ವೀರಾಜಪೇಟೆ, ಮೇ ೧೫: ಅಮ್ಮತ್ತಿ ನಾಡು ಬೋಂದ ಬಿಳುಗುಂದ ಮತ್ತು ನಲ್ವತ್ತೋಕ್ಲು ಗ್ರಾಮದ ಆರಾಧ್ಯ ದೈವವಾದ ಶ್ರೀ ಭದ್ರಕಾಳಿ ದೇಗುಲದಲ್ಲಿ ದೇವಿಯ ವಾರ್ಷಿಕ ಉತ್ಸವ ಬೋಡು ನಮ್ಮೆ ಸಡಗರ ಸಂಭ್ರಮದಿAದ ನಡೆಯಿತು. ತಾ.೧೩ರಂದು ಆರಂಭಗೊAಡ ಉತ್ಸವದ ಪ್ರಮುಖ ಆಕರ್ಷಣೆ ಯಾಗಿರುವ ಬೋಡ್‌ನಮ್ಮೆಯಲ್ಲಿ ಗ್ರಾಮಸ್ಥರು ತರಾವರಿ ವೇಷ ಧರಿಸಿ ಹರಕೆ ಒಪ್ಪಿಸಿದರು. ರಾತ್ರಿ ದೇವಿಯನ್ನು ಪ್ರಾರ್ಥಿಸಿ, ವೇಷ ಭೂಷಣ ಧರಿಸಿ ದೇಗುಲದಿಂದ ಹೊರಡಲಾಯಿತು. ಕಳಿ ಹಾಕಿರುವ ಪುರುಷರು ರಾತ್ರಿಯಿಂದ ಮರು ದಿನದ ಸಂಜೆಯವರೆಗೆ ಗ್ರಾಮದ ಎಲ್ಲಾ ಮನೆಗಳಿಗೆ ತೆರಳಿ ಗ್ರಾಮಸ್ಥರು ನೀಡುವ ಕಾಣಿಕೆಯನ್ನು ಪಡೆದು ಹಿಂದಿರುಗುತ್ತಾರೆ. ವಿಶೇಷ ವೇಷಗಳನ್ನು ಧರಿಸಿರುವ ವ್ಯಕ್ತಿಗಳಿಗೆ ಗ್ರಾಮಸ್ಥರು ಅತಿಥ್ಯ ನೀಡುವುದು ವಾಡಿಕೆಯಾಗಿದೆ. ಮನೆಗಳಲ್ಲಿ ದೇಗುಲಕ್ಕೆ ಸಂಬAಧಿಸಿ ಹಿರಿಯರು ದುಡಿ (ಪುರಾತನವಾದ ಚರ್ಮ ವಾದ್ಯ) ನುಡಿಸಿ ದೇವರನ್ನು ಸ್ತುತಿಸಿ ಮನೆಯ ಮಂದಿಗೆ ಎಲ್ಲರಿಗೂ ಶ್ರೇಯಸ್ಸು ಕರುಣಿಸಲಿ ಎಂದು ಹಾಡಿನ ಮೂಲಕ ಪ್ರಾರ್ಥಿಸುತ್ತಾರೆ. ದುಡಿ ಕೊಟ್ಟ್ ಹಾಡಿನಲ್ಲಿ ದೇವರನ್ನು ಸ್ತುತಿಸಿ ಹಾಡುವುದು ಒಂದು ಮಾರ್ಗವಾದರೆ ದೇವರನ್ನು ಬೈಗುಳದಿಂದ ಹಾಡಿನ ಮೂಲಕ ಹೇಳುವುದು ಪರಿಪಾಠವಾಗಿದೆ. ತಾ. ೧೪ರಂದು ಸಂಜೆ ವೇಷÀ ಹಾಕಿರುವವರು ಗ್ರಾಮದ ದೇಗುಲಕ್ಕೆ ಆಗಮಿಸಿ ನಂತರದಲ್ಲಿ ದೇಗುಲದ ಮೂರು ಸುತ್ತು ಪ್ರದಕ್ಷಿಣೆಯೊಂದಿಗೆ ಮನೆಗಳಿಂದ ಸಂಗ್ರಹಿಸಲಾದ ಕಾಣಿಕೆಯನ್ನು ದೇವಿಗೆ ಒಪ್ಪಿಸಿದರು. ತಾ. ೧೫ರಂದು ಶ್ರೀ ಮಾದೇವನಿಗೆ ಒಪ್ಪಿಸುವ ಹರಿಕೆಯಾದ ಎರಡು ಕುದುರೆ ಮತ್ತು ಚೂಳೆ (ಗಂಡು ಹೆಣ್ಣಾಗಿ ಹೆಣ್ಣು ಗಂಡಾಗಿ ವೇಷ ಧರಿಸಿ ಹರಿಕೆ ಒಪ್ಪಿಸುವ ಸಂಪ್ರದಾಯ) ನಡೆದು ಶ್ರೀ ದೇವಿಗೆ ಮಹಾಪೂಜೆ ಸಲ್ಲಿಸಲಾಗಿದೆ. ವಾರ್ಷಿಕ ಬೋಡು ನಮ್ಮೆ ಸಂಪನ್ನವಾಯಿತು.

ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ತಕ್ಕ ಮುಖ್ಯಸ್ಥ ಚಿಲ್ಲವಂಡ ಕಾವೇರಪ್ಪ, ದೇಗುಲ ಸಮಿತಿಯ ಪ್ರಮುಖರಾದ ಮಾದಪಂಡ ರಾಜ ತಿಮ್ಮಯ್ಯ, ಐನಂಡ ರಂಜನ್, ಅಲ್ಲಪ್ಪಿರ ಜುಮ್ರು ಕಾರ್ಯಪ್ಪ, ಸೇರಿದಂತೆ ದೇಗುಲದ ಆಡಳಿತ ಮಂಡಳಿಯ ಸದಸ್ಯರು, ಕಳಿ ಹಾಕಿರುವ ಭಕ್ತರು, ಗ್ರಾಮ ಮತ್ತು ವಿವಿಧ ಗ್ರಾಮಗಳಿಂದ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗಿಗಳಾದರು.

-ಕಿಶೋರ್ ಕುಮಾರ್ ಶೆಟ್ಟಿ