ಗೋಣಿಕೊಪ್ಪ ವರದಿ, ಮೇ ೧೬: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಸೋಮವಾರ ಆರಂಭಗೊAಡಿರುವ ಮಿನಿ ಒಲಂಪಿಕ್ ಹಾಕಿ ಕ್ರೀಡೆಯಲ್ಲಿ ೧೪ ವರ್ಷದೊಳಗಿನ ವಿಭಾಗದ ಹಾಕಿಕೂರ್ಗ್ ಬಾಲಕ ಮತ್ತು ಬಾಲಕಿಯರ ತಂಡ ಮೊದಲ ಗೆಲುವಿನ ನಗೆ ಬೀರಿದೆ.

ಬಾಲಕರ ವಿಭಾಗದಲ್ಲಿ ಹಾಕಿಕೂರ್ಗ್ ತಂಡವು ಕಲಬುರಗಿ ವಿರುದ್ದ ೨೦-೦ ಗೋಲುಗಳಿಂದ ಗೆದ್ದು ಬೀಗಿತು. ಎಚ್. ಎ. ದೀಕ್ಷಿತ್ ೭ ಗೋಲು, ಬಿನ್ ಬೋಪಣ್ಣ ೬ ಗೋಲು ಸಿಡಿಸಿ ಸಂಭ್ರಮಿಸಿದರು. ಪವನ್ ಪೊನ್ನಣ್ಣ ೩, ತನಿಶ್ ತಮ್ಮಯ್ಯ ೩, ಜಶನ್ ತಮ್ಮಯ್ಯ ೧ ಗೋಲು ಹೊಡೆದು ಕುಣಿದು ಕುಪ್ಪಳಿಸಿದರು.

ಹಾಕಿಕೂರ್ಗ್ ಬಾಲಕಿಯರು ದಕ್ಷಿಣ ಕನ್ನಡ ತಂಡವನ್ನು ೧೦-೦ ಗೋಲುಗಳಿಂದ ಮಣಿಸಿತು. ಪ್ರಿನ್ಸಿಯಾ ೭ ಗೋಲು ಸಿಡಿಸಿದರು. ದೇಚಕ್ಕ ೧, ತ್ರಿಷುಲ್ ೧, ಪರ್ಲ್ ಪೊನ್ನಮ್ಮ ೧ ಗೋಲು ಬಾರಿಸಿದರು. ತರಬೇತುದಾರ ವಿನೋದ್‌ಕುಮಾರ್, ಎಚ್. ಎ. ಅರುಣ್, ವ್ಯವಸ್ಥಾಪಕಿ ಕಾವೇರಮ್ಮ ತಂಡದಲ್ಲಿದ್ದಾರೆ.