ಮಡಿಕೇರಿ, ಮೇ ೧೫: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದ ಭಗವತಿ ದವಸ ಭಂಡಾರದ ಅಧ್ಯಕ್ಷರಾಗಿ ಮಡಿಕೇರಿ ನಗರ ಸಭೆಯ ಮಾಜಿ ಸದಸ್ಯ ಹಾಗೂ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ನಿರ್ಗಮಿತ ಅಧ್ಯಕ್ಷ ಪುಲಿಯಂಡ ಜಗದೀಶ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಜಗದೀಶ್ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಚೋಕಂಡ ಕಿರಣ್ ಅಯ್ಯಪ್ಪ, ನಿರ್ದೇಶಕರುಗಳಾಗಿ ಚೋವಂಡ ಮನು ಮಂದಣ್ಣ, ಚೋಕಂಡ ಸಾಬು ಅಪ್ಪಯ್ಯ, ಕುಪ್ಪಚ್ಚಿರ ಮದನ್ ನಾಚಪ್ಪ, ಪುಲಿಯಂಡ ಪಳನಿ ಉತ್ತಯ್ಯ, ಕೊಟ್ಟಿಯಂಡ ಸಂಜು ಕಾವೇರಪ್ಪ, ಪುಲಿಯಂಡ ಸಂತೋಷ್ ನೇಮಕಗೊಂಡಿದ್ದಾರೆ.