ಮಡಿಕೇರಿ, ಮೇ ೧೬: ಇತ್ತೀಚೆಗೆ ಪೊನ್ನಂಪೇಟೆಯ ಸಾಯಿ ಶಂಕರ ಶಾಲಾ ಆವರಣದಲ್ಲಿ ನಡೆದ ಭಜರಂಗದಳ ಪ್ರಶಿಕ್ಷಣ ವರ್ಗದ ಶಿಬಿರ ಸಂದರ್ಭ ಶಸ್ತಾçಸ್ತç ತರಬೇತಿ ನೀಡಲಾಗಿದೆ ಎಂದು ಆರೋಪಿಸಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪಿ.ಎಫ್.ಐ. ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಗೋಣಿಕೊಪ್ಪಲುವಿನ ಇಬ್ರಾಹಿಂ ಎಂಬವರು ದೂರು ನೀಡಿದ್ದು, ಈ ರೀತಿ ಶಸ್ತಾçಸ್ತç ತರಬೇತಿ ನಡೆಸಿರುವುದು ಕಾನೂನು ವಿರೋಧಿ ಕಾರ್ಯವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಶಿಬಿರದಲ್ಲಿ ಏರ್‌ಗನ್ ತರಬೇತಿ ಮತ್ತು ತ್ರಿಶೂಲ ದೀಕ್ಷೆ ನಡೆದಿದೆ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಹಿತ ಎಸ್‌ಡಿಪಿಐ ಸದಸ್ಯರು ಮತ್ತಿತರ ಕೆಲವರು ಮಾಹಿತಿ ನೀಡಿದ್ದು, ಈ ಬಗ್ಗೆ ಪರ - ವಿರೋಧ, ಟೀಕೆ - ಟಿಪ್ಪಣಿ ಕಂಡುಬAದಿದೆ. ಇಂದು ರಾಜ್ಯ ಮಟ್ಟದಲ್ಲಿ ದೃಶ್ಯ ಮಾಧ್ಯಮ ಗಳಲ್ಲಿಯೂ ಈ ಕುರಿತಾಗಿ ರಾಷ್ಟಿçÃಯ ಪಕ್ಷಗಳ ಪ್ರಮುಖರು ಪರ- ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದುದು ಕಂಡುಬAದಿತು. ಈ ನಡುವೆ ವೀರಾಜಪೇಟೆ
(ಮೊದಲ ಪುಟದಿಂದ) ಉಪ ವಿಭಾಗ ಡಿವೈಎಸ್ಪಿ ನಿರಂಜನ್ ರಾಜ್ ಅರಸ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಅವರು ಈ ಕುರಿತಾಗಿ ವಿವರಿಸಿದ್ದು ಹೀಗೆ: ‘ಮೇ ೫ರಿಂದ ೧೧ರವರೆಗೆ ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಭಜರಂಗದಳದ ತರಬೇತಿ ಕಾರ್ಯಕ್ರಮ ನಡೆದಿದೆ. ೧೦ರಂದು ಮೆರವಣಿಗೆಯನ್ನೂ ಮಾಡಲಾಗಿದೆ. ಈ ನಡುವೆ ಶಿಬಿರಾರ್ಥಿಗಳಿಗೆ ಏರ್‌ಗನ್ ತರಬೇತಿಯನ್ನು ನೀಡಲಾಗಿದೆ. ಏರ್‌ಗನ್‌ಗಳನ್ನು ಖರೀದಿಸುವುದಕ್ಕೆ ಯಾವುದೇ ಪರವಾನಗಿ ಬೇಕಾಗಿಲ್ಲ. ಆದರೆ, ಇಂತಹ ತರಬೇತಿ ನಡೆಸಲು ಅವಕಾಶ ಇದೆಯೇ ಎನ್ನುವ ಕುರಿತು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ತ್ರಿಶೂಲ ದೀಕ್ಷೆ ಕುರಿತು ಪುಕಾರು ನೀಡಲಾಗಿದೆ. ೧೨೦ ಶಿಬಿರಾರ್ಥಿಗಳಿಗೆ ಕೊನೆಯ ದಿನ ನೆನಪಿನ ಕಾಣಿಕೆಯಾಗಿ ಬಾಕ್ಸ್ಗಳಲ್ಲಿ ಅರ್ಧ ಅಡಿಯ ತ್ರಿಶೂಲಗಳನ್ನು ನೀಡಲಾಗಿದೆ. ತರಬೇತಿಗೆ ಇದನ್ನು ಬಳಸಿಲ್ಲ. ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವುದು ಶೈಕ್ಷಣಿಕ ನಿಯಮದ ಅನ್ವಯ ಸಾಧ್ಯವಿದೆಯೇ ಎಂಬುದರ ಕುರಿತು ತಾಲೂಕು ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಕೇಳಲಾಗಿದೆ. ಆ ಬಳಿಕವಷ್ಟೇ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸ ಲಾಗುತ್ತದೆ. ಈಗಾಗಲೇ ರಾಜ್ಯ, ಅಂತರ್ ರಾಜ್ಯಮಟ್ಟದಲ್ಲಿ ಸುದ್ದಿಯಾಗಿರುವ ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಪರಿಶೀಲನೆ ನಡೆಸುತ್ತಿದೆ’ ಎಂದು ಡಿವೈಎಸ್ಪಿ ಖಚಿತಪಡಿಸಿದ್ದಾರೆ.
