ಸೋಮವಾರಪೇಟೆ,ಮೇ ೧೫: ಸಮೀಪದ ಐಗೂರು ಪ್ರೌಢಶಾಲೆಯ ಶಿಕ್ಷಕರು ಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ರಜೆಯ ಅವಧಿಯಲ್ಲಿ ಶಾಲಾ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದ ಶಿಕ್ಷಕರು, ಕುಡಿಯುವ ನೀರು ಹಾಗೂ ಅಕ್ಷರ ದಾಸೋಹದ ಕೊಠಡಿ ಹಾಗೂ ಪ್ರತಿ ತರಗತಿಯ ಕೊಠಡಿಗಳನ್ನು ಶುಚಿಗೊಳಿಸಿದರು. ತಾ. ೧೬ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿಯವರು, ಗ್ರಾಮ ಪಂಚಾಯಿತಿ ಸದಸ್ಯರು ಶಾಲಾ ಮಕ್ಕಳನ್ನು ಸ್ವಾಗತಿಸುವ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಗುವುದೆಂದು ಶಾಲಾ ಮುಖ್ಯ ಶಿಕ್ಷಕ ಯಶವಂತ್‌ಕುಮಾರ್ ತಿಳಿಸಿದರು.