ಮಡಿಕೇರಿ, ಮೇ ೧೮: ಕಾರ್ಮಿಕ ಭವಿಷ್ಯ ನಿಧಿಗೆ ಸಂಬAಧಿಸಿದAತೆ ಪ್ರಾದೇಶಿಕ ಕಚೇರಿಗಳಿಗೆ ಮಾತ್ರವೇ ಹೆಚ್ಚಿನ ಅಧಿಕಾರ ಹಾಗೂ ಸ್ವಾತಂತ್ರö್ಯವಿದ್ದು, ಇದನ್ನು ಜಿಲ್ಲಾ ಕಚೇರಿಗಳಿಗೂ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕಾರ್ಮಿಕ ಭವಿಷ್ಯ ನಿಧಿಯ ಆಯುಕ್ತ ವಿನಿತ್‌ಕುಮಾರ್ ಹೇಳಿದರು.

ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ರಸ್ತೆಯಲ್ಲಿದ್ದ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ ಕಚೇರಿ ಅಂಚೆ ಕಚೇರಿ ಸಮೀಪದ ಎಸ್.ಬಿ.ಎಂ.ಟಿ.ಇ. ಕಟ್ಟಡಕ್ಕೆ ಸ್ಥಳಾಂತರಗೊAಡಿದ್ದು, ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸೂಕ್ತ ಜಾಗ ಸಿಕ್ಕರೆ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಅತಿಥಿಯಾಗಿ ಸಹಾಯಕ ಆಯುಕ್ತರಾದ ನಮೃತಾ ಪಾಟೀಲ್ ಉಪಸ್ಥಿತರಿದ್ದರು. ಇದೇ ವೇಳೆ ವಿನಿತ್‌ಕುಮಾರ್ ನಮೃತಾ ಪಾಟೀಲ್ ಇವರುಗಳನ್ನು ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರವರ್ತನ ಅಧಿಕಾರಿ ಕೆ.ಪಿ. ಆನಂದ್ ನಿರೂಪಿಸಿ, ಭವಾನಿ ಪ್ರಾರ್ಥಿಸಿದರು. ಜಿಲ್ಲಾ ಪ್ರವರ್ತನ ಅಧಿಕಾರಿ ಗುರುವಯ್ಯ ಸ್ವಾಗತಿಸಿ, ವಂದಿಸಿದರು.