ಮಡಿಕೇರಿ, ಮೇ ೧೬: ಪರಿಸರವಾದಿ ಎಂದು ಹೇಳಿಕೊಳ್ಳುತ್ತಾ ಪರಿಸರವಾದದ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಕೊಡುವ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ತಮ್ಮ ತೋಟದಲ್ಲಿಯೆ ೧೨೧ ಬಳಂಜಿ ಹಾಗೂ ೯ ಮಹಾಗನಿ ಸೇರಿದಂತೆ ಒಟ್ಟು ೧೯೧ ಘನ ಮೀಟರ್‌ನಷ್ಟು ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಬೆಳೆಗಾರ ಚೇರಂಡ ನಂದಾ ಸುಬ್ಬಯ್ಯ ಮಾಹಿತಿ ನೀಡಿದ್ದು, ಕಾವೇರಿ ಸೇನೆ ಸಂಘಟನೆ ಸ್ವಾರ್ಥ ಸಾಧನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆಪಾದಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಬಳಂಜಿ ಮರವನ್ನು ಕಡಿಯಲು ಸರಕಾರ ಅನುಮತಿ ನೀಡಿದ್ದ ಸಂದರ್ಭ ಅದನ್ನು ಪ್ರಶ್ನಿಸಿ ಸಿ.ಪಿ. ಮುತ್ತಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಸಂದರ್ಭ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣವನ್ನು ಮುಂದಿಟ್ಟು ತಡೆಯೊಡ್ಡಿದ್ದರು. ಆದರೆ ಇದೀಗ ಅವರು ತಮ್ಮ ತೋಟದಲ್ಲಿಯೆ ಬಳಂಜಿ ಹಾಗೂ ಮಹಾಗನಿ ಮರಗಳನ್ನು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕಡಿದು ಹಾಕಿದ್ದಾರೆ. ಬೇರೆ ಯಾರಾದರೂ ಮರಗಳನ್ನು ಕಡಿಯಲು ಮುಂದಾದರೆ ಅಡ್ಡಿಪಡಿಸುವ ಮುತ್ತಣ್ಣ ಅವರು ತಮ್ಮ ಅನುಕೂಲಕ್ಕಾಗಿ ಮರಗಳನ್ನು ಕಡಿದು ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ನಂದಾ ಸುಬ್ಬಯ್ಯ, ಮುತ್ತಣ್ಣ ಅವರಿಗೊಂದು ನ್ಯಾಯ; ಬೇರೆಯವರಿಗೆ ಮತ್ತೊಂದು ನ್ಯಾಯವೆ? ಎಂದು ಕಿಡಿಕಾರಿದರು. ಮರದ ಹಕ್ಕಿಗಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭವೂ ಆ ಹೋರಾಟಕ್ಕೆ ಮುತ್ತಣ್ಣ ಅಡ್ಡಿಪಡಿಸುವ ಪ್ರಯತ್ನ ಮಾಡಿದ್ದರು ಎಂದು ಆಪಾದನೆ ಮಾಡಿದರು.
ಕಾವೇರಿ ಸೇನೆ ಸ್ವಾರ್ಥ ಸಾಧನೆ
ಬಾಳೆಲೆಯ ಮಲಚೀರ ದೇವಯ್ಯ ಎಂಬವರು ತಮ್ಮ ತೋಟದಲ್ಲಿ ಅನುಮತಿಯೊಂದಿಗೆ ಮರ ಕಡಿದು ಅಬ್ದುಲ್ ರಹಿಮನ್ ಎಂಬವರಿಗೆ ಮಾರಾಟ ಮಾಡಿದ್ದರು. ಈ ವೇಳೆ ಅಬ್ದುಲ್ ರಹಿಮಾನ್ ಬಳಿ ಕಾವೇರಿ ಸೇನೆಯ ರವಿಚಂಗಪ್ಪ ಹಾಗೂ ಎಚ್.ಎಂ. ಶಶಿ ಎಂಬವರುಗಳು ತಮ್ಮ ಅಗತ್ಯ ಪೂರೈಸುವಂತೆ ಬೇಡಿಕೆ ಇಟ್ಟಿದ್ದರು ಎಂದು ನಂದಾ ಸುಬ್ಬಯ್ಯ ದೂರಿದರು. ಈಡೇರದಿದ್ದಾಗ ಡೀಮ್ಡ್ ಫಾರೆಸ್ಟ್ನಲ್ಲಿ ಮರ ಕಡಿಯುವಂತಿಲ್ಲ ಎಂದು ಆಕ್ಷೇಪಿಸಿ ರವಿಚಂಗಪ್ಪ ಹಾಗೂ ಶಶಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದಲ್ಲಿ ಇವರ ದುರುದ್ದೇಶದ ಬಗ್ಗೆ ಬಯಲಾದಾಗ ಪ್ರಕರಣವನ್ನು ಹಿಂಪಡೆದುಕೊAಡರು ಎಂದು ನಂದಾ ಸುಬ್ಬಯ್ಯ ತಿಳಿಸಿದರು. ಕಾವೇರಿ ಸೇವೆ ಸ್ವಾರ್ಥ ಸಾಧನೆಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಬಾಣೆ ಜಮೀನನ್ನು ಕಂದಾಯ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ರಾಷ್ಟçಪತಿಗಳ ಅಂಕಿತ ಹಾಕಲ್ಪಟ್ಟಿದ್ದರೂ ಕೂಡ ಅದಕ್ಕೆ ಸಂಬAಧಿಸಿದAತೆ ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಇದುವರೆಗಿನ ಯಾವುದೇ ಜಿಲ್ಲಾಧಿಕಾರಿಗಳು ಜಾರಿಗೊಳಿಸಿಲ್ಲ. ಪರಿಸರವಾದಿಗಳೆನಿಸಿ ಕೊಂಡವರಿAದ ಈ ಸಮಸ್ಯೆ ಎದುರಾಗಿದೆ ಎಂದು ನಂದಾ ಸುಬ್ಬಯ್ಯ ದೂರಿದರು.
ಮತ್ತೋರ್ವ ಬೆಳೆಗಾರ ಮಧು ಬೋಪಣ್ಣ ಮಾತನಾಡಿ, ಯಾವುದೇ ಸಂಘಟನೆಗೆ ದ್ವಂದ್ವ ನಿಲುವು ಇರಬಾರದು. ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುವುದು; ತಮ್ಮ ಅನುಕೂಲಕ್ಕೆ ಬೇಕಾದಾಗ ನಿಲುವನ್ನು ಬದಲಿಸಿಕೊಳ್ಳುವುದು ಸರಿಯಲ್ಲ ಎಂದರು. ಪರಿಸರದ ಬಗ್ಗೆ ಮಾತನಾಡುವ ಮುತ್ತಣ್ಣ ಅವರು ನೈತಿಕತೆ ಉಳ್ಳವರಾಗಿದ್ದರೆ ತಮ್ಮ ತೋಟದಲ್ಲಿ ಮರಗಳನ್ನು ಕಡಿಯಬಾರದಿತ್ತು ಎಂದು ಅಭಿಪ್ರಾಯಿಸಿದರು.
ಗೋಷ್ಠಿಯಲ್ಲಿ ಬೆಳೆಗಾರರಾದ ಮನು ಮುತ್ತಪ್ಪ, ಜಿನ್ನು ನಾಣಯ್ಯ ಉಪಸ್ಥಿತರಿದ್ದರು.