ಮಡಿಕೇರಿ, ಮೇ ೧೫: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮುಕ್ಕಾಟಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಡಿಕಲ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪಡಿಕಲ್ ಹಾಗೂ ಕಾಂಗೀರ ನಡುವೆ ನಡೆದ ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಪಡಿಕಲ್ ಪರ ಮಿಥುನ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಕಾಂಗೀರ ವಿರುದ್ಧ ಪಡಿಕಲ್ ೧-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಮುಕ್ಕಾಟಿ ಹಾಗೂ ಪೂಳಕಂಡ ನಡುವಿನ ಪಂದ್ಯದಲ್ಲಿ ಮುಕ್ಕಾಟಿ ೩-೦ ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಮುಕ್ಕಾಟಿ ಪರ ತರುಣ್ ೨ ಗೋಲು ದಾಖಲಿಸಿದರೆ ದಿಲೀಪ್ ೧ ಗೋಲು ಬಾರಿಸಿದರು.

ಮುಕ್ಕಾಟಿ ಹಾಗೂ ಪಡಿಕಲ್ ಕುಟುಂಬಗಳ ತಂಡದ ನಡುವಿನ ಫೈನಲ್ ಪಂದ್ಯಾಟ ರೋಚಕ ಹಣಾಹಣಿಯಲ್ಲಿ ಕೂಡಿತ್ತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ೧-೧ ಗೋಲು ದಾಖಲಿಸಿ ಸಮಬಲ ಸಾಧಿಸಿತ್ತು. ಡ್ರಾ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇಲ್ಲಿ ಪಡಿಕಲ್ ೩ ಗೋಲು ದಾಖಲಿಸಿ ರನ್ನರ್ ಅಪ್ ಆದರೆ ಮುಕ್ಕಾಟಿ ೪ ಗೋಲುಗಳನ್ನು ಹೊಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.

ಗ್ರಾಮಾಂತರ ಫುಟ್ಬಾಲ್-ಹೊಸ್ಕೇರಿ ಚಾಂಪಿಯನ್

ಇದೇ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮಾಂತರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಟ ತಂಡಗಳಾದ ಹೊಸ್ಕೇರಿ ಮತ್ತು ಅರೆಕಾಡು ತಂಡಗಳ ಮಧ್ಯೆ ರೋಚಕ ಹೋರಾಟ ನಡೆಯಿತು. ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಈ ಪಂದ್ಯದಲ್ಲಿ ಹೊಸ್ಕೇರಿ ತಂಡ ೪-೩ ಗೋಲುಗಳಿಂದ ರೋಚಕ ಜಯ ದಾಖಲಿಸಿತು. ಹೆಚ್ಚುವರಿ ಅವಧಿಯಲ್ಲಿ ಚಂದನ್ ದಾಖಲಿಸಿದ ಗೋಲಿನ ನೆರವಿ ನಿಂದ ಹೊಸ್ಕೇರಿ ತಂಡ ಚಾಂಪಿಯನ್ ಪಟ್ಟಕ್ಕೇರಿತು.(ಮೊದಲ ಪುಟದಿಂದ)

ವೈಯಕ್ತಿಕ ಪ್ರಶಸ್ತಿಗಳು

ಪಂದ್ಯಾವಳಿಯ ಉತ್ತಮ ತಂಡವಾಗಿ ಮಞಂಡ್ರ, ಬೆಸ್ಟ್ ಗೋಲ್ ಕೀಪರ್ ಪಡಿಕಲ್ ಪವನ್, ಬೆಸ್ಟ್ ಡಿಫೆಂಡರ್ ಮಿಲನ್ ಕಾಂಗಿರ, ಬೆಸ್ಟ್ ಗೋಲ್ ಆಫ್ ದಿ ಟೂರ್ನಿ ದೀಕ್ಷಿತ್ ಪೂಳಕಂಡ, ಬೆಸ್ಟ್ ಸ್ಪೋರ್ಟಿವ್ ಟೀಂ ಪೊನ್ನಚ್ಚನ, ಸ್ಟೆöÊಲಿಷ್ ಪ್ಲೇಯರ್ ಕರುಣ್ ಮುಕ್ಕಾಟಿ, ಬೆಸ್ಟ್ ಎಲ್ಡರ್ ಪ್ಲೇಯರ್ ಚೆರಿಯಮನೆ ಕುಶಾಲಪ್ಪ, ಬೆಸ್ಟ್ ಯಂಗ್ ಪ್ಲೇಯರ್ ಯುಗನ್ ಮರದಾಳು, ಉತ್ತಮ ಮಹಿಳಾ ಆಟಗಾರ್ತಿ ಮಾನಸ ಬಿಳಿಯಂಡ್ರ, ಉತ್ತಮ ಆಟಗಾರ ಮಿಥುನ್ ಪಡಿಕಲ್, ಉದಯೋನ್ಮುಖ ಆಟಗಾರ ತರುಣ್ ಮುಕ್ಕಾಟಿ, ಅತ್ಯಧಿಕ ಗೋಲ್ ಸ್ಕೋರರ್ ಆಗಿ ಕಾರ್ತಿಕ್ ದೇವಜನ ಹೊರಹೊಮ್ಮಿದರು.

ಫೈನಲ್ ಪಂದ್ಯಾಟವನ್ನು ಮಕ್ಕಳ ತಜ್ಞ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಉದ್ಘಾಟಿಸಿದರು. ಸಮಾರೋಪ ಸಮಾರಂಭ ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಡಾ. ಮಂಥರ್ ಗೌಡ, ಬಿಜೆಪಿ ಮುಖಂಡ ಬಿ.ಬಿ. ಭಾರತೀಶ್, ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಮಡಿಕೇರಿ ನಗರಸಭಾ ಸದಸ್ಯ ಮಹೇಶ್ ಜೈನಿ. ಮೊಬಿಯಸ್ ಫೌಂಡೇಷನ್ ಮುಖ್ಯಸ್ಥ ಮಧು ಬೋಪಣ್ಣ ಹಾಜರಿದ್ದರು.