ಪೊನ್ನಂಪೇಟೆ, ಮೇ ೧೨: ಪೊನ್ನಂಪೇಟೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುರುಬರ ಅಕ್ಕು ಎಂಬವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಆದೇಶದ ಮೇರೆಗೆ ಕುಟುಂಬಕ್ಕೆ ತಿಂಗಳಿಗೆ ೭೫೦ ರೂಪಾಯಿ ಮಾಶಾಸನ ಮಂಜೂರು ಮಾಡಲಾಯಿತು.

ಮಾಶಾಸನ ಮಂಜೂರಾತಿ ಪತ್ರ ಮತ್ತು ಹಣವನ್ನು ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ರಾಮಕೃಷ್ಣ, ಒಕ್ಕೂಟದ ಅಧ್ಯಕ್ಷೆ ಸುಮನ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನರಸಿಂಹಮೂರ್ತಿ ಹಾಗೂ ಗ್ರಾಮಸ್ಥರಾದ ರಾಘವ ಇವರುಗಳು ವಿತರಿಸಿದರು.