ಭಾಗಮಂಡಲ, ಮೇ ೧೪: ನಂಗಾರು ಕುಟುಂಬಸ್ಥರು ಹಾಗೂ ಅಮೆಚೂರು ಕಬಡ್ಡಿ ಅಸೋಸಿ ಯೇಶನ್ ಸಂಯುಕ್ತ ಆಶ್ರಯದಲ್ಲಿ ಭಾಗಮಂಡಲದ ಕೋರಂಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೂಡಕಂಡಿ ದಯಾನಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಇಂದು ಸಮಯ ಎಂಬುದು ಬಹಳ ದುಬಾರಿಯಾಗಿದೆ. ಇಂತಹ ಕಾಲಘಟ್ಟದಲ್ಲಿ ನಾವು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮಚಿತ್ತರಾಗುತ್ತಾರೆ. ಇಲ್ಲದೇ ಹೋದರೆ ಜೀವನದಲ್ಲಿ ಸಮಸ್ಯೆ ಎದುರಾದಾಗ ಧೈರ್ಯವಿಲ್ಲದೆ ಆತ್ಮಹತ್ಯೆಗೆ ಮೊರೆ ಹೋಗುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಕ್ರೀಡೆಗೆ ಪೋಷಕರು ಪ್ರೋತ್ಸಾಹಿಸಬೇಕು. ಪೋಷಕರು ಮಕ್ಕಳಿಗೆ ಮೊಬೈಲ್ ಫೋನ್ ನೀಡಿ ಕೂರಿಸುವ ಕ್ರಮವನ್ನು ನಿಲ್ಲಿಸಿ ವಿದ್ಯಾಭ್ಯಾಸ ಕೊಟ್ಟಲ್ಲಿ ಮುಂದೆ ಬರಲು ಸಾಧ್ಯ ಎಂದರು.

ಅಂತಿಮ ಪಂದ್ಯಕ್ಕೆ ಚಾಲನೆ ನೀಡಿ ಶಾಸಕ ಕೆ ಜಿ ಬೋಪಯ್ಯ ಮಾತನಾಡಿ ರಾಜಕೀಯದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಅದೇ ರೀತಿ ಕ್ರೀಡೆಯಲ್ಲೂ ಸಹ ಇದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣ ದಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈಗ ಮತ್ತೆ ಚೇತರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರು ಕ್ರೀಡಾ ಹಬ್ಬ ಆಚರಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಳನ ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರುಷರ ಕಬಡ್ಡಿ ಪಂದ್ಯಾಟವನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಉದ್ಘಾಟಿಸಿ ಮಾತನಾಡಿ ಎಲ್ಲರು ಶಿಸ್ತಿನಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಪಂದ್ಯವನ್ನು ಗ್ರಾಮ ಪಂಚಾಯಿತಿ ಸದಸ್ಯ ವೀಣಾ ಉದ್ಘಾಟಿಸಿದರು. ಪ್ರದರ್ಶನ ಪಂದ್ಯ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಮತ್ತು ನಂಗಾರು ಸೀನಿಯರ್ ತಂಡಗಳ ನಡುವೆ ನಡೆದು ಭಾಗಮಂಡಲ ಒಕ್ಕೂಟ ಗೆಲುವು ಸಾಧಿಸಿತು. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಕುಂಬಳಚೇರಿಮನೆ ಪ್ರಥಮ, ಪುದಿಯನೆರವನ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಕಬಡ್ಡಿಯಲ್ಲಿ ಮೇಲೆ ಪೆರುಮುಂಡ ಪ್ರಥಮ, ನಂಗಾರು ದ್ವಿತೀಯ ಸ್ಥಾನ ಪಡೆದುಕೊಂಡಿತು. ಮೊದಲ ಸೆಮಿಫೈನಲ್ಸ್ನಲ್ಲಿ ಪುದಿಯನೆರವನ ಕುದುಪಜೆ ತಂಡವನ್ನು ೩೧-೨೬ ಅಂಕ ಗಳಿಂದ ಸೋಲಿಸಿ ಪೈನಲ್ ಪ್ರವೇಶಿ ಸಿತು. ಮತ್ತೊಂದು ಸೆಮಿಫೈನಲ್ಸ್ ಪಂದ್ಯ ಪೆರಾಜೆ ಗ್ರಾಮದ ಎರಡು ಮನೆತನಗಳಾದ ಕುಂಬಳಚೇರಿಮನೆ ಮತ್ತು ಮಜಿಕೋಡಿ ಕುಟುಂಬದ ಮಧ್ಯೆ ನಡೆದು ೨೭-೨೩ ಅಂಕಗಳಿAದ ಮಜಿಕೋಡಿಯನ್ನು ಮಣಿಸಿ ಕುಂಬಳಚೇರಿ ಫೈನಲ್ ಪ್ರವೇಶಾತಿ ಯನ್ನು ಪಡೆದುಕೊಂಡಿತು.

