ಚೆಯ್ಯಂಡಾಣೆ, ಮೇ ೧೬: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಕೊಂಡAಗೇರಿಯ ಶಾದಿಮಹಲ್ ಸಭಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ನೂತನ ನಾಯಿಬ್ ಖಾಝಿ ಶಾದುಲಿ ಫೈಝಿ ಉಸ್ತಾದರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಾಗೂ ಕೊಡಗಿನಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕೊಡಗು ಸುನ್ನಿ ವೆಲ್ಫೇರ್ ಯು ಎ ಇ ಸಮಿತಿಯು ಕಳೆದ ಎರಡು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಈ ಬಾರಿ ೫ ಜೋಡಿಗಳಿಗೆ ಸೈಯದ್ ಇಬ್ರಾಹಿಂ ಬಾಫಕಿ ತಂಗಳ್ ಕೊಯಿಲಾಂಡಿ ರವರ ನೇತೃತ್ವದಲ್ಲಿ ನಿಖಾ ನೆರವೇರಿತು. ಈ ಬಾರಿ ಎಮ್ಮೆಮಾಡು, ಅಂಬಟ್ಟಿ, ಚಿಟ್ಟಡೆ, ಚೆರಿಯಪರಂಬು, ಕಟ್ಟೆಮಾಡು (ಕೊಂಡAಗೇರಿ)ವಿನ ಬಡ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು. ವಧು ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ, ವಸ್ತ್ರ, ವಾಚ್‌ಗಳನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶಾಫಿ ಸಅದಿ ತನ್ನೀರುಹಳ್ಳ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಈ ಸಂದರ್ಭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜ ಸೇವಕರಾದ ವಿ.ಪಿ. ಶಶಿದರ್, ಪಿ.ಆರ್.ಭರತ್, ನೆರವಂಡ ಉಮೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಶೈಖುನಾ ಮಹ್ಮೂದ್ ಉಸ್ತಾದರ ಅಗಲಿಕೆಯಿಂದ ತೆರವಾದ ನಾಯಿಬ್ ಖಾಝಿ ಸ್ಥಾನಕ್ಕೆ ನೂತನವಾಗಿ ನೇಮಕವಾದ ಶಾದುಲಿ ಫೈಝಿ ಉಸ್ತಾದರಿಗೆ ಕಾರನ್ನು ಉಡುಗರೆ ಯಾಗಿ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

(ಮೊದಲ ಪುಟದಿಂದ) ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭಾರತ ಬಹು ಸಂಸ್ಕೃತಿಯ ದೇಶವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರೊಂದಿಗೆ ನಾವು ಪ್ರೀತಿ ವಿಶ್ವಾಸದಿಂದ ವರ್ತಿಸಬೇಕು. ನಾವು ಪರಸ್ಪರ ಜಾತಿ ಧರ್ಮದ ಹೆಸರಿನಲ್ಲಿ ಕಿತ್ತಾಡಿಕೊಂಡರೆ ಅಂತರ‍್ರಾಷ್ಟಿçÃಯ ಮಟ್ಟದಲ್ಲಿ ನಾವು ತಲೆ ತಗ್ಗಿಸಬೇಕಾಗುತ್ತದೆ. ಪ್ರತಿಯೊಂದು ಧರ್ಮದ ಆಚರಣೆಗಳಿರಲಿ ಇನ್ನೊಂದು ಜಾತಿಯನ್ನು ಹೀಯಾಳಿಸುವಂತಿರಬಾರದು. ಯಾವ ಧರ್ಮವು ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಾಮರಸ್ಯ ಕಾಪಾಡಿಕೊಳ್ಳಬೇಕು. ಭಾವನಾತ್ಮಕ ವಿಷಯಗಳಿಗೆ ಆದ್ಯತೆ ನೀಡಿ ಕೋಮು ಸೌಹಾರ್ದತೆ ಕೆಡಿಸಬಾರದು ಎಂದು ಕರೆ ನೀಡಿದರು.

ಭಾರತದ ಸಂವಿದಾನದಲ್ಲಿ ಎಲ್ಲರು ಸಮಾನರಾಗಿ ಬದುಕುವ ಹಕ್ಕಿದೆ. ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಂಘರ್ಷವಿಲ್ಲದೆ ಬದುಕಬಹುದು. ಯುವಕರು ಗಲ್ಫ್ ನಲ್ಲಿ ಸಂಘಟನೆ ಕಟ್ಟಿ ಕೊಡಗಿನಲ್ಲಿರುವವರ ಬಗ್ಗೆ ಚಿಂತಿಸಿ ವಿಶ್ವ ಮಾನವ ಮನಸ್ಸನ್ನು ಹೊಂದಿದೆ ಇನ್ನು ಕೂಡ ಹಲವಾರು ಕಾರ್ಯಕ್ರಮ ನಡೆಸಲೆಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಪಿ.ಆರ್. ಭರತ್, ಸಾಮೂಹಿಕ ವಿವಾಹ ಮಾಡುವುದರ ಮೂಲಕ ಉತ್ತಮ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೆರವಂಡ ಉಮೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ ವಹಿಸಿ ಮಾತನಾಡಿದರು. ಯುಎಇ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು ಸಂಘಟನೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.

ರಿಯಾಜ್ ಕೊಂಡAಗೇರಿ ಸ್ವಾಗತಿಸಿ ಹಾಗೂ ಮುಜೀಬ್ ಕಡಂಗ ವಂದಿಸಿದರು. ವೇದಿಕೆಯಲ್ಲಿ ಸುನ್ನೀ ನಾಯಕರಾದ ಅಶ್ರಫ್ ಅಹ್ಸನಿ, ಯಾಕೂಬ್ ಮಾಸ್ಟರ್, ಹಫೀಲ್ ಸಅದಿ, ಇಸ್ಮಾಯಿಲ್ ಸಖಾಫಿ, ಸ್ಥಳೀಯ ಖತೀಬ್ ಯಾಸಿರ್ ಸಖಾಫಿ, ಕೊಂಡAಗೇರಿ ಜಮಾಅತ್ ಅಧ್ಯಕ್ಷ ಯುಸಫ್ ಹಾಜಿ, ಹನೀಫ ಸಖಾಫಿ, ಹ್ಯಾರಿಸ್ ಕುಂಜಿಲ, ಹಂಝ ಎಮ್ಮೆಮಾಡು, ಅರಫಾತ್ ನಾಪೋಕ್ಲು, ಅಹ್ಮದ್ ಚಾಮಿಯಾಲ್, ನಾಸಿರ್ ಕುಂಜಿಲ, ಹಂಝ ಎಚ್.ಎ. ಹಮೀದ್ ಕಬಡಗೇರಿ, ಎರ್ಮು ಹಾಜಿ ಕಾಟ್ರಕೊಲ್ಲಿ, ಮುಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ಖಾದರ್ ತಂಘಳ್ ಅಯ್ಯಂಗೇರಿ, ಶಾಫಿ ಸಖಾಫಿ ಕೊಂಡAಗೇರಿ, ಮೊಯಿದೀನ್ ಕುಟ್ಟಿ ಹಾಜಿ ಕೊಳಕ್ಕೇರಿ, ಮತಿತ್ತರರು ಉಪಸ್ಥಿತರಿದ್ದರು.

- ವರದಿ: ಅಶ್ರಫ್ ಚೆಯ್ಯಂಡಾಣೆ