ವೀರಾಜಪೇಟೆ, ಮೇ ೧೨: ದೇಹವನ್ನು ದಂಡಿಸಿ ಶ್ರಮ ಪಟ್ಟರೆ ಮಾತ್ರ ಸಾಧನೆ ಸಾಧ್ಯ ಎಂದು ದ.ಕ. ಜಿಲ್ಲೆ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಮಾಳೆಯಂಡ ಅಶೋಕ್ ಪೂವಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ತಂಗಾಳಿ ಇಂಡೋರ್ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ನಡೆದ ವೀರಾಜಪೇಟೆ ಕೊಡವ ಸಂಘ ಒಕ್ಕೂಟಗಳ ನಡುವಿನ ಅಂತರ ಸಂಘ ಷಟಲ್ ಬ್ಯಾಂಡ್ಮಿAಟನ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯು ವೀರಾಜಪೇಟೆ ಕೊಡವಕೇರಿ ಒಕ್ಕೂಟ ಮತ್ತು ಪಂಜರ್‌ಪೇಟೆ ಕೊಡವಕೇರಿಯ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕೊಡವ ಹಾಕಿ ಆಕಾಡೆಮಿಯ ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್, ಕೊಡಗು ಜೇನು ಮತ್ತು ಮೇಣ ಸಹಕಾರ ಸಂಘದ ಅಧ್ಯಕ್ಷ ಕಂಜಿತAಡ ಮಂದಣ್ಣ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ, ಪೂಮಾಲೆ ಕೊಡವ ವಾರಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪಂಜರ್‌ಪೇಟೆ ಕೊಡವಕೇರಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ಪಂದ್ಯಾಟ ನಡೆಯಿತು.

ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ನಾಮೆರ ಮೃದನ್, ಚಿಕ್ಕಪೇಟೆ ಕೊಡವಕೇರಿ ಹಾಗೂ ಅಂಜಪರವAಡ ದೋಣಾ ಮಾದಯ್ಯ, ಕಾವೇರಿ ಕೊಡವಕೇರಿ ಪಡೆದುಕೊಂಡರು.

ಎAಟು ಅಂಕಗಳೊAದಿಗೆ ಚಿಕ್ಕಪೇಟೆ ಕೊಡವ ಸಂಘವು ಸಮಗ್ರ ಪ್ರಶಸ್ತಿ ಪಡೆಯಿತು.

ಮುಂದಿನ ವರ್ಷಕ್ಕೆ ಕದನೂರು - ಕೊಟ್ಟೋಳಿ ಕೊಡವಕೇರಿಯು ಪಂದ್ಯಾವಳಿಯನ್ನು ನಡೆಸಲಿದ್ದು ಅವರಿಗೆ ಧ್ವಜವನ್ನು ಹಸ್ತಾಂತರಿಸಲಾಯಿತು.