ಗೋಣಿಕೊಪ್ಪಲು, ಮೇ ೧೮: ಮೇ ೪ ರಂದು ೬೦ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ಹೆಚ್.ಡಿ. ಕೋಟೆಯ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಆಗಮಿಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಪ್ರದೇಶದ ಗೇಟ್ ಬಳಿ ಪ್ರತಿಭಟನೆ ಆರಂಭಿಸಿದರು. ಇದೀಗ ತಮ್ಮ ಬೇಡಿಕೆಗಳು ಈಡೇರುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಕಳೆದ ಹತ್ತು ದಿನಗಳಿಂದ ಮಳೆ ಗಾಳಿ ಎನ್ನದೆ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ಲಾಸ್ಟಿಕ್ ಹೊದಿಕೆಯ ಆಶ್ರಯ ಪಡೆದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಮೈಸೂರು, ಹುಣಸೂರು ಹಾಗೂ ಹೆಚ್.ಡಿ. ಕೋಟೆಯ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಸತತವಾಗಿ ಮನವೊಲಿಸಿದ್ದರೂ ತಮ್ಮ ಬೇಡಿಕೆಗಳು ಈಡೇರದೆ ಪ್ರತಿಭಟನೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದರು.

ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಂಘ-ಸAಸ್ಥೆಯ ಪ್ರತಿನಿಧಿಗಳು ತೆರಳಿ ಬೆಂಬಲ ವ್ಯಕ್ತಪಡಿಸಿ

(ಮೊದಲ ಪುಟದಿಂದ) ಆಹಾರ ಧಾನ್ಯಗಳನ್ನು ವಿತರಿಸಿದ್ದರು. ಪ್ರತಿಭಟನೆಯಲ್ಲಿ ತೊಡಗಿದ್ದ ಹೋರಾಟದ ನಾಯಕ ಜೇನು ಕುರುಬರ ಸಣ್ಣಯ್ಯ ಅಸ್ವಸ್ಥಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವಿಪರೀತ ಮಳೆ, ಗಾಳಿ ನಡುವೆ ಮಹಿಳೆಯರು ಹಾಗೂ ಮಕ್ಕಳು ಪ್ಲಾಸ್ಟಿಕ್ ಹೊದಿಕೆಯ ಅಡಿಯಲ್ಲಿ ಹಗಲು-ರಾತ್ರಿ ಕಳೆದಿದ್ದರು. ಅರಣ್ಯ ಪ್ರದೇಶದ ಅಂಚಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಅರಣ್ಯದಂಚಿನಲ್ಲಿ ವನ್ಯ ಪ್ರಾಣಿಗಳ ಆಗಮನದ ಭಯವಿದ್ದರೂ ಇದನ್ನು ಲೆಕ್ಕಿಸದೆ ಹೋರಾಟದ ಮುಂಚೂಣಿ ನಾಯಕ ಜೇನು ಕುರುಬರ ಅಯ್ಯಪ್ಪ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ನಿರಂತರ ಪ್ರತಿಭಟನೆ ನಡೆದಿತ್ತು.

ದಿನನಿತ್ಯದ ಆಹಾರಕ್ಕಾಗಿ ಪರಿತಪಿಸುತ್ತಿದ್ದ ವೇಳೆ ಸಮೀಪದಲ್ಲಿರುವ ಕಾಫಿ ತೋಟ ಮಾಲೀಕರ ತೋಟಕ್ಕೆ ತೆರಳಿ ಅಲ್ಲಿರುವ ಹಲಸಿನ ಹಣ್ಣು ಹಾಗೂ ಕಾಯಿಯನ್ನು ತಂದು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು. ಸಮೀಪದ ಕಾಫಿ ಬೆಳೆಗಾರರು ಹೋರಾಟದ ಸ್ಥಳಕ್ಕೆ ತೆರಳಿ ಆಹಾರ ಸಾಮಗ್ರಿಗಳ ಸಹಕಾರ ನೀಡಿದ್ದರು.

