ಮಡಿಕೇರಿ, ಮೇ ೧೩: ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಮಕ್ಕಳ ಸಹಾಯವಾಣಿ (೧೦೯೮) ದಿನಾಚರಣೆ ಹಾಗೂ ಮೇ ತಿಂಗಳನ್ನು ಮಕ್ಕಳ ಸಹಾಯವಾಣಿ (೧೦೯೮) ಮಾಸಾಚರಣೆ ಆಚರಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಮಕ್ಕಳ ಸಹಾಯವಾಣಿ ಸಂಬAಧಿಸಿದAತೆ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರ್ವಜನಿಕ ಶಿಕ್ಷಣ, ಸ್ಥಳೀಯ ಸಂಸ್ಥೆಗಳು ಹೀಗೆ ಹಲವು ಇಲಾಖೆಗಳು ಜೊತೆಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಮಕ್ಕಳ ಸಹಾಯವಾಣಿ ದಿನಾಚರಣೆ ಮತ್ತು ಮಾಸಾಚರಣೆ ಆಚರಣೆ ಸಂಬAಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ಮಾಹಿತಿ ನೀಡಿದರು. ಶಾಲಾ ವೆಬ್ಸೈಟ್ಗಳಲ್ಲಿ ಮಕ್ಕಳ ಸಹಾಯ ವಾಣಿ-೧೦೯೮ ಪ್ರದರ್ಶನ ಮಾಡುವುದು. ಕಚೇರಿಯ ಎಲ್ಲಾ ಪತ್ರಗಳ ಫೂಟರ್ನಲ್ಲಿ ಮಕ್ಕಳ ಸಹಾಯಣಿ-೧೦೯೮ ಪ್ರದರ್ಶನ ಮಾಡುವುದು, ಕಚೇರಿಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿAದ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ-೧೦೯೮ ಸಂಪರ್ಕಿಸುವAತೆ ಪ್ರಮಾಣ ವಚನ ಸ್ವೀಕಾರ ಮಾಡುವುದು, ಜಾಥಾ/ ಮ್ಯಾರಾಥಾನ್ನ್ನು ಮಕ್ಕಳ ಸಹಾಯವಾಣಿ ದಿನಾಚರಣೆ ಎಂದು ಆಯೋಜಿಸುವುದು, ಶಾಲಾ ಮಕ್ಕಳಿಗೆ ಮಕ್ಕಳ ಸಹಾಯವಾಣಿ ೧೦೯೮-ಕುರಿತು ಹಾಡು, ಚಿತ್ರಕಲೆ, ಘೋಷವಾಕ್ಯ ರಚನೆ, ಪೋಸ್ಟರ್ ರಚನೆ ಸ್ಪರ್ಧೆ ಏರ್ಪಡಿಸುವುದು. ಜಿಲ್ಲೆಯಲ್ಲಿ ಮಕ್ಕಳಿಗಾಗಿ ಮಕ್ಕಳ ಸಹಾಯವಾಣಿ-೧೦೯೮ ಕುರಿತು ಫೇಸ್ಬುಕ್ ಲೈವ್ ಆಯೋಜಿಸುವುದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ-೧೦೯೮ ಕುರಿತು ಎಲ್ಇಡಿ ಮೂಲಕ ಪ್ರದರ್ಶನ ಏರ್ಪಡಿಸುವುದು.
ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಕಸ ಸಂಗ್ರಹಣೆ ವಾಹನದ ಮೂಲಕ ಆಡಿಯೋ ಮೂಲಕ ಮಾಹಿತಿ ನೀಡುವುದು. ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ-೧೦೯೮ ಕುರಿತು ಪ್ರಚಾರ ಫಲಕ ಅಳವಡಿಸುವುದು.
ಶಾಲಾ-ಕಾಲೇಜುಗಳಲ್ಲಿ ಮತ್ತು ಜನ ದಟ್ಟಣೆ ಪ್ರದೇಶಗಳಲ್ಲಿ ಗೋಡೆ ಬರಹ ಬರೆಸುವುದು. ಬೆಳಗಿನ ಶಾಲಾ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಮಾಹಿತಿ ನೀಡುವುದು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಕಟ್ಟಡಗಳು ನರ್ಸಿಂಗ್ ಹೋಂಗಳ ಸೂಕ್ತ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ-೧೦೯೮ ಕುರಿತು ಪ್ರಚಾರ ಫಲಕ ಅಳವಡಿಸುವುದು.
ವೃತ್ತಗಳಲ್ಲಿ ಅಳವಡಿಸಲಾಗಿರುವ ಪೊಲೀಸ್ ಬೂತ್ಗಳ ಮೇಲೆ ಮಾಹಿತಿ ಪ್ರಚಾರ ಫಲಕಗಳನ್ನು ಪ್ರಕಟಿಸಲು ಹಾಗೂ ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ, ವಸ್ತುಗಳನ್ನು ಮಾರುವ ಮಕ್ಕಳು, ಇನ್ನಿತರ ಯಾವುದೇ ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ-೧೦೯೮ ನ್ನು ಸಂಪರ್ಕಿಸುವAತೆ ಕ್ರಮವಹಿಸಲು ಟ್ರಾಫಿಕ್ ಪೊಲೀಸ್ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
ಮಕ್ಕಳ ಸಹಾಯವಾಣಿ-೧೦೯೮ ಜಿಲ್ಲಾ ನೋಡಲ್ ಹಾಗೂ ಕೋಲಾಬ್ ಸಂಸ್ಥೆಗಳ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ಆಯೋಜಿಸುವುದು. ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ, ಪೌರಾಯುಕ್ತ ರಾಮದಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸುಮತಿ, ಮಕ್ಕಳ ಸಹಾಯವಾಣಿ ವಿಭಾಗದ ನವೀನ್ಕುಮಾರ್, ರಾಯ್ ಡೇವಿಡ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮಮತ ಇತರರು ಇದ್ದರು.