ಫೈನಲ್ ಪಂದ್ಯದಲ್ಲಿ ಕೊಡಗಿನ ಗೌಡ ಕುಟುಂಬದ ಎರಡು ಬಲಿಷ್ಠ ತಂಡಗಳು ಎದುರಾದವು, ಅಂತಿಮ ಹಣಾಹಣಿಯಲ್ಲಿ ಕಳೆದಬಾರಿಯ ಚಾಂಪಿಯನ್ ತಂಡ ಕುಂಬಳಚೇರಿಮನೆ ಪುದಿಯನೆರವನ ಕುಟುಂಬವನ್ನು ೩೧-೨೨ ಅಂಕಗಳಿAದ ಸೋಲಿಸಿ ಮತ್ತೆ ನಂಗಾರು ಕಬಡ್ಡಿ ಕಪ್ ೨೦೨೨ರ ಚಾಂಪಿಯನ್ ಆಗಿ ಹೊರಹೊಮ್ಮಿ, ಕಬಡ್ಡಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು. ಪೆರಾಜೆಯ ಕುಂಬಳಚೇರಿ ಕುಟುಂಬವು ಕೊಡಗು- ದಕ್ಷಿಣ ಕನ್ನಡ ಜಿಲ್ಲಾ ಗೌಡ ಕುಟುಂಬವಾರು ನಡೆಸಿದ, ಉಳುವಾರುಕಪ್, ಚೆರಿಯಮನೆ ಕಪ್, ನಂಗಾರು ಕಪ್ ೨ (ಎರಡು) ಬಾರಿ ಈ ಪಂದ್ಯಾಟಗಳಲ್ಲಿ ಭಾಗವಹಿಸಿ ಸತತ ೪ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತದೆ.

ನಂಗಾರು ಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ ೩ನೇ ಮತ್ತು ೪ನೇ ಸ್ಥಾನವನ್ನು ಕ್ರಮವಾಗಿ ಮಜಿಕೋಡಿ ಮತ್ತು ಕುದುಪಜೆ ಕುಟುಂಬ ತಂಡಗಳು ಪಡೆದುಕೊಂಡಿತು.

ಕುAಬಳಚೇರಿ ಮನೆ ತಂಡದ ತಾರೇಶ್ ಬೆಸ್ಟ್ ಡಿಪೆಂಡರ್, ಪ್ರದೀಪ ಬೆಸ್ಟ್ ರೈಡರ್, ಪುದಿಯನೆರವನ ಕುಟುಂಬದ ದರ್ಶನ್ ಬೆಸ್ಟ್ ಆಲ್ ರೌಂಡರ್, ಪ್ರಶಸ್ತಿಯನ್ನು ಪಡೆದುಕೊಂಡರು.

ಮಹಿಳೆಯರ ಕಬಡ್ಡಿ ಪಂದ್ಯದಲ್ಲಿ

ಪೆರಾಜೆಯ "ಮೇಲೆ ಪೆರುಮುಂಡ" ಕುಟುಂಬ ಆತಿಥೇಯ ನಂಗಾರು ತಂಡವನ್ನು ೨೪-೮ ಅಂಕಗಳಿAದ ಸೋಲಿಸಿ ಪ್ರಶಸ್ತಿಯನ್ನು ಭಗಲಿಗೆ ಹಾಕಿಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಂಗಾರು ವಿಠಲ ವಹಿಸಿದ್ದರು ವೇದಿಕೆಯಲ್ಲಿ ನಂಗಾರು ಕುಟುಂಬ ವಿಕಸನ ಸಂಘದ ಅಧ್ಯಕ್ಷ ಗುರುಪ್ರಸನ್ನ. ಮೇಜರ್ ಡಾಕ್ಟರ್ ಕುಷ್ವಂತ್ ಕೋಳಿ ಬೈಲು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಹೊಸ ಕ್ಲೂ ಉತ್ತಪ್ಪ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ನಂಗಾರು ಪುನೀತ್, ಬೆಳ್ಯಪ್ಪ ದುಗ್ಗಳ ಕಪಿಲ್, ನಂಗಾರು ಜಗದೀಶ್, ಭಾಗಮಂಡಲ ಠಾಣಾಧಿಕಾರಿ ಮಹದೇವ್, ಪಿ.ಎಂ. ರಾಜೀವ್, ಒಕ್ಕೂಟದ ಕಾರ್ಯದರ್ಶಿ ನಿಡ್ಯಮಲೆ ಚಲನ್ ಉಪಸ್ಥಿತರಿದ್ದರು.