ಹೆಚ್.ಡಿ. ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಆಗಮಿಸಿರುವ ೬೦ಕ್ಕೂ ಆಧಿಕ ಕುಟುಂಬಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಮೈಸೂರು ಜಿಲ್ಲಾಧಿಕಾರಿಗಳಾದ ಗೌತಮ್ ಬಗಾದಿ ಹೋರಾಟಗಾರರ ಮುಖಂಡರೊAದಿಗೆ ದೂರವಾಣಿ ಮೂಲಕ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಹೋರಾಟವನ್ನು ಕೈ ಬಿಡುವಂತೆ ಅಗತ್ಯವಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಬಹುದಾಗಿದೆ ಎಂದು ಹೇಳಿದ್ದರು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹುಣಸೂರು ತಾಲೂಕಿನ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ಹುಣಸೂರು ತಾಲೂಕಿನ ತಹಶೀಲ್ದಾರ್ ರತ್ನಾಂಭಿಕೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಐಟಿಡಿಪಿ ಇಲಾಖೆಯ ಅಧಿಕಾರಿಗಳು ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ತೆರಳಿ ಹೋರಾಟಗಾರರ ಬೇಡಿಕೆಯಂತೆ ಭೂಮಿಯ ಸಮತಟ್ಟು ಕಾರ್ಯ ಹಾಗೂ ಆರ್‌ಟಿಸಿ ವಿತರಣೆ ಮಾಡುವ ಸಲುವಾಗಿ ಹಗಲು ರಾತ್ರಿ ಎನ್ನದೆ ಅಧಿಕಾರಿಗಳ ತಂಡ ಕೆಲಸ ನಿರ್ವಹಿಸಿತ್ತು. ಇದೀಗ ಪನರ್ವಸತಿ ಕೇಂದ್ರದಲ್ಲಿ ಬಹುತೇಕ ೬೧೩ ಎಕರೆ ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ಕೆಲಸ ಅಂತಿಮಗೊAಡಿದೆ. ಅಲ್ಲದೆ ಪುನರ್ವಸತಿ ಕೇಂದ್ರದಲ್ಲಿರುವ ೧೭೭ ಕುಟುಂಬಗಳಿಗೆ ವೈಯಕ್ತಿಕ ೩ ಎಕರೆಯ ಆರ್‌ಟಿಸಿ ಒದಗಿಸಲು ಕಂದಾಯ ಇಲಾಖೆಯು ಮುಂದಾಗಿದೆ.

ಪ್ರತಿಭಟನೆ ಸ್ಥಳವಾದ ಅಡುಗುಂಡಿಯ ಬಳಿ ಅರಣ್ಯ ಇಲಾಖೆಯ ಡಿಸಿಎಫ್ ಮಹೇಶ್ ಕುಮಾರ್, ಹುಣಸೂರು ಅರಣ್ಯ ಇಲಾಖೆ ಮೇಟಿಕುಪ್ಪೆ ಎಸಿಎಫ್ ಮಹದೇವ, ನಾಗರಹೊಳೆ ವನ್ಯಜೀವಿ ಭಾಗದ ಎಸಿಎಫ್ ಗೋಪಾಲ್, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಸತೀಶ್, ಹುಣಸೂರು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ, ಮೈಸೂರು ಜಿಲ್ಲೆಯ ಐಟಿಡಿಪಿ ಜಿಲ್ಲಾ ಅಧಿಕಾರಿ ಪ್ರಭಾ, ಹೆಚ್.ಡಿ. ಕೋಟೆ ತಾಲೂಕು ಅಧಿಕಾರಿ ನಾರಾಯಣ ಸ್ವಾಮಿ, ಸೇರಿದಂತೆ ವೀರಾಜಪೇಟೆ, ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಕುಮಾರ್ ಹಾಗೂ ಸಿಬ್ಬಂದಿಗಳು ಮುಂಜಾನೆಯೇ ತೆರಳಿದ್ದರು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸುವಂತೆ