ಮಡಿಕೇರಿ, ಮೇ ೧೩: ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಸ್ನೇಹಾಶ್ರಯ ಯೂತ್ ಟ್ರಸ್ಟ್ ೨ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮಾನಸಿಕ ರೋಗಿಗಳಿಗಾಗಿ ‘ಮಾನಸಧಾರ' ಮಾನಸಿಕ ರೋಗಿಗಳ ಹಗಲು ಆರೈಕೆ ಕೇಂದ್ರ ರಾಣಿಪೇಟೆ, ಮಡಿಕೇರಿ ಇಲ್ಲಿ ವಿವಿಧ ಸೌಲಭ್ಯಗಳು ದೊರೆಯಲಿವೆ.

ಉಚಿತವಾಗಿ ನುರಿತ ಮಾನಸಿಕ ವೈದ್ಯರಿಂದ ಮಾನಸಿಕ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ರೋಗಿಗಳಿಗೆ ಉಚಿತವಾಗಿ ನುರಿತ ಮನೋ ಚಿಕಿತ್ಸಕರಿಂದ ರೋಗಿಗಳಿಗೆ ಹಾಗೂ ಕುಟುಂಬದವರಿಗೆ ಮೂರು ಹಂತದಲ್ಲಿ ಆಪ್ತಸಮಾಲೋಚನೆ ನಡೆಸಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಲಾಗುತ್ತದೆ.

ಉಚಿತವಾಗಿ ವೃತ್ತಿಪರ ತರಬೇತಿಗಳಾದ ಚಿತ್ರಕಲೆ, ಪೈಲ್ ತಯಾರಿಕೆ, ಪೇಪರ್‌ಕವರ್ ತಯಾರಿಕೆ, ಗೊಂಬೆ ತಯಾರಿಕೆ, ಬುಟ್ಟಿ ಹೆಣೆಯುವುದು, ಮೇಣದ ಬತ್ತಿ ತಯಾರಿಸುವುದು, ಕಸೂತಿ, ಕರಕುಶಲ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಹೇಳಿಕೊಡಲಾಗುತ್ತದೆ. ಉಚಿತವಾಗಿ ಭಜನೆ, ಯೋಗ, ಪ್ರಾಣಯಾಮ, ಆಧ್ಯಾತ್ಮ, ಮನೋರಂಜನೆ, ಆಟ ಇನ್ನಿತರ ಚಟುವಟಿಕೆಗಳನ್ನು ಹೇಳಿ ಕೊಡಲಾಗುತ್ತದೆ. ನೋಂದಣಿಯಾದ ಮಾನಸಿಕ ರೋಗಿಗಳಿಗೆ ಉಚಿತವಾಗಿ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಸದಾವಕಾಶವನ್ನು ಅರ್ಹರು ಪಡೆದುಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ೮೩೧೦೨೪೩೬೮೯, ೮೫೫೩೧೭೩೪೯೯ ವಿಶ್ವನಾಥ್ ಸಿ.ವಿ., ನಿರ್ದೇಶಕರು ಸ್ನೇಹಾಶ್ರಯ ಯೂತ್ ಟ್ರಸ್ಟ್ ಇವರನ್ನು ಸಂಪರ್ಕಿಸಬಹುದು.