ಹಿಂದೂ ಯುವ ವಾಹಿನಿ ಪ್ರತಿಕ್ರಿಯೆ
ಈ ಬೆಳವಣಿಗೆಗಳ ಕುರಿತು ಹಿಂದೂ ಯುವ ವಾಹಿನಿಯ ರಾಜ್ಯ ಉಪಾಧ್ಯಕ್ಷ ಕುಲದೀಪ್ ಪೂಣಚ್ಚ ಅವರು ‘ಶಕ್ತಿ’ಗೆ ಈ ಕೆಳಗಿನ ಪ್ರತಿಕ್ರಿಯೆ ನೀಡಿದ್ದಾರೆ.
ಪೊನ್ನಂಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಡೆದ ಪ್ರಶಿಕ್ಷಣ ವರ್ಗದಲ್ಲಿ ತ್ರಿಶೂಲ ದೀಕ್ಷೆ ಹಾಗೂ ಶಸ್ತಾçಸ್ತç ತರಬೇತಿಗಳನ್ನು ನೀಡಲಾಗಿದೆ ಎಂದು ಕೆಲವರು ಆರೋಪಿಸಿದ್ದು ಇದು ಸಮಾಜದ ದಿಕ್ಕು ತಪ್ಪಿಸುವ ಕೆಲಸವಾಗಿದೆ.
ಸನಾತನ ಹಿಂದೂ ಧರ್ಮದಲ್ಲಿ ದೇವಾನುದೇವತೆಗಳು ತ್ರಿಶೂಲ ಹಾಗೂ ಶಸ್ತಾçಸ್ತçಗಳನ್ನು ಬಳಸುತ್ತಿದ್ದು, ಅದನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸಿ ಅದಕ್ಕೆ ಅದರದೇ ಆದ ಗೌರವವನ್ನು ನೀಡುತ್ತೇವೆ. ಕೊಡಗು ಜಿಲ್ಲೆಯಲ್ಲಿ ಕಾನೂನುಬದ್ಧವಾಗಿ ಪ್ರತಿಯೊಬ್ಬರ ಮನೆಯಲ್ಲಿ ಶಸ್ತಾçಸ್ತçಗಳಿದ್ದು ಅದನ್ನು ಗೌರವಯುತ ವಾಗಿ ಉಪಯೋಗಿಸುತ್ತೇವೆ. ಶಿಸ್ತುಬದ್ಧವಾಗಿ ಶಸ್ತಾçಸ್ತçಗಳ ತರಬೇತಿಯನ್ನು ಪಡೆದು ದೇಶ ರಕ್ಷಣೆಗಾಗಿ ಸೈನಿಕರಾಗಿ ಇರುತ್ತಾರೆ ಹೊರತು ಭಯೋತ್ಪಾದಕರಾಗಿ ದೇಶಕ್ಕೆ ಮಾರಕ ವಾಗುವ ಅಂಥವರಲ್ಲ ನಮ್ಮ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು. ನಾನೂ ಸೇರಿದಂತೆ ನಮ್ಮ ಸಂಘಟನೆಯ ಅನೇಕ ಪ್ರಮುಖರುಗಳು ಅಲ್ಲಿ ನಡೆಯುತ್ತಿದ್ದ ಪ್ರಶಿಕ್ಷಣ ವರ್ಗಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ದೇಶಾಭಿಮಾನದ ಬಗ್ಗೆ ಚರ್ಚಿಸಿದ್ದೇವೆ ಹೊರತು ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಅಲ್ಲ.ಅಲ್ಲಿ ಸೈನಿಕರಿಗೆ ಭಾರತಾಂಬೆಗೆ ಗೌರವ ಸಲ್ಲಿಸುವ ಕಾರ್ಯಗಳು ನಡೆಯುತ್ತಿತ್ತು ಹೊರತು ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿರಲಿಲ್ಲ.
ಕೊಡಗು ಜಿಲ್ಲೆ ಮಾತ್ರವಲ್ಲದೆ ರಾಷ್ಟçದಾದ್ಯಂತ ಯಾವುದಾದರೂ ಭಾಗದಲ್ಲಿ ಭಜರಂಗದಳ ಕೊಡಗು ಯುವಸೇನೆ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಏನಾದರೂ ಸಮಸ್ಯೆ ಉಂಟಾದರೆ ಹಿಂದೂ ಯುವವಾಹಿನಿ ಅದಕ್ಕೆ ಕಾನೂನಾತ್ಮಕ ಪ್ರತಿಕ್ರಿಯೆ ನೀಡಲಿದೆ ಎಂದು ಕುಲದೀಪ್ ಪೂಣಚ್ಚ ಎಚ್ಚರಿಸಿದ್ದಾರೆ.ಭಜರಂಗದಳ ಶಿಬಿರದಲ್ಲಿ ಶಸ್ತಾçಸ್ತç ಬಳಕೆ ವಿರುದ್ಧ ದೂರು