ಗೋಣಿಕೊಪ್ಪಲು, ಮೇ ೧೬: ಗೋಣಿಕೊಪ್ಪ ಪುರಸಭೆಯಾಗಿದ್ದ ಸಂದರ್ಭದ ಪ್ರಪ್ರಥಮ ಅಧ್ಯಕ್ಷರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಬುಟ್ಟಿಯಂಡ ಎಂ.ಅಪ್ಪಾಜಿ ೧೦೦ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಗೋಣಿಕೊಪ್ಪಲುವಿನ ನಿವಾಸದಲ್ಲಿ ಲವಲವಿಕೆಯಿಂದ ಇರುವ ಅಪ್ಪಾಜಿಯವರಿಗೆ ನೂರು ವರ್ಷಗಳು ಸಂದಿವೆ. ಇದರ ಸವಿ ನೆನಪಿನಲ್ಲಿ ಕುಟುಂಬಸ್ಥರು ಹಿರಿಯರಾದ ಅಪ್ಪಾಜಿಯವರೊಂದಿಗೆ ಹುಟ್ಟು ಹಬ್ಬ ಆಚರಿಸಿದರು. ಈ ವೇಳೆ ಕುಟುಂಬದ ಸದಸ್ಯರೆಲ್ಲರು ಸೇರಿ ಶತಾಯುಷಿ ಅಪ್ಪಾಜಿಯವರಿಗೆ ಸಿಹಿ ತಿನಿಸಿದರು.

ಗೋಣಿಕೊಪ್ಪಲುವಿನ ರಿಫಾರ್ಮರ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದ ಬುಟ್ಟಿಯಂಡ ಎಂ.ಅಪ್ಪಾಜಿ ಅವರು ಆಡಳಿತ ಮಂಡಳಿ ಸನ್ಮಾನಿಸಿ ಗೌರವಿಸಿದೆ. ಈ ವೇಳೆ ರಿಫಾರ್ಮರ್ಸ್ ಕ್ಲಬ್‌ನ ಅಧ್ಯಕ್ಷ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಪುಳ್ಳಂಗಡ ನರೇಂದ್ರ, ಖಜಾಂಚಿ ಕೆ.ಎಸ್.ಗಣಪತಿ, ವ್ಯವಸ್ಥಾಪಕರಾದ ಶ್ರೀನಿವಾಸ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.