*ಗೋಣಿಕೊಪ್ಪ, ಮೇ ೧೬: ಲೈನ್ ಮನೆಗಳಲ್ಲಿ ವಾಸಮಾಡಿಕೊಂಡಿರುವ ಬುಡಕಟ್ಟು ಸಮುದಾಯಗಳಿಗೆ ನಿವೇಶನದ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಲೈನ್ ಮನೆ ಕಾರ್ಮಿಕರ ಸಂಘ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ.

ಹೊಸೂರು ಗ್ರಾಮ ಪಂಚಾಯಿತಿ ಎದುರು ಸುಮಾರು ೧೦೦ಕ್ಕೂ ಹೆಚ್ಚು ಲೈನ್ ಮನೆಗಳಲ್ಲಿ ವಾಸಿಸುತ್ತಿರುವವರು ಪ್ರತಿಭಟನೆ ನಡೆಸಿದರು.

ಸುರಿಯುವ ಮಳೆಯ ನಡುವೆ ರಸ್ತೆಯ ಬದಿಯಲ್ಲಿ ಟಾರ್ಪಲ್‌ಗಳನ್ನು ಹಾಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಪ್ರಶಾಂತ್ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯಲು ಮನವೊಲಿಸಿದರು. ಪ್ರತಿಭಟನಾನಿರತರು ಹಕ್ಕೋತ್ತಾಯ ಮುಂದಿಟ್ಟು ಹೋರಾಟ ಮುಂದುವರಿಸಿದರು.

ಕಾರ್ಮಿಕ ಸಂಘದ ಅಧ್ಯಕ್ಷ, ಪ್ರಮುಖರಾದ ಲಕ್ಷಿö್ಮ, ಸರಸು ಸೇರಿದಂತೆ ಇನ್ನಿತರರು ಹಾಜರಿದ್ದರು.