ಶನಿವಾರಸಂತೆ, ಮೇ ೧೨: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ ಡಾಂಬರೀಕರಣ ಹಾಗೂ ನೂತನ ಟ್ಯಾಂಕ್ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
ಪಂಚಾಯಿತಿಗೆ ಶಾಸಕರ ನಿಧಿಯಿಂದ ರೂ. ೫೦ ಲಕ್ಷ ಮಂಜೂರಾಗಿದ್ದು, ಸುಳುಗಳಲೆ, ಬಿದರೂರು, ಮಾದ್ರೆ, ಕೂಜಗೇರಿ, ಕಿರಿಬಿಳಾಹ, ಅಪ್ಪಶೆಟ್ಟಳ್ಳಿ, ಶೆಟ್ಟಿಗನಹಳ್ಳಿ, ಚಂಗಡಹಳ್ಳಿ, ಕಾಜೂರು ಗ್ರಾಮಗಳ ರಸ್ತೆಗಳ ಡಾಂಬರೀಕರಣ ಹಾಗೂ ನೂತನ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯಲಿದೆ.