ಕೂಡಿಗೆ, ಮೇ ೧೬: ಕಾವೇರಿ ನೀರಾವರಿ ನಿಗಮದ ವತಿಯಿಂದ ಕೂಡಿಗೆ ಸೈನಿಕ ಶಾಲೆ ಬಳಿ ಹಾರಂಗಿ ನದಿ ತಟದಲ್ಲಿ ಪ್ರವಾಹ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿದೆ. ೫ ಕೋಟಿ ವೆಚ್ಚದ ಕಾಮಗಾರಿಗೆ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ನವರು ಭೂಮಿಪೂಜೆ ನೆರವೇರಿಸಿದರು
ನಂತರ ಮಾತನಾಡಿದ ಅವರು, ದೇಶದ ರಕ್ಷಣಾ ಕ್ಷೇತ್ರಕ್ಕೆ ಸೈನಿಕ ಶಾಲೆಗಳ ಕೊಡುಗೆ ಪ್ರಮುಖವಾಗಿದೆ. ಪ್ರವಾಹ ಸಂದರ್ಭ ಹಾರಂಗಿ ನದಿ ನೀರು ಶಾಲೆಯ ಪ್ರಾಂಗಣಕ್ಕೆ ನುಗ್ಗಿ ಅವ್ಯವಸ್ಥೆ ಉಂಟಾಗುತ್ತಿತ್ತು. ಶಾಲಾ ಮುಖ್ಯಸ್ಥರ ಕೋರಿಕೆ ಮೇರೆಗೆ ನೀರಿನ ಒಳನುಗ್ಗುವಿಕೆ ತಡೆಗಟ್ಟಲು ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಕಾವೇರಿ ನೀರಾವರಿ ನಿಗಮದ ಪ್ರಧಾನ ವ್ಯವಸ್ಥಾಪಕ ಕೆ.ಜಯಪ್ರಕಾಶ್ ಮಾತನಾಡಿ, ಕೊಡಗಿಗೆ ಬಳುವಳಿಯಾಗಿ ಬಂದAತಹ ಪ್ರತಿಷ್ಠಿತ ಸೈನಿಕ ಶಾಲೆಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು. ೨೪೦ ಮೀ ಉದ್ದದ ತಡೆಗೋಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಕಾವೇರಿ ನೀರಾವರಿ ನಿಗಮ ಮುಖ್ಯ ಅಭಿಯಂತರ ಶಂಕರೇಗೌಡ, ಸೈನಿಕ ಶಾಲೆ ಪ್ರಾಂಶುಪಾಲ ಜಿ.ಕಣ್ಣನ್, ಉಪ ಪ್ರಾಂಶುಪಾಲೆ ಸೀಮಾ, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ನಿಗಮದ ಅಭಿಯಂತರ ಚನ್ನಕೇಶವ, ಸಹಾಯಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಬಿಜೆಪಿ ಮುಖಂಡರಾದ ಉಮಾಶಂಕರ್, ನಿಗಮದ ಅಭಿಯಂತರರಾದ ಕಿರಣ್ ದೇವಯ್ಯ, ಸಿದ್ದರಾಜಶೆಟ್ಟಿ ಇದ್ದರು.