಂತ ತಳಮಟ್ಟದಲ್ಲಿದ್ದು ಇಲ್ಲಿಯತನಕ ಇವುಗಳ ಬಗ್ಗೆ ಚೆಸ್ಕಾಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ಭಾಗದಲ್ಲಿ ವಿದ್ಯುತ್ ತಂತಿಗಳು ತೋಟದಲ್ಲಿ ತುಂಡಾಗಿ ಬಿದ್ದಿರುವುದು ಹೊಸತೇನಲ್ಲ.
ಆಶ್ಚರ್ಯವೆಂಬAತೆ ವಿದ್ಯುತ್ ತಂತಿಗಳು ಕಂಬದಿAದ ಸಂಪರ್ಕ ಕಡಿತಗೊಂಡಾಗ ಸಂಬAಧಿಸಿದ ಮುಖ್ಯ ಕಚೇರಿಗಳಲ್ಲಿ ಈ ಭಾಗದ ವಿದ್ಯುತ್ ಸಂಪೂರ್ಣ ನಿಲುಗಡೆಯಾಗುತ್ತಿಲ್ಲ. ಶ್ರೀಮಂಗಲ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚೆಸ್ಕಾಂನ ಇಂಜಿನಿಯರ್ ಹಾಗೂ ಸಿಬ್ಬಂದಿಗಳ ನಿರ್ಲಕ್ಷö್ಯದಿಂದ ಇಂತಹ ಅನಾಹುತಗಳು ಪ್ರತಿನಿತ್ಯ ಸಂಭವಿಸುತ್ತಿವೆ.
ಸಿಬ್ಬAದಿಗಳ ನಿರ್ಲಕ್ಷö್ಯದಿಂದ ಈ ರೀತಿಯ ಸಮಸ್ಯೆಗಳು ಈ ಭಾಗದಲ್ಲಿ ಮಾಮೂಲಿಯಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ವಿದ್ಯುತ್ ಕಂಬದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ವಿದ್ಯುತ್ ತಂತಿ ತುಂಡಾಗಿ ರಸ್ತೆ ಬದಿಗೆ ಬಿದ್ದಿದ್ದರೂ ವಿದ್ಯುತ್ ಮಾತ್ರ ಕಡಿತಗೊಳ್ಳದಿರುವುದು ಚೆಸ್ಕಾಂ ಇಲಾಖೆಯ ನಿರ್ಲಕ್ಷö್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಫಿ ಬೆಳೆಗಾರ ಅಜ್ಜಮಾಡ ಚಂಗಪ್ಪ ಹೇಳಿದ್ದಾರೆ.
-ಹೆಚ್.ಕೆ. ಜಗದೀಶ್