ಸುಂಟಿಕೊಪ್ಪ, ಮೇ ೧೩: ಸೋಮವಾರಪೇಟೆ ಭಾರತೀಯ ಜನತಾ ಪಕ್ಷದ ಮಂಡಲ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ ಮಹಿಳಾ ಸಮಾಜದಲ್ಲಿ ನಡೆಯಿತು.

ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ರಾಜ್ಯಾಧ್ಯಕ್ಷ ನೆಲ ನರೇಂದ್ರಬಾಬು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಅದರಂತೆ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಮಂಡಲ ಒಬಿಸಿ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಒಬಿಸಿ ವಿಭಾಗದ ಕಾರ್ಯಕರ್ತರನ್ನು ಒಗ್ಗೂಡಿಸುವುದು ಸರಕಾರದಿಂದ ದೊರೆಯುವ ಸವಲತ್ತುಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವುದು ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಬೇಕು. ಅಲ್ಲದೆ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಒಬಿಸಿ ಮಂಡಲ ಅಧ್ಯಕ್ಷ ಗಂಗಾಧರ್ ವಹಿಸಿದ್ದರು. ಸಭೆಯ ವೇದಿಕೆಯಲ್ಲಿ ಒಬಿಸಿ ರಾಜ್ಯ ಕಾರ್ಯದರ್ಶಿಗಳಾದ ವಿವೇಕಾನಂದ ಡಬ್ಬಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀನಿವಾಸಮೂರ್ತಿ, ರಾಜ್ಯ ಕಾರ್ಯದರ್ಶಿಗಳು ಹಾಗೂ ಕೊಡಗು ದಕ್ಷಿಣ ಕನ್ನಡ ಒಬಿಸಿ ಪ್ರಭಾರಿಗಳಾದ ವಿಠಲ್ ಪೂಜಾರಿ, ಒಬಿಸಿ ಜಿಲ್ಲಾಧ್ಯಕ್ಷ ಆನಂದ ರಘು, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್, ಮಂಡಲ ಉಸ್ತುವಾರಿಯಾದ ಮೋಹನ್, ಒಬಿಸಿ ಜಿಲ್ಲಾ ಕಾರ್ಯದರ್ಶಿ ಸತೀಶ್‌ಕುಂದರ್, ಒಬಿಸಿ ಮಂಡಲ ಕಾರ್ಯದರ್ಶಿ ಸುನಿಲ್, ಉಪಾಧ್ಯಕ್ಷರಾದ ಸುಮೇಶ್, ಸತೀಶ್, ಸೋಮವಾರಪೇಟೆ ನಗರ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.

ಒಬಿಸಿ ಮಂಡಲ ಕಾರ್ಯಕಾರಣಿ ಸದಸ್ಯರುಗಳು ಹಾಗೂ ಒಬಿಸಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.