ಗೋಣಿಕೊಪ್ಪಲು, ಮೇ ೧೬: ಸಂಘಟನೆಯನ್ನು ಆರಂಭಿಸುವುದು ಸುಲಭ, ಆದರೆ ಅದನ್ನು ಮುನ್ನಡೆಸುವುದು ಅತ್ಯಂತ ದೊಡ್ಡ ಜವಾಬ್ದಾರಿಯಾಗಿದೆ. ಸಂಘಟನೆಯ ಒಗ್ಗಟ್ಟಿಗೆ ಎಂದಿಗೂ ಧಕ್ಕೆ ಬಾರದಿರಲಿ ಎಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್.ಸುಬ್ಬಯ್ಯ ಹೇಳಿದರು.

ಗೋಣಿಕೊಪ್ಪ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊನ್ನಂಪೇಟೆ ತಾಲೂಕು ಖಾಸಗಿ ಬಸ್ ಕಾರ್ಮಿಕರ ಸಂಘದ ನೂತನ ಸಂಘವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ವಾಹನ ಚಾಲಕರಿಗೆ ತಮ್ಮ ವಾಹನದ ಮೇಲೆ ಪೂರ್ಣ ಮಾಹಿತಿ ಹಾಗೂ ಪರಿಜ್ಞಾನವಿರಬೇಕು,

ತಮ್ಮ ವಾಹನವನ್ನು ಸದಾ ಪ್ರೀತಿಸಬೇಕು. ಆರ್ಥಿಕ ಭದ್ರತೆ ಇಲ್ಲದ ಕಾರಣ ಪ್ರತಿ ಕಾರ್ಮಿಕನು ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಚಾಲಕ ವೃತ್ತಿ ಸುಲಭವಲ್ಲ, ಇದು ಕಬ್ಬಿಣದ ಕಡಲೆ ಇದ್ದ ಹಾಗೆ ಕುಟುಂಬದ ಭವಿಷ್ಯದ ಹಿತದೃಷ್ಟಿಯಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಮ್ಮ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸ ನೂತನ ಸಂಘದಿAದ ನಡೆಯಲಿ. ನೂತನ ಸಂಘವು ಮಾದರಿಯಾಗಿ ಹೊರಹೊಮ್ಮಲಿ ಎಂದರು.

ಸAಘದ ನೂತನ ಅಧ್ಯಕ್ಷ ಎಂ.ಪಿ.ರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಕೊರೊನಾ ಸಂದರ್ಭದ ಅವಧಿಯಲ್ಲಿ ಚಾಲಕರು ಹಾಗೂ ಕಾರ್ಮಿಕರು ವರ್ಷಗಳ ಕಾಲ ಉದ್ಯೋಗವಿಲ್ಲದೆ ಪಟ್ಟ ಕಷ್ಟ ಹೇಳತೀರದು ಈ ವೃತ್ತಿಯನ್ನು ಹೊರತುಪಡಿಸಿ ಬೇರೆ ಯಾವುದೇ ವೃತ್ತಿಯ ಅನುಭವವಿಲ್ಲದ ನಾವುಗಳು ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಟ್ಟಿದ್ದೇವೆ. ಈ ಹಿನೆÀ್ನಲೆಯಲ್ಲಿ ಕಾರ್ಮಿಕರು ಜಾಗೃತಗೊಂಡು ಕಾರ್ಮಿಕರ ಸಂಘವನ್ನು ಅಸ್ವಿತ್ವಕ್ಕೆ ತರಲಾಗಿದೆ ಎಂದರು.

ನೂತನ ಕಾರ್ಯದರ್ಶಿ ಆಲೀರ ಸಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಕಾರ್ಮಿಕರ ಹಿತವನ್ನು ಕಾಪಾಡುವುದು ಸಂಘದ ಕರ್ತವ್ಯವಾಗಬೇಕು. ಕಷ್ಟದಲ್ಲಿರುವ ಕಾರ್ಮಿಕನ ಸಹಾಯಕ್ಕೆ ಸಂಘವು ಸದಾ ನಿಲ್ಲಬೇಕು ಎಂದರು. ಮಾಲೀಕ ಪಿ.ದಿಲನ್ ಚಂಗಪ್ಪ, ಹಿರಿಯ ವರ್ತಕರಾದ ಸಿ.ಡಿ.ಮಾದಪ್ಪ ಮಾತನಾಡಿದರು. ವೇದಿಕೆಯಲ್ಲಿ ಕಾರ್ಮಿಕ ಸಂಘದ ಕಾನೂನು ಸಲಹೆಗಾರಎನ್.ಪಿ.ಮಾದಯ್ಯ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಉಪಾಧ್ಯಕ್ಷ ಪುಲಿಯಂಡ ಅರುಣ್, ಖಜಾಂಚಿ ಟಿ.ಎನ್. ರವಿ, ಸಹ ಕಾರ್ಯದರ್ಶಿ ಶರೀಮ್ ನಿರ್ದೇಶಕರಾದ ಧನಂಜಯ್, ಸತೀಶ್, ಸುರೇಂದ್ರ., ಎಸ್.ಸಿ. ತಿಮ್ಮಯ್ಯ, ಕೆ.ಎಂ.ದಿನೇಶ್, ಅಜಿತ್‌ಗಣಪತಿ, ಸಂಜು, ಅಶೋಕ್, ಅಚ್ಚುತ್ತನ್, ವಿ.ಆರ್. ಸುರೇಶ್, ರಂಜಿತ್, ಸತೀಶ್ (ರಾಣಿ), ಕೆ.ಸಿ.ಮಧು ಹಾಗೂ ಸತೀಶ್‌ಕುಮಾರ್ ಕೆ. ಉಪಸ್ಥಿತರಿದ್ದರು. ಪವಿತ್ರ ಧನು ನಿರೂಪಿಸಿ ಸಂಘದ ಖಜಾಂಚಿ ರವಿ ಸ್ವಾಗತಿಸಿ ವಂದಿಸಿದರು.