ಮಡಿಕೇರಿ, ಮೇ ೧೩: ಬೆಂಗಳೂರಿನ ಪ್ರತಿಷ್ಠಿತ ಪರಿಸರ ಕಾಳಜಿ ಹೊಂದಿರುವ ಸಂಸ್ಥೆಯಾದ ಸೇವ್ ಗ್ರೀನ್ ಸಂಸ್ಥೆ ನೀಡುವ ‘ಸ್ಫೂರ್ತಿ ಅವಾರ್ಡ್-೨೦೨೨’ಗೆ ಮಡಿಕೇರಿಯ ಪತ್ರಕರ್ತ ಮಂದನೆರವAಡ ಯುಗ ದೇವಯ್ಯ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಸೇವೆ ಹಾಗೂ ಪರಿಸರ ಕಾಳಜಿ ಸಂಬAಧಿತ ವರದಿಗಳನ್ನು ಮಾಡಿ ಗಮನ ಸೆಳೆದ ಹಿನ್ನೆಲೆ ಈ ಪ್ರಶಸ್ತಿಗೆ ಯುಗ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ತಾ. ೧೫ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯುಗ ದೇವಯ್ಯ ಸೇರಿದಂತೆ ೨೦ ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.