ಅಮ್ಮತ್ತಿ ಒಂಟಿಯAಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿ ನೀಡುವ ಮೂಲಕ ತರಗತಿಗಳಿಗೆ ಬರಮಾಡಿಕೊಳ್ಳಲಾಯಿತು. ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.

ಕಿರುಗೂರು : ಪೊನ್ನಂಪೇಟೆ ಕ್ಲಸ್ಟರ್‌ನ ಕಿರುಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ರಾಜಮ್ಮ ಸಹ ಶಿಕ್ಷಕಿ ವೀಣಾ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಶಾಲೆಗೆ ಸ್ವಾಗತಿಸಿದರು. ಈ ಸಂದರ್ಭ ಎಸ್‌ಡಿಎಂಸಿ ಸಮಿತಿ ಸದಸ್ಯರು ಹಾಗೂ ಪೋಷಕರು ಹಾಜರಿದ್ದರು.

*ಗೋಣಿಕೊಪ್ಪ: ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್ ಅವರ ಪ್ರಯತ್ನದಿಂದ ದಾನಿಗಳಾದ ಕುಶಾಲನಗರದ ಪುಲಿಯಂಡ ರಾಮು ಅವರು ನೀಡಿದ ಸಾವಿರಕ್ಕೂ ಹೆಚ್ಚು ನೋಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಾಲೆಯ ಅನುಕೂಲಕ್ಕಾಗಿ ೧ ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಒದಗಿಸಿರುವುದಾಗಿ ಮುಖ್ಯೋಪಾಧ್ಯಾಯರು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚ್ರೆöÊತ್ರಾ ಬಿ ಚೇತನ್, ಸದಸ್ಯೆ ಕೊಣಿಯಂಡ ಬೋಜಮ್ಮ, ಸಿ.ಆರ್.ಪಿಗಳಾದ ರಾಧ, ಜ್ಯೋತೀಶ್ವರಿ, ವಿಶಲಾಕ್ಷಿ, ಶಿಕ್ಷಕರುಗಳಾದ ದಮಯಂತಿ, ಅನಿತಾ, ಸತೀಶ್ ಬಿ.ಆರ್. ರಮಾನಂದ, ಜಯಶ್ರೀ, ಜೋಶ್ನಿಕ, ಇಂದಿರ, ಶಾರದ, ತ್ರಿವೇಣಿ, ಪೂಜಾ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಾಂತಿ ಹಾಜರಿದ್ದರು.ಕೂಡಿಗೆ: ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹೂ ಮತ್ತು ಸಿಹಿ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಣ್ಣಕ್ಕ ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಡಾ. ಸದಾಶಿವ ಎಸ್ ಪಲೇದ್ , ಸಹ ಶಿಕ್ಷಕರಾದ ಕಮಲ, ವಿಜಯಲಕ್ಷಿö್ಮ, ದೀಪಿಕಾ ಸೇರಿದಂತೆ ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮತ್ತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಇಂದಿರಾ, ಸಹಶಿಕ್ಷಕಿ ಸುಮ ಮಕ್ಕಳಿಗೆ ಸಿಹಿ ಹಾಗೂ ಬಲೂನು ವಿತರಿಸಿ ಮಕ್ಕಳನ್ನು ಸ್ವಾಗತಿಸಿದರು. ಕುಶಾಲನಗರ: ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಆರಂಭೋತ್ಸವ ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ನಡೆಯಿತು. ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ ವೃಂದ ಪುಷ್ಪಗುಚ್ಚ ನೀಡಿ ಸಿಹಿ ವಿತರಿಸಿ ಆತ್ಮೀಯವಾಗಿ ಬರಮಾಡಿಕೊಂಡಿತು.

ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಪ್ರಥಮ ದಿನ ಉತ್ಸಾಹದಿಂದ ಆಟೋಟಗಳಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪ, ರಾಣಿ ನೇತೃತ್ವದ ಶಿಕ್ಷಕರ ತಂಡ ಮಕ್ಕಳನ್ನು ಬರಮಾಡಿಕೊಂಡಿತು.ಈ ಸಂದರ್ಭ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಪ್ರಮುಖರಾದ ರುಕ್ಸಾನ ಹಾಗೂ ಸಿ ಆರ್ ಪಿಗಳು ಪರಿಶೀಲನೆ ನಡೆಸಿದರು. ಶಿಕ್ಷಕರಾದ ಶಿವಣ್ಣ ಕೆ.ಸಿ, ವೇಣುಗೋಪಾಲನ್ ಎಸ್.ಎನ್, ತುಳಸಿ ಎಂ, ನವೀನ್ ಕುಮಾರ್ ಪಿ, ಸುಪ್ರಭ ಹೆಚ್. ಎನ್. ಹಾಜರಿದ್ದರು. (ಮುಂದುವರಿಯುವುದು)